Monday, August 25, 2025
Google search engine
HomeUncategorizedಆಸ್ತಿಗಾಗಿ ಹೆತ್ತವರ ಕೈ-ಕಾಲನ್ನೆ ಮುರಿದ ಪಾಪಿ ಪುತ್ರ !

ಆಸ್ತಿಗಾಗಿ ಹೆತ್ತವರ ಕೈ-ಕಾಲನ್ನೆ ಮುರಿದ ಪಾಪಿ ಪುತ್ರ !

ಮಂಡ್ಯ : ಜಿಲ್ಲೆಯಲ್ಲಿ ಧಾರುಣ ಘಟನೆ ನಡೆದಿದ್ದು. ಹೆತ್ತ ಮಗನೆ ಆಸ್ತಿಗಾಗಿ ತಂದೆತಾಯಿಯ ಕೈಕಾಲು ಮುರಿದಿದ್ದಾನೆ. ಇದರ ಕುರಿತು ವೃದ್ದ ತಂದೆ ತಾಯಿಗಳು ಮೇಲುಕೋಟೆ ಪೋಲಿಸ್​ ಠಾಣೆ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರದ ಕಾಳೇನಹಳ್ಳಿ ಗ್ರಾಮದವರಾದ ಜವರೇಗೌಡ ಮತ್ತು ಭಾಗ್ಯಮ್ಮರ ಮೇಲೆ ಅವರ ಎರಡನೇ ಮಗ ನೀಲೇಗೌಡ ಹಾಗೂ ಈತ‌ನ ಪತ್ನಿ ಕೀರ್ತಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ತಂದೆ ತಾಯುಯರ ಜೊತೆ ಜಗಳ ತೆಗೆದಿದ್ದ ಮಗ ನೀಲೆಗೌಡ ಪ್ರತಿ ದಿನವೂ ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ. ಇದೇ ವಿಚಾರಕ್ಕೆ ಜಗಳ ನಡೆದು ತಂದೆ ತಾಯಿಯ ಕಾಲು ಮುರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ :ಯಾವುದೇ ಧರ್ಮಕ್ಕೆ ಧ್ವನಿವರ್ಧಕ ಬಳಕೆ ಅನಿವಾರ್ಯವಲ್ಲ : ಬಾಂಬೆ ಹೈಕೋರ್ಟ್

ಇನ್ನು ಕೈ-ಕಾಲು ಮುರಿದುಕೊಂಡಿರುವ ವೃದ್ದ ದಂಪತಿಗಳು  ಮೇಲುಕೋಟೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸರು ಈ ದೂರನ್ನು ತಿರಸ್ಕರಿಸಿದ್ದು. ಕೈಕಾಲು ಮುರಿದರು ಎಂದು ದೂರು ನೀಡದೆ, ಬೇರೆ ರೀತಿಯಲ್ಲಿ ದೂರು ನೀಡಿ ಎಂದು ಹೇಳಿದ್ದಾರೆ. ಹೀಗಾಗಿ ವಯಸ್ಸಾದ ಜೀವಗಳು ಮಾಧ್ಯಮದ ಮುಂದೆ ಬಂದಿದ್ದು. ನ್ಯಾಯಾ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಇನ್ನು ಈ ಕುರಿತು ವೃದ್ದ ದಂಪತಿಗಳು ಮಂಡ್ಯದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ದೂರು ನೀಡಿದ್ದು. ಅವರು ನ್ಯಾಯಾ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿಗಳ ಬಳಿ ದಯಮರಣ ನೀಡುವಂತೆ ವೃದ್ದ ದಂಪತಿಗಳು ಕೋರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments