ಅನೇಕರು ಕನ್ನಡ ಸಿನಿಮಾ ರಂಗಕ್ಕೆ ಬೇರೆ ಬೇರೆ ಕ್ಷೇತ್ರದಿಂದ ಕನಸು ಹೊತ್ತು ಬಂದು ತಮ್ಮದೆಯಾದ ಕೊಡುಗೆಯನ್ನ ನೀಡುತ್ತಾ ಬಂದಿದ್ದಾರೆ. ಅದ್ರಲ್ಲೂ ಐಟಿ ಜಗತ್ತಿನಿಂದ ವಿವಿಧ ಪ್ರತಿಭವಂತ ಕಲಾವಿದರು ತಂತ್ರಜ್ಞರು ಬಂದು ಛಾಪನ್ನ ಕಲೆಯ ಹೊನಪನ್ನ ನೀಡಿದ್ದಾರೆ. ಈಗ ಅದೇ ಸಾಲಿಗೆ ಸೇರೋ ಸಿನಿಮಾ ತಂಡವಾಗಲಿದೆ ‘ಕರಿಕಾಡ’.
ಕರಿಕಾಡ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು. ಖ್ಯಾತ ನಿರ್ದೇಶಕ ಸಂತೋಷ್ ಅನಂದ್ ರಾಮ್ರವರು ಕರಿಕಾಡ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಹೊಸ ತಂಡದ ಹೊಸ ಬಗೆಯ ಸಾಹಸಮಯ ದೃಶ್ಯಕಾವ್ಯಕ್ಕೆ ಸಂತೋಷ್ ಶುಭಹಾರೈಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರಿಕಾಡ ಸಿನಿಮಾದಲ್ಲಿ ಅಭಿನಯಿಸಿರೋ ಕಾಮಿಡಿ ನಟ ದಿ.ರಾಕೇಶ್ ಪೂಜಾರಿ ಹಾಗೂ ಆರ್ಸಿಬಿ ಸಂಭ್ರಮದ ದುರಂತದಲ್ಲಿ ಜೀವತೆತ್ತರವರಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಇದನ್ನೂ ಓದಿ :ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್
ಇನ್ನು ‘ಕರಿಕಾಡ’ ಸಿನಿಮಾ ಬಗ್ಗೆ ಹೇಳುವುದಾದರೆ. ಇದೊಂದು ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಈ ಸಿನಿಮಾ ಮೂಲಕ ಬಣ್ಣದ ಲೋಕದ ಕನಸು ಹೊತ್ತು ನೂತನ ನಟನಾಗಿ ಕಾಡ ನಟರಾಜ್ ಪ್ರೇಕ್ಷಕರ ಆರ್ಶಿವಾದ ಪಡೆಯಲು ತೆರೆ ಮೇಲೆ ಬರುತ್ತಿದ್ದಾರೆ. ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕೆಲಸ ಮಾಡ್ತಿರೋ ಕಾಡ ನಟರಾಜ್ ವಾರದಲ್ಲಿ 5 ದಿನ ಕೆಲಸ ಮಾಡಿ, ಇನ್ನೇರೆಡು ದಿನ ಶೂಟಿಂಗ್ನಲ್ಲಿ ಭಾಗವಹಿಸಿ ಕನಸಿನ ಗುರಿಯ ಕಡೆ ಧ್ಯಾನ ಮಾಡಿದ್ದಾರೆ. ಇದನ್ನೂ ಓದಿ :ನ್ಯಾಯಾಲಯದ ಆದೇಶ ಪಾಲಿಸಿ ಮತ್ತೆ ಜೈಲಿಗೆ ಹೋಗುತ್ತೇನೆ; ವಿನಯ್ ಕುಲಕರ್ಣಿ
ಇನ್ನೂ ಈ ಸಿನಿಮಾದ ನಿರ್ದೇಶಕರು ಗಿಲ್ಲಿ ವೆಂಕಟೇಶ್ ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ ಮತ್ತು ಹುಲಿಬೇಟೆ ಅನ್ನೋ ಸಿನಿಮಾದಲ್ಲಿ ಸಹ ನಿರ್ದೇಶನದ ಜೊತೆಗೆ ನೆಗೆಟಿವ್ ರೋಲ್ ಕೂಡ ಮಾಡಿದ್ದಾರೆ. ‘ತಾಳಟ್ಟಿ’ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿರುವ ಗಿಲ್ಲಿ ವೆಂಕಟೇಶ್ ಅವರ ಮಹತ್ವಕಾಂಕ್ಷೆಯ ಸಿನಿಮಾ ಕರಿಕಾಡ ಮೂಲಕ ಚಿತ್ರಕತೆ , ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿದ್ದಾರೆ.
ಕರಿಕಾದ ಸಿನಿಮಾ ದೊಡ್ಡ ತಾರಾಗಣವನ್ನೆ ಹೊಂದಿದ್ದು, ನಾಯಕ ನಟನಾಗಿ ಕಾಡ ನಟರಾಜ್, ನಟಿ ನಿರೀಕ್ಷಾ ಶೆಟ್ಟಿ, ಪೋಷಕ ಹಾಗೂ ಹಾಸ್ಯಕಲಾವಿದರಾಗಿ ಮಂಜು ಸ್ವಾಮಿ, ಯಶ್ ಶೆಟ್ಟಿ, ಗೋವಿಂದ ಗೌಡ, ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ, ದಿ.ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭ, ಕರಿಸುಬ್ಬು, ಗಿರಿ , ಬಾಲರಾಜವಾಡಿ, ಮಾಸ್ಟರ್ ಆರ್ಯನ್ ಹಾಗೂ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ :ಬ್ಲಾಕ್ಮೇಲ್ ಮಾಡಿ ಅಪ್ರಾಪ್ತ ಬಾಲಕಿ ಮೇಲೆ ಮೂವರಿಂದ ಅತ್ಯಾಚಾರ
‘ಕರಿಕಾಡ’ ಚಿತ್ರಕ್ಕೆ ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಅವರುಗಳ ರಾಗ ಸಂಯೋಜನೆ ಇದೆ. ಶಶಾಂಕ್ ಶೇಷಾಗರಿ ಅವರು ರಾಗ ಸಂಯೋಜನೆ ಜೊತೆಗೆ ಜಬರ್ದಸ್ತ್ ಹಿನ್ನಲೆ ಸಂಗೀತವನ್ನ ನೀಡಿದ್ದಾರೆ. ಕ್ಯಾಮರಾ ಸಾರಥಿಯಾಗಿ ಜೀವನ್ ಗೌಡ ಕೆಲಸ ಮಾಡಿದ್ದಾರೆ. ದೀಪಕ್ ಸಿ.ಎಸ್ ಸಂಕಲನವಿದೆ.
ಚಿಕ್ಕಮಗಳೂರು , ಕಳಸ , ಕುದುರೆ ಮುಖ , ಮಂಡ್ಯ , ಚೆನ್ನರಾಯ ಪಟ್ನ ಸೇರಿದಂತೆ ರಾಜ್ಯದ ಅನೇಕ ರಮಣಿ ಸ್ಥಳಗಳಲ್ಲಿ ‘ಕರಿಕಾಡ’ ಚಿತ್ರೀಕರಣವಾಗಿದೆ. ಸದ್ಯಕ್ಕೆ ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೇಳೆಯುವ ಪ್ರಯತ್ನದಲ್ಲಿ ಚಿತ್ರ ತಂಡವಿದೆ