Monday, September 8, 2025
HomeUncategorizedಪ್ರಚೋದನಕಾರಿ ಭಾಷಣ ಆರೋಪ : ಪ್ರಮೋದ್​ ಮುತಾಲಿಕ್​ ವಿರುದ್ದ ಪ್ರಕರಣ ದಾಖಲು !

ಪ್ರಚೋದನಕಾರಿ ಭಾಷಣ ಆರೋಪ : ಪ್ರಮೋದ್​ ಮುತಾಲಿಕ್​ ವಿರುದ್ದ ಪ್ರಕರಣ ದಾಖಲು !

ಹಾಸನ : ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು. ಸಕಲೇಶಪುರ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿದೆ.
ಜ.9 ರಂದು ಸಕಲೇಶಪುರರಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ  ಭಾಷಣ ಮಾಡಿದ್ದ ಪ್ರಮೋದ್ ‌ಮುತಾಲಿಕ್. ಈ ಕಾರ್ಯಕ್ರಮದಲ್ಲಿ. ‘ಹಿಂದೂಗಳು ಮುಸ್ಲಿಂರಿಗೆ ಕುರಿಮಾಂಸ ಎಂದು ಹೇಳಿ ಕೊಡಿ ಅವರು ಹಲಾಲ್ ಆಗಿಲ್ಲ ಎಂದು ತಿನ್ನುವುದಿಲ್ಲ, ಆದರೆ ಹಿಂದೂಗಳು ಮುಸ್ಲಿಂ ಹೋಟೆಲ್‌ಗಳಿಗೆ ಹೋಗಿ ಹಲಾಲ್ ಮಾಡಿರುವ ಮಾಂಸವನ್ನು ಚಪ್ಪರಿಸಿಕೊಂಡು ತಿಂತಾರೆ. ಅದು ಸಗಣಿ ತಿಂದಂಗೆ, ಇದು ಸರಿನಾ.

2003ರಲ್ಲಿ ಸಕಲೇಶಪುರದಲ್ಲಿ ಹಿಂದುಗಳ ಏರಿಯಾದಲ್ಲಿ ಮುಸ್ಲಿಂ ಸಮುದಾಯದವರು ಒಂದು ಗೋಮಾಂಸದ ಅಂಗಡಿಯನ್ನು ತೆರೆದಿದ್ದರು, ಆಗ ಹಿಂದೂಗಳು ಸುಮ್ಮನೆ ಇರಲಿಲ್ಲ, ಅದೇ ಅಂಗಡಿಯ ಎದುರು ಒಂದು ಹಂದಿಮಾಂಸದ ಅಂಗಡಿಯನ್ನು ತೆರೆದು ಉತ್ತರ ಕೊಟ್ಟರು. ಮುಸ್ಲಿಂರು ಏನಾದರು ದನದ ಮಾಂಸದ ಅಂಗಡಿಯನ್ನು ತೆರೆದರೆ, ಅವರ ಮನೆಯ ಮುಂದೆ ಹಂದಿ ಕಡಿದು ತಿಂತೀವಿ. ನಮ್ಮ ಸಹನೆಗೂ ಒಂದು ಮಿತಿ ಇದೆ. ಗೋಮಾತೆಯ ರಕ್ಷಣೆಗೆ ಇವತ್ತೆ ಪ್ರತಿಜ್ಞೆ ಮಾಡೋಣ.

ಇದನ್ನೂ ಓದಿ :ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ !

ಬೆಳಿಗ್ಗೆ ತರಕಾರಿ ಅಂಗಡಿಗೆ ಹೋದಾಗ ಹಿಂದೂಗಳ ಅಂಗಡಿಯಲ್ಲಿ ಖರೀದಿ ಮಾಡೋಣ. ದೇವಸ್ಥಾನಕ್ಕೆ ಹೋದಾಗ ಹಿಂದೂಗಳ ಹತ್ತಿರ ಹಣ್ಣು ಕಾಯಿ ಖರೀದಿಸಬೇಕು. ಆಗ ಗೋಮಾತೆ ರಕ್ಷಣೆ ಮಾಡಿದಂತೆ ಆಗುತ್ತದೆ. ಆದರೆ ನಾವು ಮುಸ್ಲಿಂರ ಬಳಿ ತೆಗೆದುಕೊಂಡು ನಮ್ಮ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ಮುಸ್ಲಿಂರ ಹೋಟೆಲ್‌ಗೆ ಹೋಗುವಾಗ ಒಂದು ಸಾರಿ ಮೂತ್ರ ವಿಸರ್ಜನೆ ಮಾಡಿರುವುದನ್ನು ನೆನಪಿಸಿಕೊಳ್ಳಿ, ಮೂತ್ರ ವಿಸರ್ಜನೆ ಮಾಡಿರುವವರನ್ನು ಪೊಲೀಸರು, ಸರ್ಕಾರ ಜಿಲ್ಲೆಯಿಂದ ಗಡಿಪಾರು ಮಾಡದಿದ್ದರೆ ನಾವೇ ಆತನ ಬಾಯಿಗೆ ಮೂತ್ರ ವಿಸರ್ಜನೆ ಮಾಡುತ್ತೇವೆ.

ಸಕಲೇಶಪುರ ಕಾಫಿ ಎಸ್ಟೇಟ್‌ಗಳಲ್ಲಿರುವ ಬಾಂಗ್ಲಾ ದೇಶದವರನ್ನು ಹೊರಹಾಕಬೇಕು. ಇಲ್ಲದ್ದಿದ್ದಲಿ ಮುಂದಿನ ದಿನಗಳಲ್ಲಿ ಗಂಡಾಂತರ ತಪ್ಪಿದ್ದಲ್ಲ. ಕಾಫಿ ತೋಟಕ್ಕೆ ಜನರು ಬೇಕಾದಲ್ಲಿ ನಾನು ಉತ್ತರ ಕರ್ನಾಟಕದಿಂದ ಕಳುಹಿಸಿ ಕೊಡುತ್ತೇನೆ. ಇಲ್ಲವಾದಲ್ಲಿ ನಾವೇ ಬಂದು ಬಾಂಗ್ಲಾ ಮುಸ್ಲಿಂರನ್ನು ಹೊರ ಹಾಕುತ್ತೇವೆ
ಹಿಂದೂಗಳ ರಕ್ಷಣೆಗಾಗಿ ಬರ್ಜಿ, ಕತ್ತಿ, ತಲ್ವಾರ್, ಬಂದೂಕುಗಳನ್ನು ಮನೆಗಳಲ್ಲಿ ಕಾಣುವ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ಆಗುತ್ತಿದೆ.ಇದನ್ನು ಕ್ರೂರವಾಗಿ ನಾವು ಖಂಡಿಸುತ್ತೇವೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
ಪ್ರಮೋದ್​ ಮುತಾಲಿಖ್​ ಭಾಷಣದ ಬಗ್ಗೆ ಆಕ್ಷೇಪ ಹೊಂದಿರುವ   ಗುಪ್ತ ಮಾಹಿತಿ ಸಿಬ್ಬಂದಿ ಶ್ರೀಧರ್ ಎಂ.ಕೆ ಅವರು ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ದೂರು ದಾಖಲಿಸಿಕೊಂಡಿರುವ ಪೊಲೀಸರು ಬಿಎನ್‌ಎಸ್ 2023, U/S-196 (1), 353 (2), 3 (5) ಅಡಿ ಪ್ರಕರಣ ದಾಖಲು ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments