Saturday, August 30, 2025
HomeUncategorizedಮರದ ತುಂಡನ್ನ ಕತ್ತಿ ತರ ಮಾಡಿ, ಬಣ್ಣ ಹಾಕಿ, ಅದನ್ನ ಪ್ರದರ್ಶನ ಮಾಡಿದ್ದಾರೆ ಅಷ್ಟೇ :...

ಮರದ ತುಂಡನ್ನ ಕತ್ತಿ ತರ ಮಾಡಿ, ಬಣ್ಣ ಹಾಕಿ, ಅದನ್ನ ಪ್ರದರ್ಶನ ಮಾಡಿದ್ದಾರೆ ಅಷ್ಟೇ : ಪರಮೇಶ್ವರ್

ತುಮಕೂರು : ನಿಜವಾದ ತಲ್ವಾರ್ ಎಂಬ ಪ್ರಶ್ನೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಗರಂ ಆದರು. ನಿಜವಾದ ತಲ್ವಾರ್ ಅಂತ ಹೇಳ್ತಿದ್ದಾರೆ. ನಾನು ಅದನ್ನು ಹೋಗಿ ನೋಡಿದ್ನಾ? ನಿಜವಾದ ತಲ್ವಾರ್ ಇರಬಹುದು. ಆದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ‌ ಎಂದು ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಚಾರ ಮಾಡಿದೆ. ಮರದ ತುಂಡನ್ನು ಕತ್ತಿ ತರ ಮಾಡಿ, ಬಣ್ಣ ಹಾಕಿ, ಅದನ್ನು ಪ್ರದರ್ಶನ ಮಾಡಿದ್ದಾರೆ ಅಂತ ಎಸ್​ಪಿ ನನಗೆ ಮಾಹಿತಿ ಕೊಟ್ಟಿದ್ದಾರೆ. ಅಂತಹದ್ದು ಏನು ನಡೆದಿಲ್ಲ ಎಂದು ಡ್ಯಾಮೇಕ್ ಕಂಟ್ರೋಲ್​ಗೆ ಮುಂದಾದರು.

ಯಾರಿಗೋ ಚಾಕು ಹಾಕಿದ್ರು, ಯಾರಿಗೋ ಕತ್ತಿಯಲ್ಲಿ ಹೊಡೆದಿದ್ದು. ಇಂತಹದ್ದನೆಲ್ಲಾ ಮಾತನಾಡಬಾರದು. ಮೊದಲೇ ನಾವು ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಿದ್ವಿ. ಮೊದಲೆಲ್ಲಾ ಶಿವಮೊಗ್ಗದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಗೊತ್ತಿದೆ. ಹಾಗಾಗಿ, ಪ್ರೀಕಾಷನ್ ತಗೊಂಡಿದ್ವಿ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದರು.

ಅವ್ರು ಕಲ್ಲು ಹೊಡೆದಿದ್ದಾರೆ ಅಂತ ಇವ್ರು ಹೊಡೆದಿದ್ದಾರೆ

ಕಲ್ಲು ತೂರಾಟ ಮಾಡಿರುವ 50 ಜನರನ್ನು ಅರೆಸ್ಟ್ ಮಾಡಿದ್ದೇವೆ. ಸಿಸಿಟಿವಿಯಲ್ಲಿ ಕಂಡವರನ್ನು ವಿಚಾರಣೆ ಮಾಡುತ್ತಿದ್ದೇವೆ. ಯಾವುದೇ ಗಲಭೆ ಈಗ ಇಲ್ಲ. ನಿನ್ನೆಯೇ ಎಲ್ಲವೂ ಮುಗಿದು ಹೋಗಿದೆ. ಹೊರರಾಜ್ಯದಿಂದ ಹೊರ ಜಿಲ್ಲೆಯಿಂದಲೂ ಯಾರು ಬಂದಿಲ್ಲ. ಯಾರು ಹೊರಗಡೆಯಿಂದ ಬರಬಾರದು ಅಂತ ಸ್ಕ್ರೀನಿಂಗ್ ಮಾಡಿದ್ದಿವಿ. ಬೇಕಂತ ಆಗಿರಬಹುದು, ಅವರು ಕಲ್ಲು ಹೊಡೆದಿದ್ದಾರೆ ಅಂತ ಇವರು ಕಲ್ಲು ಹೊಡೆದಿದ್ದಾರೆ. ಸೆಲೆಕ್ಟಿವ್ ಆಗಿ ಅಂತ ಪೊಲೀಸರಿಗೆ ಏನು ಹೊಡೆದಿಲ್ಲ. ಸಾಮೂಹಿಕ ಕಲ್ಲು ತೂರಿದಾಗ ಪೊಲೀಸರ ಮೇಲೆ ಕಲ್ಲು ಬಿದ್ದಿದೆ. ಅವರು, ಇವರು ಅಂತ ನಿಮಗೆ ವಿವರಿಸುವ ಅಗತ್ಯತೆ ಇಲ್ಲ ತಿಳಿದುಕೊಳ್ಳಿ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments