Monday, August 25, 2025
Google search engine
HomeUncategorizedದೇಶ ಕಾಯುವ ಯೋಧರಿಗೆ ಆಸ್ತಿ ತೆರಿಗೆ ವಿನಾಯಿತಿ: ಮಹತ್ವದ ನಿರ್ಧಾರ ಕೈಗೊಂಡ ಪವನ್​ ಕಲ್ಯಾಣ

ದೇಶ ಕಾಯುವ ಯೋಧರಿಗೆ ಆಸ್ತಿ ತೆರಿಗೆ ವಿನಾಯಿತಿ: ಮಹತ್ವದ ನಿರ್ಧಾರ ಕೈಗೊಂಡ ಪವನ್​ ಕಲ್ಯಾಣ

ಆಂಧ್ರ ಪ್ರದೇಶ : ಭಾರತೀಯ ರಕ್ಷಣ ಪಡೆ ಸಿಬ್ಬಂದಿಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಲು ಆಂದ್ರ ಪ್ರದೇಶ ಸರ್ಕಾರ ನಿರ್ಧರಿಸಿದ್ದು. ಗ್ರಾಮ ಪಂಚಾಯತ್​ ಮಿತಿಯೊಳಗೆ ಇರುವ ಆಸ್ತಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಉಪಮುಖ್ಯ ಮಂತ್ರಿ ಪವನ್​ ಕಲ್ಯಾಣ್​ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಪೊಸ್ಟ್​ ಮಾಡಿದ್ದಾರೆ.

ಭಾನುವಾರ ರಾತ್ರಿ ಪವನ್​ ಕಲ್ಯಾಣ್​ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿದ್ದು. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ನೇತೃತ್ವದ ಎನ್‌ಡಿಎ ಸರ್ಕಾರವು ವೀರ ಸೈನಿಕರಿಗೆ ಆಳವಾದ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಜನ ಸೇನಾ ನಾಯಕ ಪವನ್​ ಕಲ್ಯಾಣ್​  ಹೇಳಿದ್ದಾರೆ.

ಇದನ್ನೂ ಓದಿ :‘ದೇಶ ಉಳಿಸಿಕೊಳ್ಳಲು ಯುದ್ದ ಬಹಳ ಮುಖ್ಯ’: ಮಲ್ಲಿಕಾರ್ಜುನ್​ ಖರ್ಗೆ

ಏನಿದೆ ಟ್ವಿಟ್​​ನಲ್ಲಿ..!

“ಗ್ರಾಮ ಪಂಚಾಯತ್ ಮಿತಿಯೊಳಗಿನ ಭಾರತೀಯ ರಕ್ಷಣಾ ಪಡೆಗಳ ಸಿಬ್ಬಂದಿಗೆ ಸೇರಿದ ಮನೆಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಲು ಪಂಚಾಯತ್ ರಾಜ್ ಇಲಾಖೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರವು ನಮ್ಮ ರಾಷ್ಟ್ರದ ಭದ್ರತೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡುವ ನಮ್ಮ ರಕ್ಷಣಾ ಪಡೆಗಳಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ, ಅರೆಸೇನಾ ಪಡೆ, ಸಿಆರ್‌ಪಿಎಫ್ ಸಿಬ್ಬಂದಿಗಳ ಅಚಲ ಧೈರ್ಯವನ್ನು ಗೌರವಿಸುತ್ತದೆ” ಎಂದು ಪವನ್ ಕಲ್ಯಾಣ್ ಹೇಳಿದರು.

ಇದನ್ನೂ ಓದಿ :ಮೋದಿ ಬದಲು ಟ್ರಂಪ್​ ವಿಶ್ವಗುರು ಆಗಿದ್ದಾರೆ, ಮೋದಿ ಸೈನಿಕರಿಗೆ ಅವಮಾನ ಮಾಡಿದ್ದಾರೆ: ಹರಿಪ್ರಸಾದ್​

ಇಲ್ಲಿಯವರೆಗೆ, ಈ ವಿನಾಯಿತಿ ನಿವೃತ್ತ ಸೇನಾ ಸಿಬ್ಬಂದಿ ಅಥವಾ ಗಡಿಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮಾತ್ರ ಲಭ್ಯವಿತ್ತು ಎಂದು ಉಲ್ಲೇಖಿಸಿದ್ದಾರೆ. “ಇಂದು, ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ನಿರ್ಧರಿಸಿದ್ದೇವೆ. ಇಂದಿನಿಂದ, ಭಾರತೀಯ ರಕ್ಷಣಾ ಪಡೆಗಳ ಎಲ್ಲಾ ಸಕ್ರಿಯ ಸಿಬ್ಬಂದಿ, ಅವರು ಎಲ್ಲಿ ನೇಮಕಗೊಂಡಿದ್ದರೂ ಸಹ, ಈ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ಅವರು ಅಥವಾ ಅವರ ಸಂಗಾತಿಯು ವಾಸಿಸುವ ಅಥವಾ ಜಂಟಿಯಾಗಿ ಹೊಂದಿರುವ ಒಂದು ಮನೆಗೆ ವಿನಾಯಿತಿ ಅನ್ವಯಿಸುತ್ತದೆ, ”ಎಂದು ಅವರು ಹೇಳಿದರು.

ಸೈನಿಕ ಕಲ್ಯಾಣ ನಿರ್ದೇಶಕರ ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ನಮ್ಮ ಸರ್ಕಾರ ಪ್ರತಿಯೊಬ್ಬ ಸೈನಿಕ ಮತ್ತು ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ. ಅವರ ಸೇವೆ ಅಮೂಲ್ಯವಾದುದು, ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅದನ್ನು ಗೌರವಿಸುವುದು ನಮ್ಮ ಕರ್ತವ್ಯ” ಎಂದು ಅವರು ಹೇಳಿದರು.

ಇದನ್ನೂ ಓದಿ :ಯುದ್ದವೆಂಬುದು ರೋಮ್ಯಾಂಟಿಕ್​ ಬಾಲಿವುಡ್​ ಸಿನಿಮಾ ಅಲ್ಲ: ಮಾಜಿ ಸೇನಾ ಮುಖ್ಯಸ್ಥ ಮನೋಜ್​ ನರವಾಣೆ

ಆಪರೇಷನ್ ಸಿಂಧೂರ್ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಸೈನಿಕ ಮುರಳಿ ನಾಯಕ್ ಅವರಿಗೆ ಪವನ್ ಕಲ್ಯಾಣ್ ಭಾನುವಾರ ಅಂತಿಮ ನಮನ ಸಲ್ಲಿಸಿದರು. ಆಂದ್ರ ಪ್ರದೇಶ ಸರ್ಕಾರವು ಮುರಳಿ ನಾಯಕ್ ಅವರ ಪೋಷಕರಿಗೆ 50 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿತು, ಜೊತೆಗೆ ಐದು ಎಕರೆ ಕೃಷಿ ಭೂಮಿ ಮತ್ತು 300 ಚದರ ಗಜಗಳ ಮನೆ ನಿವೇಶನವನ್ನು ಮಂಜೂರು ಮಾಡಿತು. ಪವನ್ ಕಲ್ಯಾಣ್ ತಮ್ಮ ವೈಯಕ್ತಿಕವಾಗಿ ಮುರುಳಿ ನಾಯಕ್​  ಕುಟುಂಬಕ್ಕೆ 25 ಲಕ್ಷ ರೂ.ಗಳನ್ನು ಘೋಷಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments