Tuesday, August 26, 2025
Google search engine
HomeUncategorizedಮನೆಗಳ್ಳತನ ಮಾಡಿ ಬಾಲಿವುಡ್​ ನಟಿಗೆ ಮನೆ ಕಟ್ಟಿಕೊಟ್ಟಿದ್ದ ಖದೀಮ ಅಂದರ್​

ಮನೆಗಳ್ಳತನ ಮಾಡಿ ಬಾಲಿವುಡ್​ ನಟಿಗೆ ಮನೆ ಕಟ್ಟಿಕೊಟ್ಟಿದ್ದ ಖದೀಮ ಅಂದರ್​

ಬೆಂಗಳೂರು : ಈ ಫೋಟೊದಲ್ಲಿರೊ ಆಸಾಮಿಯ ಹೆಸರು ಪಂಚಾಕ್ಷರಿ ಸಂಗಯ್ಯ ಸ್ವಾಮಿ. ಮಹರಾಷ್ಟ್ರದ ಸೊಲ್ಲಾಪುರದವ್ನು. ತಂದೆ ರೈಲ್ವೆ ನೌಕರರಾಗಿದ್ದ. ತಂದೆ ಸಾವಿನ ಬಳಿಕ ತಾಯಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಒಳ್ಳೆ ಕುಟುಂಬದ ಹಿನ್ನಲೆ ಉಳ್ಳವನು. ಆದರೆ ಹಣದಾಸೆಗೆ ಕಳ್ಳನಾಗಿ ಬದಲಾಗಿದ್ದ.  ಅಪ್ರಾಪ್ತನಾಗಿರುವಾಗಲೆ ಮನೆಗಳ್ಳತನಕ್ಕೆ ಇಳಿದವನು. ದೇಶದ ಬೇರೆ ಬೇರೆ ರಾಜ್ಯಗಳಲ್ಲು ಕೈ ಚಳಕ ತೋರಿ ಪೊಲೀಸರ ಅತಿಥಿಯಾಗಿದ್ದಾನೆ. ಈತನಿಗೆ ಬಾಲಿವುಡ್​​ನ ಪ್ರಖ್ಯಾತ ನಟಿಯೊಬ್ಬಳ ಜೊತೆ ಪ್ರೀತಿ ಇದ್ದು. ಆಕೆಗೆ 3 ಕೋಟಿ ಮೊತ್ತದಲ್ಲಿ ಮನೆಯನ್ನು ಕಟ್ಟಿಸಿಕೊಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಹೌದು..2003 ರಲ್ಲಿ ಅಪ್ರಾಪ್ತನಾಗಿದ್ದಾಲೇ ಕಳ್ಳತನಕ್ಕೆ ಇಳಿದಿದ್ದ ಪಂಚಾಕ್ಷರಿ ಸಂಗಯ್ಯ ಸ್ವಾಮಿ 2009 ರಲ್ಲಿ ಪ್ರೊಫೆಷನಲ್ ಕಳ್ಳನಾಗಿ ಬದಲಾಗಿದ್ದ. ಬಾಗಿಲು ಹಾಕಿದ್ದ ಮನೆಯನ್ನ ಗುರ್ತಿಸುತ್ತಿದ್ದ ಆಸಾಮಿ ತನ್ನ ಸಹಚರರ ಜೊತೆ ಫೀಲ್ಡಿಗೆ ಇಳಿತಿದ್ದ. ಕಳ್ಳತನ ಬಳಿಕ ಪೊಲೀಸರ ದಿಕ್ಕು ತಪ್ಪಿಸಲು ರಸ್ತೆಯಲ್ಲಿಯೇ ಬಟ್ಟೆ ಬದಲಿಸಿಕೊಳ್ತಿದ್ದ. ಈತ ಕದ್ದ ಚಿನ್ನಾಭರಣವನ್ನು ಫೈರ್ ಗನ್ ಹಾಗೂ ಮೂಸ್ ಬಳಸಿ ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡ್ತಿದ್ದ.

ಇದನ್ನೂ ಓದಿ: ವಿಧಾನಸೌದದಲ್ಲಿ ನಾಯಿಗಳಿಗೆ ಶೆಲ್ಟರ್​ ನಿರ್ಮಾಣ: ಐತಿಹಾಸಿಕ ತೀರ್ಮಾನ ಕೈಗೊಂಡ ಸ್ಪೀಕರ್​ ಖಾದರ್​

ಇನ್ನೂ ಕದ್ದ ಹಣದಲ್ಲಿ ಶೋಕಿ ಜೀವನ ಮಾಡ್ತಿದ್ದ ಈತನಿಗೆ 2014-15 ರಲ್ಲಿ ಪ್ರಖ್ಯಾತ ನಟಿ ಜೊತೆಗೆ ಲಿಂಕ್ ಇತ್ತು ಎಂದು ಪೊಲೀಸರ ತನಿಖೆ ವೇಳೆ ಹೇಳಿಕೊಂಡಿದ್ದಾನೆ. ಅಲ್ಲದೇ ಆಕೆಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾನಂತೆ. ಇನ್ನೂ ಮದುವೆಯಾಗಿ ಮಗು ಇದ್ದರು ಗರ್ಲ್ ಫ್ರೆಂಡ್ ಹೊಂದಿದ್ದ ಆರೋಪಿ ಪಂಚಾಕ್ಷರಿ ಸಂಗಯ್ಯ ಸ್ವಾಮಿ ಪ್ರಿಯತಮೆಗೆ 2016 ರಲ್ಲಿ 3 ಕೋಟಿ ಮೌಲ್ಯದ ಬಂಗಲೆಯನ್ನ ಕೊಲ್ಕತ್ತದಲ್ಲಿ ಒಲವಿನ ಉಡುಗೊರೆಯಾಗಿ ಕೊಟ್ಟಿದ್ದ. ಅಷ್ಟೇ ಅಲ್ಲ ಆಕೆಯ ಬರ್ತ್ ಡೇ ಗೆ 22 ಲಕ್ಷದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದ. ಇದಾದ ಬಳಿಕ ಆತನ ನಸೀಬು ಕೆಟ್ಟಿತ್ತು 2016 ರ ಅಂತ್ಯದ ವೇಳೆಗೆ ಗುಜರಾತ್ ಪೊಲೀಸರು ಕಳ್ಳತನ ಕೇಸ್ ನಲ್ಲಿ ಬಂಧಿಸಿ ಜೈಲಿಗಟ್ಟಿದ್ದರು.

6 ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಆರೋಪಿ. ಹೊರಬಂದು ಮತ್ತೆ ಕಳ್ಳತನದ ಚಾಳಿ ಮುಂದುವರೆಸಿದ್ದು ಮಹಾರಾಷ್ಟ್ರ ಪೊಲೀಸರು ಮತ್ತೆ ಬಂಧಿಸಿ ಜೈಲಿಗಟ್ಟಿದ್ರು. ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದಿದ್ದ ಈತ 2024 ಜನವರಿ 9 ರಂದು ಮಡಿವಾಳದ ಮಾರುತಿನಗರದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಿದ್ದ. ಆತನ ಪತ್ತೆಗೆ ಬಲೆ ಬೀಸಿದ್ದ ಮಡಿವಾಳ‌ ಪೊಲೀಸರು ಪಂಚಾಕ್ಷರಿ ಸಂಗಯ್ಯ ಸ್ವಾಮಿ ಬಂಧಿಸಿದ್ದು ಬಂಧಿತನಿಂದ 12.25 ಲಕ್ಷ ಮೌಲ್ಯದ 181 ಗ್ರಾಂ ಚಿನ್ನದ ಗಟ್ಟಿ 333 ಗ್ರಾಂ ಬೆಳ್ಳಿ ವಸ್ತುಗಳು..ಸೇರಿ ಫೈರ್ ಗನ್ ಹಾಗೂ ಮೂಸ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments