Thursday, August 28, 2025
HomeUncategorizedಕರ್ನಾಟಕದ 3 ಸ್ಥಳಗಳು ಸೇರಿದಂತೆ ದೇಶದ 244 ಜಿಲ್ಲೆಗಳಲ್ಲಿ ಮಾಕ್​ಡ್ರಿಲ್​​

ಕರ್ನಾಟಕದ 3 ಸ್ಥಳಗಳು ಸೇರಿದಂತೆ ದೇಶದ 244 ಜಿಲ್ಲೆಗಳಲ್ಲಿ ಮಾಕ್​ಡ್ರಿಲ್​​

ದೆಹಲಿ: ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಕಾರ್ಮೋಡ ಆವರಿಸಿದ್ದು. ಯುದ್ದದ ಸಂದರ್ಭದಲ್ಲಿ ನಾಗರಿಕರ ರಕ್ಷಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಮಾಕ್​ ಡ್ರಿಲ್​ ನಡೆಸಲು ಕೇಂದ್ರ ಗೃಹ ಇಲಾಖೆ ಸೂಚನೆ ಹೊರಡಿಸಿದೆ. ಇದರ ಅನ್ವಯ ಕರ್ನಾಟಕ ಮೂರು ಸ್ಥಳಗಳು ಸೇರಿದಂತೆ ದೇಶದ 244 ಸಿವಿಲ್​ ಡಿಫೆನ್ಸ್​ ಜಿಲ್ಲೆಗಳಲ್ಲಿ ನಾಗರಿಕರ ರಕ್ಷಣೆಗೆ ಮಾಕ್​ ಡ್ರಿಲ್​ ನಡೆಸಲಾಗುತ್ತಿದೆ.

ಕರ್ನಾಟಕದ ಎರಡು ಜಿಲ್ಲೆಯಲ್ಲೂ ಮಾಕ್‌ ಡ್ರಿಲ್‌ ನಡೆಸಲು ಸೂಚನೆ ಹೊರಡಿಸಿದ್ದು. ಬೆಂಗಳೂರು ನಗರ, ಮಲ್ಲೇಶ್ವರಂ, ರಾಯಚೂರಿನಲ್ಲಿ ಮಾಕ್ ಡ್ರಿಲ್‌ ನಡೆಯಲಿದೆ. ಅಷ್ಟೇ ಅಲ್ಲದೇ ದೇಶದ 244 ಜಿಲ್ಲೆಗಳಲ್ಲಿ ಮಾಕ್​​ ಡ್ರಿಲ್​ ನಡೆಯಲಿದ್ದು. ನಾಳೆಯಿಂದ ಒಂದುವಾರಗಳ ಕಾಲ ಮಾಕ್​ಡ್ರಿಲ್​ ಅಭ್ಯಾಸ ನಡೆಯಲಿದೆ.

ಇದನ್ನೂ ಓದಿ :ಕರ್ನಾಟಕದ 3 ಸ್ಥಳಗಳು ಸೇರಿದಂತೆ ದೇಶದ 244 ಜಿಲ್ಲೆಗಳಲ್ಲಿ ಮಾಕ್​ಡ್ರಿಲ್​​

54 ವರ್ಷಗಳ ಬಳಿಕೆ ದೇಶದಲ್ಲಿ ಮಾಕ್​ ಡ್ರಿಲ್​..!

ಬರೋಬ್ಬರಿ 54 ವರ್ಷದ ಬಳಿಕ ಭಾರತದಲ್ಲಿ ಮಾಕ್‌ ಡ್ರಿಲ್‌ ನಡೆಯುತ್ತಿದ್ದು. ಪಹಲ್ಗಾಮ್‌ ಪ್ರತೀಕಾರಕ್ಕೆ. ಭಾರತ  ಸನ್ನದ್ಧವಾಗುತ್ತಿದ್ದಂತೆ ದೇಶದ 244 ಸಿವಿಲ್‌ ಡಿಫೆನ್ಸ್‌ ಜಿಲ್ಲೆಗಳಲ್ಲಿ ನಾಳೆ ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ.

ಸಾಧಾರಣವಾಗಿ ಒಂದು ದೇಶ ಯುದ್ಧಕ್ಕೆ ಸಿದ್ಧಗೊಳ್ಳುತ್ತಿದ್ದಾಗ ಮಾಕ್‌ ಡ್ರಿಲ್‌ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಕಳೆದ ಭಾನುವಾರ ಪಂಜಾಬ್‌ನ ಫಿರೋಜ್‌ಪುರ್ ಕಂಟೋನ್ಮೆಂಟ್‌ನಲ್ಲಿ ರಾತ್ರಿ 9 ರಿಂದ 9:30ರವರೆಗೆ ವಿದ್ಯುತ್‌ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ಇದನ್ನೂ ಓದಿ :ಪಾಕಿಸ್ತಾನದ ಪರ ಜೈಕಾರ ಕೂಗುವವರ ವಿರುದ್ದ ಜಮೀರ್ ಹೋರಾಟ ಮಾಡಲಿ: ಸಿ,ಟಿ ರವಿ

1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧದ ವೇಳೆ ಈ ರೀತಿಯ ಮಾಕ್‌ ಡ್ರಿಲ್‌ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್‌ ಡ್ರಿಲ್‌ ಮಾಡಲು ಸಮಯ ಸಿಕ್ಕಿರಲಿಲ್ಲ.

ಮಾಕ್​ಡ್ರಿಲ್​ ನಡೆಯುವ ಜಿಲ್ಲೆಗಳ ಮಾಹಿತಿ..!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments