ಚಿಕ್ಕೋಡಿ: ರಾಜ್ಯದಲ್ಲಿ ಬಕ್ರೀದ್ ಸಂಭ್ರಮ ಮನೆ ಮಾಡಿದ್ದು. ಎಲ್ಲಡೆ ಕುರಿಗಳ ಮಾರಾಟ ಜೋರಾಗಿದೆ. ಸಾಮಾನ್ಯವಾಗಿ ಬಕ್ರೀದ್ ಸಮಯದಲ್ಲಿ ಐದರಿಂದ ಐವತ್ತು ಸಾವಿರ ರೂಪಾಯಿವರೆಗೆ ಮೇಕೆ ಮಾರಾಟ ಆಗುವದು ಸಾಮಾನ್ಯ. ಆದರೆ ಇಲ್ಲೇರೆಡು ಮೇಕೆಗಳು 5 ಲಕ್ಷದ 10 ಸಾವಿರ ರೂಪಾಯಿಗಳಿಗೆ ಮಾರಾಟ ಆಗಿದ್ದು, ಈ ಘಟನೆ ಎಲ್ಲರ ಹೆಬ್ಬೇರಿಸುವಂತಾಗಿದೆ.
ಹೌದು… ಚಿಕ್ಕೋಡಿ ತಾಲೂಕಿನ ಇಟ್ನಾಳ ಗ್ರಾಮದ ರೈತ ಶಿವಪ್ಪ ಶೆಂಡೂರೆ ಹಾಗೂ ಶಾಂತಾ ಶೆಂಡೂರೆ ದಂಪತಿ ಸಾಕಿದ ಪಂಜಾಬ್ ಮೂಲದ ಬೀಟಲ್ ತಳಿಯ ಎರಡು ಮೇಕೆ (ಹೋತ) ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ₹ 5.10 ಲಕ್ಷಕ್ಕೆ ಮಾರಾಟವಾಗಿವೆ. ಒಂದು ಮೇಕೆ ₹ 3 ಲಕ್ಷಕ್ಕೆ ಹಾಗೂ ಇನ್ನೊಂದು ಮೇಕೆ ₹ 2.10 ಲಕ್ಷಕ್ಕೆ ಮಾರಾಟವಾಗಿವೆ. ಎರಡೂ ಮೇಕೆಗಳನ್ನು ವಿಜಯಪುರ ಮೂಲದ ಮೋಜಿಮ್ ಮತ್ತು ಆಸೀಫ್ ವ್ಯಾಪಾರಿಗಳು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕಳೆದ 15 ದಿನಗಳ ಹಿಂದೆ ಮುಂಗಡ ಹಣ ನೀಡಿ ಕಾಯ್ದಿರಿಸಿದ್ದರು. ಇದನ್ನೂ ಓದಿ :ಸನ್ಮಾನದ ಅವಶ್ಯಕತೆ ಇತ್ತ, 50 ರೂಪಾಯಿ ಪೇಟ ಹಾಕಿ, ಅವಮಾನ ಮಾಡಿ ಕಳ್ಸಿದ್ದೀರಾ: HD ಕುಮಾರಸ್ವಾಮಿ
ಗುರುವಾರದಂದು ಪೂರ್ಣ ಪ್ರಮಾಣದ ಹಣ ನೀಡಿ ಮೇಕೆಗಳನ್ನು ಖರೀದಿಸಿ ತೆಗೆದುಕೊಂಡು ಹೋದರು. ಮೇಕೆಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಅವುಗಳಿಗೆ ಗುಲಾಲು ಎರಚಿ ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ, ಆರತಿಯನ್ನು ಬೆಳಗಿ ಬೀಳ್ಕೊಡಲಾಯಿತು. ಹಾಗೂ ಅಷ್ಟೊಂದು ಬೆಲೆಗೆ ಮಾರಾಟವಾಗಿದ್ದರಿಂದ ಸಂತಸದಿಂದ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಇದನ್ನೂ ಓದಿ:ಮಗನನ್ನು ಕಳೆದುಕೊಂಡ ಭೂಮಿಕ್ ತಂದೆ ಆಕ್ರಂದನ; ಸಮಾಧಿ ಮೇಲೆ ಬಿದ್ದು ಗೋಳಾಟ