Saturday, August 23, 2025
Google search engine
HomeUncategorizedNew Parliament Building Inauguration: ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

New Parliament Building Inauguration: ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ನೂತನ ಸಂಸತ್​ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಇಂದು ನೆರವೇರಿಸಿದ್ದಾರೆ.

ಹೌದು,ನೂತನ ಸಂಸತ್​ನಲ್ಲಿ ‘ಸೆಂಗೋಲ್’ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರಧಾನಿ ಮೋದಿ ರಾಜದಂಡವನ್ನ ಪ್ರತಿಷ್ಠಾಪಿಸಿದ್ದಾರೆ. ಲೋಕಸಭೆ ಸ್ಫಿಕರ್ ಆಸನದ ಪಕ್ಕದಲ್ಲಿ ಪ್ರತಿಷ್ಠಾಪನೆಯಾಗಿದ್ದು, ಸೆಂಗೋಲ್​​ ಪ್ರತಿಷ್ಠಾಪನೆ ಬಳಿಕ ಪೂಜೆ, ಪುಷ್ಪಾರ್ಚನೆ ಮಾಡಲಾಗಿದ್ದು, ಪ್ರಧಾನಿ ಮೋದಿ ಹಾಗೂ ಓಂ ಬಿರ್ಲಾರಿಂದ ಪುಷ್ಪಾರ್ಚನೆ ಮಾಡಿದ್ದಾರೆ

ನೂತನ ಸಂಸತ್​​ ಭವನದಲ್ಲಿ ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸಿದ್ದು, ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್​ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್​ ಸಿಂಗ್​, ಪ್ರಲ್ಹಾದ್​​ ಜೋಶಿ, ಎಸ್​​. ಜೈಶಂಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಭಾಗಿಯಾಗಿದ್ದರು. ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು ಸಂತರು ಪಾಲ್ಗೊಂಡಿದ್ರು. ಸಂಸತ್​ ಭವನದ ಕಟ್ಟಡ ನಿರ್ಮಿಸಿದ ಕಾರ್ಮಿಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸನ್ಮಾನ ಮಾಡಿದ್ದಾರೆ.

ಸೆಂಟ್ರಲ್ ವಿಸ್ತಾ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ಸ್ವತಂತ್ರ ಭಾರತಕ್ಕೆ ಹೊಸ ಸಂಸತ್ ಭವನ ಬೇಕು ಅಂತಾ ಪಣ ತೊಟ್ಟಿದ್ದ ಮೋದಿ 2020ರಲ್ಲಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ರು. ಇಂದಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿ 9 ವರ್ಷ ವಾಗ್ತಿದ್ದು, ಅದೇ ದಿನ ನೂತನ ಸಂಸತ್​ ಭವನವನ್ನ ಲೋಕಾಪರ್ಣೆಗೊಳಿಸಲಿದ್ದಾರೆ.

ನೂತನ ಸಂಸತ್ ಭವನದ ವಿಶೇಷತೆ 

ನೂತನ ಸಂಸತ್ ಭವನ  ಹಲವು ವಿಶೇಷತೆಗಳನ್ನು ಒಳಗೊಂಡಿದೆ. ತ್ರಿಕೋನ ಆಕಾರದ 4 ಅಂತಸ್ತಿನ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್ ಇದ್ದು, ಕಟ್ಟಡದಲ್ಲಿ 1,280 ಸಂಸದರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಎಂಬ 3 ಪ್ರಮುಖ ದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ. ಸಂಸದರು, ವಿಐಪಿ ಸಂದರ್ಶಕರು, ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರ ನಿರ್ಮಿಸಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments