ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಅವಾಂತರ ಮತ್ತೆ ಬಯಲಿಗೆ ಬಂದಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಲಿಗಳ ಕಾಟಕ್ಕೆ ಜನರು ರೋಸಿ ಹೋಗಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು. ವಿಕ್ಟೋರಿಯಾ ಆಸ್ಪತ್ರೆಯ ಟೇಬಲ್ ಮೇಲೆ ಇಲಿಯೊಂದು ಬಾಳೆಹಣ್ಣು ಇಟ್ಟಿರುವ ವಿಡಿಯೋ ವೈರಲ್ ಆಗಿದೆ.
ಸರ್ಕಾರಿ ಆಸ್ಪತ್ರೆಗಳು ಎಂದರೆ ಅನೇಕ ಜನರು ಮೂಗು ಮುರಿಯುವುದೇ ಹೆಚ್ಚು. ಅದೇಷ್ಟೆ ಬಡತನವಿದ್ದರು ಸಾಲ ಮಾಡಿಯಾದರೂ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ಜೀವಕ್ಕೆ ಆಪತ್ತು ಬಂದು ಬಿಡುತ್ತದೆ ಎಂಬುದು ಅದೆಷ್ಟೋ ಜನರ ಅಭಿಪ್ರಾಯ. ಆದರೆ ಈ ಅಭಿಪ್ರಾಯ ರೂಪುಗೊಳ್ಳಲು ಕಾರಣ ನಮ್ಮ ಸರ್ಕಾರಿ ಆಸ್ಪತ್ರೆಗಳ ಅವಾಂತರ. ಇದಕ್ಕೆ ಪುಷ್ಟಿ ಕೊಡುವ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ. ಇದನ್ನೂ ಓದಿ :ಅಪ್ರಾಪ್ತ ಬಾಲಕಿಗೆ ಡ್ಯಾನ್ಸ್ ಮಾಸ್ಟರ್ನಿಂದ ಲೈಂಗಿಕ ಕಿರುಕುಳ; ಆರೋಪಿ ಬಂಧನ
ನಗರದ ವಿಕ್ಟೋರಿಯಾ ಆಸ್ಫತ್ರೆಯ, ಸಿ ಬ್ಲಾಕ್ ವಾರ್ಡ್ನಲ್ಲಿ ಈ ದೃಷ್ಯ ಸೆರೆಯಾಗಿದ್ದು. ಬೆಡ್ ಪಕ್ಕದಲ್ಲಿದ್ದ ಟೇಬಲ್ ಮೇಲೆ ಇಟ್ಟಿದ್ದ ಬಾಳೆಹಣ್ಣನ್ನ ಮೂಶಿಕವೊಂದು ತಿಂದಿದೆ. ಅಲ್ಲಿಯೇ ಇದ್ದ ವ್ಯಕ್ತಿ ಈ ದೃಷ್ಯವನ್ನು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದಿದ್ದು. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅನಾರೋಗ್ಯ ಎಂದು ಆಸ್ಪತ್ರೆಗೆ ಬಂದ ರೋಗಿಗಳಿಗೆ ಆಸ್ಪತ್ರೆಯಲ್ಲಿ ರೋಗ ಗುಣವಾಗುವ ಬದಲಿಗೆ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿವೆ. ಇದನ್ನೂ ಓದಿ :ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 36 ಹಸುಗಳ ರಕ್ಷಣೆ