Saturday, August 23, 2025
Google search engine
HomeUncategorizedನಮ್ಮ ಹುಡುಗರನ್ನು ಮುಟ್ಟಿದ್ರೆ 'ನಾನು ಮೆಂಟಲ್ ಆಗ್ತೀನಿ'.. 'ಭೀಮನ ಸೈಕ್ ಡೈಲಾಗ್'ಗೆ ಸಿನಿ ದುನಿಯಾ ಸ್ಟನ್

ನಮ್ಮ ಹುಡುಗರನ್ನು ಮುಟ್ಟಿದ್ರೆ ‘ನಾನು ಮೆಂಟಲ್ ಆಗ್ತೀನಿ’.. ‘ಭೀಮನ ಸೈಕ್ ಡೈಲಾಗ್’ಗೆ ಸಿನಿ ದುನಿಯಾ ಸ್ಟನ್

ಬೆಂಗಳೂರು : ವೀರಸಿಂಹಾರೆಡ್ಡಿ ಜೊತೆ ತೊಡೆ ತಟ್ಟಿ ಬಂದಂತಹ ಸ್ಯಾಂಡಲ್ ವುಡ್ ಸಲಗ, ಇದೀಗ ಭೀಮನಾಗಿ ತಮ್ಮ ದುನಿಯಾನ ಮತ್ತಷ್ಟು ದೊಡ್ಡದಾಗಿಸಿಕೊಳ್ತಿದ್ದಾರೆ. ಶೂಟಿಂಗ್ ಜೊತೆಗೆ ಡಬ್ಬಿಂಗ್ ಕಾರ್ಯಗಳಲ್ಲೂ ತೊಡಗಿಸಿಕೊಂಡಿರೋ ದುನಿಯಾ ವಿಜಯ್, ಸದ್ಯ ಹೈ ವೋಲ್ಟೇಜ್ ಮಾಸ್ ಡೈಲಾಗ್​ನಿಂದ ಭೀಮನ ಅಸಲಿ ಖದರ್ ಬಿಟ್ಟುಕೊಟ್ಟಿದ್ದಾರೆ.

ಸಲಗ ಚಿತ್ರದಿಂದ ಫೀನಿಕ್ಸ್​​ನಂತೆ ಎದ್ದು ಬಂದ ದುನಿಯಾ ವಿಜಯ್, ತನ್ನ ಸಿನಿದುನಿಯಾ ಇಷ್ಟಕ್ಕೇ ಮುಗಿದಿಲ್ಲ, ಮತ್ತಷ್ಟು ಆಳ ಹಾಗೂ ಅಗಲವಾಗಿದೆ ಅನ್ನೋದನ್ನು ಸಾಬೀತು ಮಾಡಿದ್ದರು. ತಮಗೆ ತಾವೇ ಫ್ರೇಮ್ ಇಟ್ಟುಕೊಂಡು, ಌಕ್ಷನ್ ಕಟ್ ಹೇಳೋ ಮೂಲಕ ಬೆಸ್ಟ್ ಡೈರೆಕ್ಟರ್ ಕೂಡ ಅನಿಸಿಕೊಂಡರು. ಕೆಪಿ ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದಲ್ಲಿ ಡಾನ್ ಆಗಿ ಅಬ್ಬರಿಸಿದ ದುನಿಯಾ ವಿಜಯ್, ನಟನೆ ಜೊತೆ ನಿರ್ದೇಶನಕ್ಕೂ ಸೈ ಅಂದರು.

ಇದೀಗ ಸಲಗ ಬಳಿಕ ಮತ್ತೊಮ್ಮೆ ನಟಿಸಿ, ನಿರ್ದೇಶಿಸುತ್ತಿರೋ ಸಿನಿಮಾ ಭೀಮ, ಆರಂಭದಿಂದಲೂ ಟ್ರೆಂಡಿಂಗ್​ನಲ್ಲಿದೆ. ಕಾರಣ ಚಿತ್ರದ ಟೈಟಲ್, ತಾರಾಗಣ ಹಾಗೂ ಮೇಕಿಂಗ್. ಸದಾ ಹೊಸತನಕ್ಕೆ ಹಾತೊರೆಯೋ ದುನಿಯಾ ವಿಜಯ್, ತನ್ನ ಜೀವನಾನುಭವಗಳನ್ನೇ ದೊಡ್ಡ ಪರದೆ ಮೇಲೆ ಪ್ರೇಕ್ಷಕರ ಮುಂದೆ ಇಡ್ತಿದ್ದಾರೆ. ಅದರಲ್ಲೂ ಕಣ್ಣಾರೆ ಕಂಡಂತಹ ಸಾಕಷ್ಟು ವಿಷಯಗಳನ್ನು ಹೇಳಿಕೊಳ್ಳೋಕೆ ಅವರಿಗೆ ಸಿನಿಮಾ ಒಂದು ಮಾಧ್ಯಮ ಕೂಡ ಆಗಿದೆ.

ವಿಜಿ ಡೈಲಾಗ್​ಗೆ ಸಿನಿದುನಿಯಾ ಸ್ಟನ್

ಈ ಬಾರಿ ಕೂಡ ಒಂದಷ್ಟು ಸ್ಲಂ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿರೋ ಭೀಮ, ಏನನ್ನ ಹೇಳಲು ಹೊರಟಿದ್ದಾರೆ ಅನ್ನೋದೇ ಸಸ್ಪೆನ್ಸ್. ಆದರೆ, ಬಹುತೇಕ ಶೂಟಿಂಗ್ ಮುಗಿಸಿ, ಡಬ್ಬಿಂಗ್ ಕಾರ್ಯಗಳನ್ನು ಶುರು ಮಾಡಿರೋ ದುನಿಯಾ ವಿಜಯ್, ತಮ್ಮದೇ ಪಾತ್ರಕ್ಕೆ ವಾಯ್ಸ್ ಡಬ್ ಮಾಡ್ತಿದ್ದಾರೆ. ಸದ್ಯ ಅದರ ಒಂದು ವಿಡಿಯೋ ರಿವೀಲ್ ಆಗಿದ್ದು, ಆ ಹೈ ವೋಲ್ಟೇಜ್ ಮಾಸ್ ಡೈಲಾಗ್​ಗೆ ಇಡೀ ಸಿನಿದುನಿಯಾ ಸ್ಟನ್ ಆಗಿದೆ.

ಇದನ್ನೂ ಓದಿ : ಮಾರ್ಟಿನ್ ಸಾಂಗ್ಸ್ ಶೂಟ್ ಗಾಗಿ ಧ್ರುವ ‘ಹೇರ್ ಸ್ಟೈಲ್, ಮೈಕಟ್ಟು’ ಚೇಂಜ್

ಭೀಮನಿಗೆ ‘ಮಾಸ್ತಿ ಮಾಸ್’ ಡೈಲಾಗ್ಸ್​​

ನಮ್ಮ ಹುಡುಗರನ್ನು ಮುಟ್ಟಿದ್ರೆ ನಾನು ಮೆಂಟಲ್ ಆಗ್ತೀನಿ ಅನ್ನೋ ಭೀಮ, ನಾನು ಮೆಂಟಲ್ ಆದ್ರೆ ನಾಳೆ ನೀನು ಕ್ಯಾಲೆಂಡರ್ ಡೇಟ್ ನೋಡಲ್ಲ ಅನ್ನೋ ಡೈಲಾಗ್​ನಿಂದ ಆತನಲ್ಲಿರೋ ಆ ಆಕ್ರೋಶ ಎಂಥದ್ದು ಅನ್ನೋದಕ್ಕೆ ಸಾಕ್ಷಿಯಾಗಿದೆ. ಅಂದಹಾಗೆ ಈ ಕಲ್ಟ್ ಡೈಲಾಗ್​ಗಳನ್ನು ಬರೆದಿರೋದು ದುನಿಯಾ ವಿಜಯ್​ರ ಫೇವರಿಟ್ ರೈಟರ್ ಮಾಸ್ತಿ. ಮಾಸ್ತಿ ಮಾಸ್ ಡೈಲಾಗ್ಸ್​​ನಿಂದ ಭೀಮನ ಅಬ್ಬರ ಹಾಗೂ ಆರ್ಭಟ ಮತ್ತಷ್ಟು ಹೆಚ್ಚಿದೆ.

ವಿಜಿ ಅಡ್ಡಾದಲ್ಲಿ ಹುಬ್ಬೇರಿಸೋ ಪ್ರತಿಭೆಗಳು

ಸಿನಿಮಾದಲ್ಲಿ ಸಾಕಷ್ಟು ಮಂದಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ ದುನಿಯಾ ವಿಜಯ್. ಅದರಲ್ಲೂ ರಂಗಭೂಮಿ ಕಲಾವಿದರೇ ಹೆಚ್ಚಾಗಿರೋ ಈ ಸಿನಿಮಾದಿಂದ ಒಂದಷ್ಟು ಹೈಲಿ ಟ್ಯಾಲೆಂಟೆಡ್ ಸಿನಿಮೋತ್ಸಾಹಿಗಳನ್ನ ಪರಿಚಯಿಸ್ತಿದ್ದಾರೆ. ಡ್ರ್ಯಾಗನ್ ಮಂಜು, ಪ್ರಿಯಾ ಶಟಮರ್ಷನ್ ಸೇರಿದಂತೆ ನೋಡುಗರ ಹುಬ್ಬೇರಿಸೋ ಪ್ರತಿಭೆಗಳು ಲೆಕ್ಕವಿಲ್ಲದಷ್ಟಿದ್ದಾರೆ.

ಸದ್ಯ ಭೀಮ ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆಯೋ ಮುನ್ಸೂಚನೆ ನೀಡಿದೆ. ಶಿವಸೇನ ಸಿನಿಮಾಟೋಗ್ರಫಿ, ಚರಣ್ ರಾಜ್ ಮ್ಯೂಸಿಕ್ ಭೀಮನ ಸ್ಟ್ರೆಂಥ್ ಹೆಚ್ಚಿಸಲಿದೆ. ಜಗದೀಶ್ ಹಾಗೂ ಕೃಷ್ಣ ಸಾರ್ಥಕ್ ನಿರ್ಮಾಣದ ಭೀಮ ಸದ್ಯದಲ್ಲೇ ಬಿಗ್ ಅಪ್ಡೇಟ್ ನೀಡಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments