Thursday, August 21, 2025
Google search engine
HomeUncategorizedರಸ್ತೆಯಲ್ಲಿದ್ದ ಮಳೆ ನೀರು ಕಾರಿನ ಮೇಲೆ ಹಾರಿದಕ್ಕೆ ಹಲ್ಲೆ; ಕೈ ಬೆರಳು ಕಚ್ಚಿ ವಿಕೃತಿ

ರಸ್ತೆಯಲ್ಲಿದ್ದ ಮಳೆ ನೀರು ಕಾರಿನ ಮೇಲೆ ಹಾರಿದಕ್ಕೆ ಹಲ್ಲೆ; ಕೈ ಬೆರಳು ಕಚ್ಚಿ ವಿಕೃತಿ

ಬೆಂಗಳೂರು: ಮಳೆ ನೀರನ್ನು ಕಾರಿನ ಮೇಲೆ ಹಾರಿಸಿದ್ದಕ್ಕೆ ಮಾಲೀಕನೊಬ್ಬ, ಮತ್ತೊಬ್ಬ ಕಾರು ಚಾಲಕನ ಬೆರಳು ಕಚ್ಚಿ ವಿಕೃತಿ ಮೆರೆದಿರುವ ಘಟನೆ ನಗರದ ಬೆಂಗಳೂರಿನಲ್ಲಿ ನಡೆದಿದ್ದು. ಘಟನೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ಬೆರಳು ಸಂಪೂರ್ಣ ಹಾನಿಯಾಗಿದೆ. ಗಾಯಾಳುವನ್ನು ಜಯಂತ್​ ಎಂದು ಗುರುತಿಸಲಾಗಿದೆ.

ಮೇ 25ರಂದು ಘಟನೆ ನಡೆದಿದ್ದು. ಜಯಂತ್ ದಂಪತಿ ಮೆಜೆಸ್ಟಿಕ್‌ನಿಂದ ಲುಲು ಮಾಲ್ ಕಡೆ ತೆರಳುತ್ತಿದ್ದರು. ಈ ವೇಳೆ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ನೀರು ಪಕ್ಕದ ಕಾರಿಗೆ ತಾಗಿದೆ. ಇದನ್ನು ಕಂಡ ಮಾಲೀಕ ಕೂಡಲೇ ಕಾರನ್ನು ಅಡ್ಡ ಹಾಕಿ, ಜಯಂತ್‌ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಕೊನೆಗೆ ಜಯಂತ್ ಆತನಿಗೆ ಕ್ಷಮೆ ಕೇಳಿ ಮುಂದೆ ಹೋಗಿದ್ದಾರೆ. ಇದನ್ನೂ ಓದಿ :ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋದು ಸುಳ್ಳು; ಕಮಲ್ ಹಾಸನ್​ ವಿರುದ್ದ ಚೇತನ್​ ಅಹಿಂಸಾ ವಾಗ್ದಾಳಿ

ಆದರೂ ಬಿಡದೇ ಕಾರು ಮಾಲೀಕ ಮೆಜೆಸ್ಟಿಕ್ ಅಂಡರ್‌ಪಾಸ್‌ನಿಂದ ಲುಲು ಮಾಲ್ ಅಂಡರ್‌ಪಾಸ್‌ವರೆಗೂ ಹಿಂಬಾಲಿಸಿಕೊಂಡು ಜಯಂತ್ ಕಾರನ್ನು ಅಡ್ಡಗಟ್ಟಿದ್ದಾರೆ. ಕಾರಿನಿಂದ ಕೆಳಗಿಳಿದು ಕಾರ್‌ನಲ್ಲಿದ್ದ ಜಯಂತ್‌ರನ್ನು ಎಳೆದುಕೊಂಡು ಹಲ್ಲೆ ನಡೆಸಿ, ಮುಖಕ್ಕೆ ಗುದ್ದಿ ರೌಡಿಸಂ ನಡೆಸಿದ್ದಾರೆ. ಜೊತೆಗೆ ಅವರ ಬಲಗೈ ಬೆರಳನ್ನು ಮಾಂಸ ಬರುವಂತೆ ಕಚ್ಚಿ, ವಿಕೃತಿ ಮೆರೆದಿದ್ದಾರೆ.

ಜಯಂತ್ ಕೈಬೆರಳಿಗೆ ಸರ್ಜರಿ ಮಾಡಿದ ವೈದ್ಯರು ಐದು ಸ್ಟಿಚ್ ಹಾಕಿ, 6 ತಿಂಗಳು ರೆಸ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ. ತನ್ನದಲ್ಲದ ತಪ್ಪಿಗೆ ಜಯಂತ್ 2 ಲಕ್ಷ ರೂ. ಬಿಲ್ ಕಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಮಾಗಡಿ ರೋಡ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ:ಸನಾತನ ಧರ್ಮವೇ ಇಸ್ಲಾಂ ಧರ್ಮಕ್ಕೆ ಅಡಿಪಾಯ , ಮುಸ್ಲಿಂರು ರಾಮನ ವಂಶಸ್ಥರು; ಜಮಾಲ್​ ಸಿದ್ದಿಕಿ, ಬಿಜೆಪಿ ನಾಯಕ

ಹಲ್ಲೆಗೊಳಗಾದ ಜಯಂತ್​ ಹೇಳಿಕೆ..!

ಹಲ್ಲೆಗೊಳಗಾದ ಜಯಂತ್​ ಮಾಧ್ಯಮದೊಂದಿಗೆ ಮಾತನಾಡಿದ್ದು “ಮೊನ್ನೆ(ಮೇ.25) ಶೇಷಾದ್ರಿಪುರಂನಲ್ಲಿ ತಿಂಡಿ ತಿನ್ನೋಣ ಅಂಥ ಹೋಗಿದ್ವಿ. ಮಳೆ ಬರುವಾಗ ಮಳೆ ನೀರು ಕಾರಿನಲ್ಲಿದ್ದ ಮೇಡಂ ಒಬ್ಬರ ಮುಖಕ್ಕೆ ಹಾರಿದ. ಈ ವೇಳೆ ನಾನು ಕ್ಷಮೆ ಕೇಳಿ, ಕಾರು ಗ್ಲಾಸ್​ ಹಾಕೊಳಿ ಅಂತ ಹೇಳಿದೆ. ಆದರೆ ಅವರು ಮುಂದೆ ಬಂದು ನನ್ನ ಕಾರನ್ನ ಅಡ್ಡಹಾಕಿದರು. ಈ ವೇಳೆ ನಾನು ನೀವು ಗ್ಲಾಸ್ ಹಾಕಿಕೊಂಡು ಹೋಗಿ ಅಂತ ಹೇಳಿದೆ.

ಇದನ್ನೂ ಓದಿ:‘ತಂದೆ ಸಮಾನರಾದ ಅಂಬಿ ಅಪ್ಪಾಜಿ ಎಂದಿಗೂ ಜೀವಂತ’; ರೆಬಲ್​ ಸ್ಟಾರ್ ನೆನೆದು ದರ್ಶನ್​ ಟ್ವಿಟ್

ಆದರೆ ಕಾರಿನಲ್ಲಿದ್ದ ದಂಪತಿಗಳಿಬ್ಬರು ಇಳಿದು ಬಂದು ನನಗೆ ಬೈಯೋಕೆ ಶುರು ಮಾಡಿದ್ರು. ಮಹಿಳೆಯ ಗಂಡ ನನ್​ ಹೆಂಡತಿ ಜೊತೆ ಏನ್​ ಮಾತಾಡ್ತೀಯ ಅಂತ ಕೆನ್ನೆಗೆ ಹೊಡೆದ. ಅದಕ್ಕೆ ನಾನು ಆತನ ಕಾಲರ್​ ಪಟ್ಟಿ ಹಿಡಿದೆ. ಈ ವೇಳೆ ಆತ ನನ್ನ ಕೈ ಕಚ್ಚಿ ಜೋರಾಗಿ ಎಳೆದ. ಇದರಿಂದ ನನ್ನ ಬೆರಳು ಕಟ್​ ಹಾಗಿದೆ. ಅಲ್ಲಿದ್ದ ಆಟೋದವರು ಹೋಗಿ ಕಂಪ್ಲೇಟ್​ ಕೊಡೊದಕ್ಕೆ ಹೇಳಿದ್ರು. ದೂರು ಕೊಟ್ಟಿದ್ದರು ಪೊಲೀಸರು ಇನ್ನು ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments