ಹಾಸನ: ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಇಂದು ಹಾಸನದಲ್ಲಿ ಮೊಮ್ಮಗನ ಪರ ಪ್ರಚಾರ ನಡೆಸಲಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ದೇವೇಗೌಡ ಅವರು ಪ್ರಚಾರ ನಡೆಸಲಿದ್ದಾರೆ. ಬೇಲೂರು ತಾಲೂಕಿನ ವ್ಯಾಪ್ತಿಯಲ್ಲಿ ದೇವೇಗೌಡರು ಪ್ರಚಾರ ನಡೆಸಲಿದ್ದು, ಮೊಮ್ಮಗನ ಪರ ಮತ ಯಾಚಿಸಲಿದ್ದಾರೆ. ಹಗರೆ, ಇಬ್ಬೀಡು, ಗಬ್ಬಲಗೂಡು ಗಡಿ, ಗೆಂಡೇಹಳ್ಳಿ, ಚೀಕನಹಳ್ಳಿ, ನವೀಲಹಳ್ಳಿ, ಸನ್ಯಾಸಿಹಳ್ಳಿ, ಬಿಕ್ಕೋಡು, ಅರೇಹಳ್ಳಿಯಲ್ಲಿ ಪ್ರದೇಶದಲ್ಲಿ ಮಾಜಿ ಪ್ರಧಾನಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ನಿನ್ನೆಯಷ್ಟೇ ದೇವೇಗೌಡರು, ಸಿಎಂ ಕುಮಾರಸ್ವಾಮಿ ಅವರು ಕುಟುಂಬ ಸಮೇತ ಓಂಕಾರೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದರು.
ಹಾಸನದಲ್ಲಿ ಮೊಮ್ಮಗನ ಪರ ಮಾಜಿ ಪ್ರಧಾನಿ ಪ್ರಚಾರ
RELATED ARTICLES