Thursday, August 21, 2025
Google search engine
HomeASTROLOGYಅನೈತಿಕ ಸಂಬಂಧಕ್ಕೆ ಅಡ್ಡಿ; ವಿಷ ಹಾಕಿ ಕುಟುಂಬವನ್ನೇ ಮುಗಿಸಲು ಪ್ಲಾನ್​ ರೂಪಿಸಿದ ಖತರ್ನಾಕ್​ ಪತ್ನಿ

ಅನೈತಿಕ ಸಂಬಂಧಕ್ಕೆ ಅಡ್ಡಿ; ವಿಷ ಹಾಕಿ ಕುಟುಂಬವನ್ನೇ ಮುಗಿಸಲು ಪ್ಲಾನ್​ ರೂಪಿಸಿದ ಖತರ್ನಾಕ್​ ಪತ್ನಿ

ಹಾಸನ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಮತ್ತು ಆತನ ಕುಟುಂಬವನ್ನ ಮುಗಿಸಲು ಪತ್ನಿಯೊಬ್ಬಳು ಖತರ್ನಾಕ್​​ ಪ್ಲಾನ್​ ರೂಪಿಸಿದ್ದು. ಇಡೀ ಕುಟುಂಬಕ್ಕೆ ವಿಷದ ಪಾತ್ರೆ ಹಾಕಿ, ಇದೀಗ ಸಿಕ್ಕಿಬಿದ್ದಿದ್ದಾಳೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು. ತನಿಖೆ ವೇಳೆ ಊಟಕ್ಕೆ ವಿಷ ಹಾಕಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ :ಪ್ರಿಯಕರನೊಂದಿಗೆ ಪತ್ನಿ ಚಕ್ಕಂದ; ಕೊ*ಲೆ ಮಾಡಿ ರುಂಡದೊಂದಿಗೆ ಪೊಲೀಸ್​ ಠಾಣೆಗೆ ಬಂದ ಪತಿ

ಏನಿದು ಘಟನೆ..!

ಹಾಸನದ, ಬೇಲೂರು ತಾಲ್ಲೂಕಿನ, ಕೆರಳರೂ ಗ್ರಾಮದಲ್ಲಿ ಘಟನೆ ನಡೆದಿದ್ದು. ಕಳೆದ 11 ವರ್ಷದ ಹಿಂದೆ ಚೈತ್ರ ಮತ್ತು ಗಜೇಂದ್ರ ಮದುವೆಯಾಗಿದ್ದರು. ಇಬ್ಬರು ಸುಖವಾಗಿಯೇ ಜೀವನ ಸಾಗಿಸುತ್ತಿದ್ದರು, ಇದಕ್ಕೆ ಸಾಕ್ಷಿಯೆಂಬಂತೆ ಮುದ್ದಾರ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಚೈತ್ರ ಕೆರಳೂರಿನ ಪುನೀತ್​ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.

ಈ ಅಕ್ರಮ ಸಂಬಂಧದ ವಿಷಯ ಪತಿಗೆ ತಿಳಿದು, ಜಗಳವಾಗಿತ್ತು. ನಂತರ ಊರಿನ ಹಿರಿಯರು ಸೇರಿಕೊಂಡು ರಾಜೀ ಮಾಡಿಸಿ, ಅಕ್ರಮ ಸಂಬಂಧವನ್ನ ಬಿಡಿಸಿದ್ದರು. ಆದರೆ ಕಳೆದ ಒಂದು ವರ್ಷದಿಂದ ಚೈತ್ರ ತನ್ನ ಹಳೆ ಚಾಳಿಯನ್ನ ಮುಂದುವರಿಸಿದ್ದಳು. ಅದೇ ಗ್ರಾಮದ ಶಿವು ಎಂಬಾತನ ಜೊತೆ ತನ್ನ ಅಕ್ರಮ ಸಂಬಂಧವನ್ನ ಬೆಳೆಸಿದ್ದಳು. ಇದನ್ನೂ ಓದಿ :ಇಂಟಲಿಜೆನ್ಸ್​ ಫೇಲ್​ ಆಗಿದೆ, ಸನ್ಮಾನ ಮಾಡೋ ಅವಶ್ಯಕತೆ ಇರ್ಲಿಲ್ಲ; ರಾಮಲಿಂಗ ರೆಡ್ಡಿ

ಆದರೆ ಈ ವಿಷಯ ಎಲ್ಲಿ ಮನೆಯವರಿಗೆ ತಿಳಿದರೆ ತೊಂದರೆಯಾಗುತ್ತದೋ ಎಂದು ಯೋಚಿಸಿದ್ದ ಚೈತ್ರ ತನ್ನ ಕುಟುಂಬದವರಿಗೆ ಚಟ್ಟ ಕಟ್ಟಲು ಪ್ಲಾನ್​ ರೂಪಸಿದ್ದಳು. ಪತಿ ಗಜೇಂದ್ರ, ಅತ್ತೆ-ಮಾವ ಅಷ್ಟೇ ಅಲ್ಲದೇ ಇಬ್ಬರು ಪುಟಾಣಿ ಮಕ್ಕಳನ್ನು ಸಾಯಿಸಲು ಪ್ಲಾನ್​ ಮಾಡಿದ್ದಳು.

ತನ್ನ ಯೋಜನೆಯಂತೆ ಚೈತ್ರ ಊಟ, ಕಾಫಿಯಲ್ಲಿ ವಿಷದ ಮಾತ್ರೆಗಳನ್ನ ಬೆರೆಸಲು ಶುರು ಮಾಡಿದ್ದಳು. ಇದಕ್ಕೆ ಪ್ರಿಯಕರ ಶಿವುವಿನ ಸಹಾಯ ಪಡೆದಿದ್ದಳು. ಆದರೆ ವಿಷ ಮಿಶ್ರಿತ ಆಹಾರ ಸೇವಿಸಿದ ಕುಟುಂಬಸ್ಥರು ಅನಾರೋಗ್ಯಕ್ಕೆ ಒಳಗಾಗಿದ್ದರು . ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ, ವೈದ್ಯರು ವಿಷ ಸೇರಿರುವ ಕುರಿರು ಮಾಹಿತಿ ನೀಡಿದ್ದರು. ಇದನ್ನೂ ಓದಿ :ಅಂತರ್​ ರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಪಿಯೂಷ್​ ಚಾವ್ಲಾ

ಈ ವೇಳೆ ಪತ್ನಿ ಮೇಲೆ ಅನುಮಾನಗೊಂಡ ಪತಿ ಗಜೇಂದ್ರ, ಪೊಲೀಸ್​ ಠಾಣೆಗೆ ದೂರು ನೀಡಿದ್ದು. ದೂರಿನನ್ವಯ ಮಹಿಳೆ ಚೈತ್ರಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ. ಕೊಲೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು ಇನ್ನಷ್ಟೇ ಹೆಚ್ಚಿನ ಮಾಹಿತಿ ಬೆಳಕಿಗೆ ಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments