Sunday, September 7, 2025
HomeUncategorizedಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ !

ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ !

ಮುಂಬೈ: ಸೂರತ್‌ನಿಂದ ಛಾಪ್ರಾಕ್ಕೆ ತೆರಳುತ್ತಿದ್ದ ತಪತಿ ಗಂಗಾ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಬಳಿ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರೈಲು ನಿಲ್ದಾಣದಿಂದ ರೈಲು ಮೂರ್ನಾಲ್ಕು ಕಿ.ಮೀ ದೂರ ಕ್ರಮಿಸಿದ ಬಳಿಕ ದುಷ್ಕರ್ಮಿಗಳಿಂದ ಈ ದಾಳಿ ನಡೆದಿದೆ. ಈ ದಾಳಿಯಲ್ಲಿ ರೈಲಿನ ಬಿ6 ಕೋಚ್​ನ ಕಿಟಿಕಿಗಳಿಗೆ ಹಾನಿಯಾಗಿದೆ.

ಪ್ರಯಾಗ್​ರಾಜ್​ನಲ್ಲಿ ಮಹಾಕುಂಭ ಮೇಳ ಇಂದಿನಿಂದ ಆರಂಭವಾಗಿದ್ದು. ಫೆಬ್ರವರಿ 26ರವರೆಗೆ ಈ ಕುಂಭಮೇಳ ನಡೆಯಲಿದೆ. ಈ ಬೃಹತ್​ ಧಾರ್ಮಿಕ ಸಮ್ಮೇಳನದಲ್ಲಿ ಸುಮಾರು 40 ಕೋಟಿಗೂ ಅಧಿಕ ಭಕ್ತರು ಭಾಗವಹಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಇದರ ಪ್ರಯುಕ್ತ ಭಾರತೀಯ ರೈಲ್ವೆ ಅನೇಕ ವಿಶೇಷ ರೈಲುಗಳನ್ನು ಓಡಾಟ ನಡೆಸುತ್ತಿದೆ.

ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಜಗಳ : ನಡುರಸ್ತೆಯಲ್ಲೆ ಹೊಡೆದು ಕೊ*ಲೆ ದುಷ್ಕರ್ಮಿಗಳು !

ಆದರೆ ಪ್ರಯಾಗ್​ಗೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲಿನಿಂದ ದಾಳಿ ನಡೆದಿದ್ದು. ಈ ದಾಳಿಯಿಂದ ಪ್ರಯಾಣಿಕರು ತಮ್ಮ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋಗಳನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಇದರಲ್ಲಿ ರೈಲಿಗೆ ಆಗಿರುವ ಹಾನಿಯನ್ನು ಗಮನಿಸಬಹುದಾಗಿದೆ ಹಾಗೂ ಪ್ರಯಾಣಿಕರಿಗೆ ಉತ್ತಮ ಭದ್ರತೆಯನ್ನು ಒದಗಿಸಲು ಪ್ರಯಾಣಿಕರು ರೈಲ್ವೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಘಟನೆಯ ನಂತರ ಜಲಗಾಂವ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಚಲಿಸುತ್ತಿದ್ದ ರೈಲಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲು ಎಸೆದ ಪರಿಣಾಮ ಕಿಟಕಿ ಗಾಜುಗಳು ಒಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮಾರ್ಗದಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments