ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರದಾಳಿ ನಡೆಸಿದ ಉಗ್ರರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ನಂಬಲಾದ ಇಬ್ಬರು ಭಯೋತ್ಪಾದಕರ ಮನೆಗಳನ್ನು ಶುಕ್ರವಾರ ಭದ್ರತಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ನಾಶಪಡಿಸಿದ್ದಾರೆ.
ಬಿಜ್‌ಬೆಹರಾದಲ್ಲಿರುವ ಲಷ್ಕರ್ ಭಯೋತ್ಪಾದಕ ಆದಿಲ್ ಹುಸೇನ್ ಥೋಕರ್ ನಿವಾಸವನ್ನು ಐಇಡಿ ಸ್ಪೋಟಕ ಬಳಸಿ ನಾಶಪಡಿಸಿದ್ದು, ಟ್ರಾಲ್‌ನಲ್ಲಿರುವ ಆಸಿಫ್ ಶೇಖ್ ಎಂಬಾತನ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. 26 ಜನರ ಸಾವಿಗೆ ಕಾರಣವಾದ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ದಾಳಿ ನಡೆಸಲು ಯೋಜನೆ ರೂಪಿಸುವಲ್ಲಿ ಮತ್ತು ಅದನ್ನು ನಡೆಸಲು ಆದಿಲ್ ಹುಸೇನ್ ಥೋಕರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನಂಬಲಾಗಿದೆ. ಇದನ್ನೂ ಓದಿ :ಮಂಗಳೂರು : ಪಹಲ್ಗಾಮ್ ಉಗ್ರ ಕೃತ್ಯ ಸಮರ್ಥಿಸಿಕೊಂಡು ಫೇಸ್ಬುಕ್ನಲ್ಲಿ ಪೋಸ್ಟ್
ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಥೋಕರ್ ಮತ್ತು ಇಬ್ಬರು ಪಾಕಿಸ್ತಾನಿ ಪ್ರಜೆಗಳಾದ ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂ.ಗಳ ಬಹುಮಾನ ನೀಡುವುದಾಗಿ ಅನಂತನಾಗ್ ಪೊಲೀಸರು ಘೋಷಿಸಿದ್ದಾರೆ. ದಾಳಿಕೋರರಿಗಾಗಿ ಭದ್ರತಾ ಪಡೆಗಳು ವ್ಯಾಪಕ ಹುಡುಕಾಟ ಆರಂಭಿಸಿದ್ದು. ಮೂವರ ರೇಖಾಚಿತ್ರಗಳನ್ನು ಸಹ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ :ಸಿಂಧೂ ನದಿ ನೀರನ್ನು ನಿಲ್ಲಿಸಿದರೆ ಅದನ್ನು ಯುದ್ದವೆಂದೇ ಪರಿಗಣಿಸುತ್ತೇವೆ: ಭಾರತದ ರಾಜತಾಂತ್ರಿಕ ನಡೆಗೆ ಪಾಕ್ ಶಾಕ್
ಇನ್ನು ಉಗ್ರರಾದ ಅಲಿ ಭಾಯ್ ಮತ್ತು ಹಾಸಿಮ್ ಮೂಸಾ ಇಬ್ಬರು ಕಳೆದ ಎರಡು ವರ್ಷಗಳ ಹಿಂದೆ ಗಡಿನುಸಿಳಿ ಭಾರತಕ್ಕೆ ಪ್ರವೇಶಿಸಿದ್ದು. ಅಂದಿನಿಂದ ಸಕ್ರಿಯರಾಗಿದ್ದಾರೆ ಎಂದು ತಿಳಿದು ಬಂದಿದೆ.