Thursday, August 21, 2025
Google search engine
HomeUncategorizedಭೀಕರ ಅಪಘಾತ; ಕಾರ್​ ಪಲ್ಟಿಯಾಗಿ ಸುರಕ್ಷಿತವಾಗಿ ಹೊರ ಬಂದವರ ಮೇಲೆ ಹರಿದ ಲಾರಿ, 6 ಮಂದಿ...

ಭೀಕರ ಅಪಘಾತ; ಕಾರ್​ ಪಲ್ಟಿಯಾಗಿ ಸುರಕ್ಷಿತವಾಗಿ ಹೊರ ಬಂದವರ ಮೇಲೆ ಹರಿದ ಲಾರಿ, 6 ಮಂದಿ ಸಾ*ವು

ಮುಂಬೈ: ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಘಾತಕಾರಿ ವಿಷಯವೇನೆಂದರೆ ಮೊದಲಿಗೆ ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಮಗುಚಿ ಬಿದ್ದಿದ್ದು. ಈ ವೇಳೆ ಕಾರಿನಿಂದ ಹೊರಬಂದವರ ಮೇಲೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. AMCA Project ; ಐದನೇ ತಲೆಮಾರಿನ ಯುದ್ದ ವಿಮಾನ ನಿರ್ಮಾಣಕ್ಕೆ ರಾಜನಾಥ್​ ಸಿಂಗ್ ಅನುಮೋದನೆ

ಮಹರಾಷ್ಟ್ರದ ಬೀಡ್​ ಜಿಲ್ಲೆಯ ಮೂಲಕ ಹಾದುಹೋಗುವ ಧುಲೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗರ್ಹಿ ಸೇತುವೆಯಲ್ಲಿ ಗಂಭೀರ ಅಪಘಾತ ಸಂಭವಿಸಿದ್ದು. ಗೆವ್ರೈ ನಗರದ ಬಳಿಯ ಗರ್ಹಿ ಸೇತುವೆಯ ಮೇಲೆ ಎಸ್ಯುವಿ ವಾಹನವೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿತ್ತು. ಆದರೆ ಕಾರು ಪಲ್ಟಿಯಾದರು ಕಾರಿನ ಒಳಗಿದ್ದವರು ಸುರಕ್ಷಿತವಾಗಿದ್ದರು. ಹೀಗಾಗಿ ಕಾರಿನಿಂದ ಇಳಿದು ರಸ್ತೆಗೆ ಬಂದಿದ್ದದವರ ಮೇಲೆ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್​ ಡಿಕ್ಕಿ ಹೊಡೆದಿದೆ.

ಅಪಘಾತದ ಭೀಕರತೆಗೆ ಮೃತದೇಹಗಳು ಛಿದ್ರ ಛಿದ್ರವಾಗಿದ್ದು. ಮೃತರನ್ನು ಬಾಲು ಅಟ್ಕರೆ, ಮನೋಜ್ ಕರಂಡೆ, ಕೃಷ್ಣ ಜಾಧವ್, ದೀಪಕ್ ಸರೋಯಾ, ಭಾಗವತ್ ಪರಾಲ್ಕರ್ ಮತ್ತು ಸಚಿನ್ ನಾನ್ವಾರೆ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:ಶಿವಣ್ಣ, ದರ್ಶನ್‌ ಬಗ್ಗೆ ಅವಹೇಳನಕಾರಿ ಹೇಳಿಕೆ: ಕನ್ನಡ ಚಿತ್ರರಂಗದಿಂದ ಮಡೆನೂರು ಮನು ಬ್ಯಾನ್

ಅಪಘಾತದ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದು, ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಟ್ರಕ್ ಚಾಲಕನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments