Thursday, August 21, 2025
Google search engine
HomeASTROLOGY'ಲಕ್ಷಾಂತರ ಜನರ ಕನಸನ್ನ ನನಸು ಮಾಡಿ'; RCB ಜರ್ಸಿ ತೊಟ್ಟು ವಿಶ್​ ಮಾಡಿದ ಡಿಕೆಶಿ

‘ಲಕ್ಷಾಂತರ ಜನರ ಕನಸನ್ನ ನನಸು ಮಾಡಿ’; RCB ಜರ್ಸಿ ತೊಟ್ಟು ವಿಶ್​ ಮಾಡಿದ ಡಿಕೆಶಿ

ಬೆಂಗಳೂರು : 9 ವರ್ಷಗಳ ಬಳಿಕ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಫೈನಲ್​ಗೆ ತಲುಪಿದ್ದು. ಪಂಜಾಬ್​ ಕಿಂಗ್ಸ್​ ತಂಡವನ್ನು ಮಣಿಸಿ ಕಪ್​ ಎತ್ತಿ ಹಿಡಿಯುವ ಉತ್ಸಾದಲ್ಲಿದೆ. ಆರ್​ಸಿಬಿ ತಂಡಕ್ಕೆ ಎಲ್ಲಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದ್ದು. ಡಿಸಿಎಂ ಡಿಕೆ ಶಿವಕುಮಾರ್​ ಕೂಡ ಆರ್​ಸಿಬಿ ತಂಡದ ಜರ್ಸಿ ಧರಿಸಿ ಕರ್ನಾಟಕ ಸರ್ಕಾರದಿಂದ ಶುಭಾಷಯ ಕೋರಿದ್ದಾರೆ.

ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಡಿಕೆ ಶಿವಕುಮಾರ್​ “ವಿಡಿಯೋದಲ್ಲಿ ಆರ್​ಸಿಬಿ ಜರ್ಸಿ ತೊಟ್ಟು 18 ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇವೆ. ಲಕ್ಷಾಂತರ ಜನರು ಕನಸು ಕಾಣುತ್ತಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ. ಕರ್ನಾಟಕ ನಿಮ್ಮ ಜೊತೆ ಇದೆ. ಟ್ರೋಫಿಯನ್ನ ಗೆದ್ದು ತನ್ನಿ  ಎಂದು ಡಿಕೆ ಶಿವಕುಮಾರ್​ ಶುಭಾಷನ ಕೋರಿದ್ದಾರೆ. ಇದನ್ನೂ ಓದಿ :ನಿಶ್ಚಿತಾರ್ಥ ಮಾಡಿಕೊಳ್ಳಲು ಚಿನ್ನದ ಸರ ಕದ್ದ ಲಾಡ್ಜ್​ ಮ್ಯಾನೇಜರ್​ ಬರ್ಬರ ಕೊ*ಲೆ

ಅತಿರೇಕದ ಸಂಭ್ರಮಚರಣೆಗೆ ಬ್ರೇಕ್​ ಹಾಕಲು ಪೊಲೀಸರು ಸಜ್ಜು..!

ಕನ್ನಡಿಗರ 18 ವರ್ಷಗಳ ತಪಸ್ಸಿನ ಫಲ ಸಿಗುವ ಕಾಲ ಸನಿಹವಾಗಿದ್ದು. ಆರ್​ಸಿಬಿ ಅಭಿಮಾನಿಗಳು ಈಗಾಗಲೇ ಕಪ್​ ಗೆದ್ದಿರುವ ಸಂಭ್ರಮದಲ್ಲಿದ್ದಾರೆ. ಪಂದ್ಯದ ವೇಳೆ ಹಾಗೂ ಆರ್​ಸಿಬಿ ಗೆಲುವಿನ ಬಳಿಕ ಸಂಭ್ರಮಾಚರಣೆ ಹೆಚ್ಚಾಗುವ ಸಾಧ್ಯತೆ ಇದ್ದು. ಸೆಲಬ್ರೇಷನ್​ ಹದ್ದು ಮೀರದಂತೆ ಪೊಲೀಸರು ಸೂಚನೆ ಹೊರಡಿಸಿದ್ದಾರೆ. ಬೆಂಗಳೂರು ಪೊಲೀಸ್​ ಕಮಿಷನರ್​ ಬಿ. ದಯಾನಂದ್ ಈ ಕುರಿತು ಸೂಚನೆ ಹೊರಡಿಸಿದ್ದು. ಸೆಲಬ್ರೆಷನ್​ ವೇಳೆ ಅವಘಡ ಸಂಭವಿಸಿದಂತೆ ಎಲ್ಲಾ ಡಿಸಿಪಿ ಹಾಗೂ ಎಸಿಪಿ ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ :IPLನಿಂದ ರಾಷ್ಟ್ರೀಯತೆ ಬರಲ್ಲ; RCBಗೆ ಶುಭ ಕೋರಲು ಸಿ,ಟಿ ರವಿ ನಕಾರಾ

ಅಭಿಮಾನದ ಹೆಸರಲ್ಲಿ ರಸ್ತೆ ತಡೆಯುವುದು, ಟೈರ್ ಗೆ ಬೆಂಕಿ ಹಚ್ಚುವುದು, ವಾಹನಗಳು ತಡೆಯುವುದು, ಸಾರ್ವಜನಿಕರಿಗೆ ತೊಂದರೆ, ಶಾಂತಿಭಂಗ ಉಂಟು ಮಾಡುವಂತಿಲ್ಲ‌ ಈ ಬಗ್ಗೆ ನಿಗಾ ವಹಿಸಲು ಡಿಸಿಪಿ ಹಾಗೂ ಎಸಿಪಿಗಳಿಗೆ ಕಮೀಷನರ್ ಸೂಚನೆ ನೀಡಿದ್ದಾರೆ. ಎಂ.ಜಿ ರಸ್ತೆ, ಕೋರಮಂಗಲ, ಇಂದಿರಾನಗರ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಹೆಚ್ಚಿನ ನಿಗಾ ವಹಿಸಿದ್ದು. ಅವಧಿ ಮೀರಿ ಪಬ್,‌ ಕ್ಲಬ್, ರೆಸ್ಟೋರೆಂಟ್​ಗಳನ್ನು ತೆರೆಯುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments