Thursday, August 21, 2025
Google search engine
HomeUncategorizedಬಂಟ್ವಾಳದಲ್ಲಿ ಬೈಕ್ ಅಪಘಾತ; ರಂಗಭೂಮಿ ಕಲಾವಿದ ಗೌತಮ್ ಸಾವು

ಬಂಟ್ವಾಳದಲ್ಲಿ ಬೈಕ್ ಅಪಘಾತ; ರಂಗಭೂಮಿ ಕಲಾವಿದ ಗೌತಮ್ ಸಾವು

ಬಂಟ್ವಾಳ: ರಂಗಭೂಮಿ ಕಲಾವಿದ ಗೌತಮ್ (26) ಪುಂಜಾಲಕಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರದೊಟ್ಟು ನಿವಾಸಿಯಾಗಿದ್ದಾರೆ. ಮೂಡುಬಿದಿರೆ ಪಿಂಗಾರ ಕಲಾವಿದರ ತಂಡದ ಕಲಾವಿದನಾಗಿದ್ದಾನೆ.

ಗೌತಮ್ ಅವರು ಡಿ.30ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮನೆಗೆ ತೆರಳುತ್ತಿದ್ದರು. ಇನ್ನೇನು ಅವರ ಸ್ವಲ್ಪವೇ ದೂರದಲ್ಲಿ ಮನೆಯನ್ನು ತಲುಪುವವರಿದ್ದರು. ಆದರೆ, ವಿಧಿ ಆಟವೇ ಬೇರೆ ಇತ್ತು. ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ.

ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮನೆಗೆ ಹಿಂದಿರುಗುವಾಗ ಅವರ ಮನೆ ಸಮೀಪದ ಮರಕ್ಕೆ ಬೈಕ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಗೌತಮ್‌ ಅವರು ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆ ಎಕ್ಸ್‌ಪೋ ಸ್ಯಾಟ್‌ ಉಪಗ್ರಹ ಉಡಾವಣೆ: ಇಸ್ರೋ ವಿಜ್ಞಾನಿಗಳಿಂದ ತಿರುಪತಿ ತಿಮ್ಮಪ್ಪನ ದರ್ಶನ!

ಅವಿವಾಹಿತರಾಗಿದ್ದ ಗೌತಮ್ ಅವರು ಬಿ.ಸಿ.ರೋಡ್ ನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜತೆಗೆ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು. ಹೀಗಾಗಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಾಯಿ, ಸಹೋದರ ಮತ್ತು ಸಹೋದರಿ ಇದ್ದಾರೆ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments