Wednesday, August 27, 2025
Google search engine
HomeUncategorizedಸ್ವತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ: ರಾಯಭಾರ ಕಛೇರಿ ತೆರೆಯಲು ಭಾರತದ ಬಳಿ ಮನವಿ

ಸ್ವತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ: ರಾಯಭಾರ ಕಛೇರಿ ತೆರೆಯಲು ಭಾರತದ ಬಳಿ ಮನವಿ

ಬಲೂಚಿಸ್ತಾನ: ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಪ್ರಸಿದ್ಧ ಬಲೂಚ್ ಬರಹಗಾರ ಮೀರ್ ಯಾರ್ ಬಲೂಚ್ ‘ಬಲೂಚಿಸ್ತಾನವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದಿದೆ ಎಂದು ಘೋಷಿಸಿಕೊಂಡಿದ್ದು. ನವದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ತೆರೆಯಲು ಭಾರತ ಸರ್ಕಾರ ಅನುಮತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪಾಕಿಸ್ತಾನದಲ್ಲಿ ಪ್ರತ್ಯೇಕತೆ ಕೂಗು ದಶಕಗಳಿಂದ ಕೇಳಿ ಬರುತ್ತಿದ್ದು. ಸ್ವತಂತ್ರ್ಯ ಬಲೂಚಿಸ್ತಾನಕ್ಕಾಗಿ ಹಿಂಸಾತ್ಮಕ ಹೋರಾಟಗಳು ನಡೆಯುತ್ತಿವೆ. ಬಲೂಚ್​ ಜನರ ಸ್ವತಂತ್ರಕ್ಕಾಗಿ ಹೋರಾಟ ನಡೆಸುತ್ತಿರುವ ಮೀರ್ ಯಾರ್ ಬಲೂಚ್ ಅವರು ಬಲೂಚಿಸ್ತಾನದ ಸ್ವತಂತ್ರ್ಯದ ಬಗ್ಗೆ ಸಾಮಾಜಿಕ ಜಾಲತಾಣದ Xನಲ್ಲಿ ಘೋಷಣೆ ಮಾಡಿದ್ದಾರೆ. ಹಾಗೂ ಪಾಕಿಸ್ತಾನ ಬಲೂಚಿಸ್ತಾನದ ಪ್ರದೇಶಗಳನ್ನು ತೊರೆಯುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಪಾಕ್​ ಪ್ರಧಾನಿ ಮನೆ ಬಳಿ ಮಿಸೈಲ್​​ ದಾಳಿ: ಬಂಕರ್‌ನಲ್ಲಿ ಅಡಗಿ ಕುಳಿತ ಶೆಹಬಾಜ್​ ಷರೀಫ್​..!

ಪಹಲ್ಗಾಂನಲ್ಲಿ ನಡೆದ ಭೀಕರ ದಾಳಿಯ ನಂತರ ಕಳೆದ ಮೇ.07ರಂದು ಭಾರತವು ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ಪಾಕಿಸ್ತಾನದಮ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದನ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಗುರುವಾರ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ತೀವ್ರವಾದ ಫಿರಂಗಿ ಶೆಲ್ಲಿಂಗ್‌ಗಳ ಮೂಲಕ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿತ್ತು. ಇದರ ನಡುವೆ ಬಲೂಚಿಸ್ತಾನ ಈ ಘೋಷಣೆ ಮಾಡಿಕೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಏನೆಂದು ಬರೆದುಕೊಂಡಿದ್ದಾರೆ..!

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ರತ್ಯೇಕತೆ ಕೂಗು ಕಳೆದ ಅನೇಕ ದಶಕಗಳಿಂದ ಕೇಳಿ ಬರುತ್ತದೆ. ಈ ಕುರಿತು ಮೀರ್ ಯಾರ್ ಬಲೂಚ್ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಬರೆದುಕೊಂಡಿದ್ದು. “ಭಯೋತ್ಪಾದಕ ಪಾಕಿಸ್ತಾನದ ಪತನ ಹತ್ತಿರವಾಗಿದೆ. ಅದಕ್ಕೆ ಈ ಸಂಭವನೀಯ ಘೋಷಣೆ ಮಾಡಿಕೊಂಡಿದ್ದೇವೆ. ನಾವು ನಮ್ಮ ಸ್ವತಂತ್ರ್ಯವನ್ನು ಪ್ರತಿಪಾದಿಸಿದ್ದೇವೆ ಮತ್ತು ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ರಾಯಭಾರ ಕಛೇರಿಯನ್ನು ತೆರಯಲು ಅನುಮತಿ ನೀಡಬೇಕು ಎಂದು ಭಾರತವನ್ನು ವಿನಂತಿಸುತ್ತೇವೆ” ಎಂದು ಅವರು ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ :ಸಿಂಧೂರ ಅಳಿಸಿದ ಪಾಕಿಗಳಿಗೆ ಉತ್ತರ ಕೊಟ್ಟ ಮಹಿಳಾ ಅಧಿಕಾರಿಗಳು ಯಾರು ಗೊತ್ತಾ..!

ಮುಂದುವರಿದು ಬರೆದುಕೊಂಡಿರುವ ಅವರು “ಬಲೂಚಿಸ್ತಾನ್ ಪ್ರಜಾಸತ್ತಾತ್ಮಕ ಗಣರಾಜ್ಯದ ಸ್ವಾತಂತ್ರ್ಯವನ್ನು ಬೆಂಬಲಿಸಲು ವಿಶ್ವಸಂಸ್ಥೆಯ ಎಲ್ಲಾ ಸದಸ್ಯರು ಬೆಂಬಲಿಸಬೇಕು, ಈ ಕುರಿತು ನಾವು ಅಂತರ್​ರಾಷ್ಟ್ರೀಯ ಬೆಂಬಲ ಕೇಳುತ್ತೇವೆ ಎಂದು ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರತ್ಯೇಕ ಕರೆನ್ಸಿ ಮತ್ತು ಪಾಸ್​ಪೋರ್ಟ್​ ಮುದ್ರಣಕ್ಕಾಗಿ ಶತಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆ ಬಳಿ ಮನವಿ ಮಾಡಿದ್ದಾರೆ.  

ಬಲೂಚಿಸ್ತಾನಕ್ಕೆ ಶಾಂತಿಪಾಲನಾ ಪಡೆಗಳನ್ನು ತಕ್ಷಣವೇ ಕಳುಹಿಸುವಂತೆ ಬಲೂಚ್ ವಿಶ್ವಸಂಸ್ಥೆಯನ್ನು ಕೋರಿದ್ದಾರೆ. “ಬಲೂಚಿಸ್ತಾನದಲ್ಲಿ ತನ್ನ ಶಾಂತಿಪಾಲನಾ ಕಾರ್ಯಾಚರಣೆಗಳನ್ನು ತಕ್ಷಣವೇ ಕಳುಹಿಸುವಂತೆ ಮತ್ತು ಪಾಕಿಸ್ತಾನದ ಔದ್ಯೋಗಿಕ ಸೇನೆಯು ಬಲೂಚಿಸ್ತಾನದ ಪ್ರದೇಶಗಳು, ವಾಯುಪ್ರದೇಶ ಮತ್ತು ಸಮುದ್ರವನ್ನು ಖಾಲಿ ಮಾಡುವಂತೆ ಮತ್ತು ಬಲೂಚಿಸ್ತಾನದಲ್ಲಿ ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ಆಸ್ತಿಯನ್ನು ಬಿಡುವಂತೆ ನಾವು ವಿಶ್ವಸಂಸ್ಥೆಯನ್ನು ಒತ್ತಾಯಿಸುತ್ತೇವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments