Tuesday, September 9, 2025
HomeUncategorizedಪೊಲೀಸ್​ನ ಖೆಡ್ಡಾಗೆ ಕೆಡುವಿ ಲಕ್ಷ ಲಕ್ಷ ಪೀಕಿದ ಮಾಯಾಂಗಿನಿ ಬಂಧನ

ಪೊಲೀಸ್​ನ ಖೆಡ್ಡಾಗೆ ಕೆಡುವಿ ಲಕ್ಷ ಲಕ್ಷ ಪೀಕಿದ ಮಾಯಾಂಗಿನಿ ಬಂಧನ

ಕಲಬುರಗಿ: ಕೆಲದಿನಗಳ ಹಿಂದೆ ಹನಿಟ್ರ್ಯಾಪ್ ಕೆಸ್ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆ ಹನಿಟ್ರ್ಯಾಪ್ ಪ್ರಕರಣದ ಕಿಲಾಡಿ ಹೆಣ್ಣು ಇದೀಗ ಕಾನ್ಸ್ಟೆಬಲ್‌ನೊಬ್ಬನನ್ನ ಹನಿಟ್ರ್ಯಾಪ್ ಬಲೆಗೆ ಕೆಡುವಿ ಆತನ ಲೈಫೆ ಬರ್ಬಾದ್ ಮಾಡಿದ್ದಾಳೆ.

ನಿಮಗೆ‌ ಚೆನ್ನಾಗಿ ನೆನಪಿರಬಹುದು. ಕೆಲದಿನಗಳ ಹಿಂದೆ ಕಲಬುರಗಿಯಲ್ಲಿ ಕೆಲ ಸಂಘಟನೆಗಳು ಹನಿಟ್ರ್ಯಾಪ್ ದಂಧೆ ನಡೆಸಿ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಸದ್ಯ ಅದೇ ಗ್ಯಾಂಗ್‌ನ ಖತರನಾಕ್ ಲೇಡಿಯೊಬ್ಬಳೂ ಜನ್ರಿಗೆ ರಕ್ಷಣೆ ನೀಡಬೇಕಾದ ಆರಕ್ಷಕನನ್ನೆ ಹನಿಟ್ರ್ಯಾಪ್ ಬಲೆಗೆ ಕೆಡುವಿದ್ದಾಳೆ. ಈ ಫೋಟೊದಲ್ಲಿ ಕಾಣ್ತಾಯಿರೋ ಇತನ ಹೆಸರು ಗುರುನಾಥ್ ರಾಠೋಡ್. ಸದ್ಯ ಕಲಬುರಗಿಯ ಸೆನ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿರೋ ಗುರುನಾಥ್ ಮತ್ತು ಮಾಯಾಂಗಿನಿ ಪೂಜಾ ಡೊಂಗರಗಾಂವ್ ಮಧ್ಯೆ ಕೆಲ ವರ್ಷಗಳ ಹಿಂದೆ ಪರಿಚಯವಾಗಿರುತ್ತೆ. ಹೀಗೆ ಇಬ್ಬರ ನಡುವಿನ ಪರಿಚಯ ಇಬ್ಬರ ಸಂಬಂಧವನ್ನ ಮತ್ತಷ್ಟು ಗಟ್ಟಿ ಮಾಡಿತ್ತು. ಇದೇ ಸಂದರ್ಭದಲ್ಲಿ ಗುರುನಾಥ್ ರಾಠೋಡ್ ಜೊತೆ ಡಿಫ್ರೆಂಟ್ ಡಿಫ್ರೆಂಟ್ ಫೋಟೊ ತೆಗೆಸಿಕೊಳ್ತಾಳೆ. ಹೀಗೆ ಕೆಲದಿನಗಳ ನಂತರ ಕಾನ್ಸ್ಟೆಬಲ್‌ಗೆ ಕಾಲ್ ಮಾಡಿ 15 ಲಕ್ಷ ರೂಪಾಯಿ ಕೊಡು.. ಇಲ್ಲಾಂದ್ರೆ ನಮ್ಮಿಬ್ಬರ ಮಧ್ಯೆಗಿನ ಖಾಸಗಿ ಫೋಟೊಗಳನ್ನ ಲಿಕ್ ಮಾಡುವುದಾಗಿ ಅಮರ್‌ಸಿಂಗ್ ಎಂಬಾತನ ಜೊತೆಗೂಡಿ ಬೆದರಿಕೆ ಹಾಕ್ತಾಳೆ. ಆಗ ಕಾನ್ಸ್ಟೆಬಲ್ ಗುರುನಾಥ ರಾಠೋಡ್ ಪತ್ನಿ ಬಳಿ ಪೂಜಾ ಡೊಂಗರಗಾಂವ್‌ ಎಂಟು ಲಕ್ಷ ರೂಪಾಯಿ ವಸೂಲಿ ಮಾಡಿದ್ದಾಳೆ.

ಇನ್ನೂ ಈ ಮಾಯಾಂಗಿನಿ ಪೂಜಾ ಡೊಂಗರಗಾಂವ್ ಸಾಮಾನ್ಯವಾದ ಮಹಿಳೆ ಅಲ್ಲವೇ ಅಲ್ಲ‌‌. ತನ್ನ ಮೋಹಕ ನೋಟದಿಂದಲೇ ಅನೇಕರಿಗೆ ತನ್ನ ಮಾಯಾಜಾಲಕ್ಕೆ ಸೆಳೆದಿದ್ದಳು. ಅದರಂತೆ ಕಲಬುರಗಿಯ ಸೆನ್ ಪೊಲೀಸ್ ಕಾನ್ಸ್ಟೆಬಲ್ ಗುರುನಾಥ ರಾಠೋಡ್ ಕೂಡ ಈಕೆಯ ಬಲೆಗೆ ಬಿದ್ದಿದ್ದನು. 15 ಲಕ್ಷ ರೂಪಾಯಿ ಕೊಡು. ಇಲ್ಲಾಂದ್ರೆ ಎಲ್ಲಾ ಫೋಟೊಗಳನ್ನ ವೈರಲ್ ಮಾಡುವುದಾಗಿ ಪೂಜಾ ಡೊಂಗರಗಾಂವ್ ಎಚ್ಚರಿಗೆ ಬೆಚ್ಚಿಬಿದ್ದ ಕಾನ್ಸ್ಟೆಬಲ್ ಕುಟುಂಬ, ಪೂಜಾ ಡೊಂಗರಗಾಂವ್ ವಿರುದ್ಧ ಕಾನ್ಸ್ಟೆಬಲ್ ಪತ್ನಿ ಅಟ್ರಾಸಿಟಿ ಪ್ರಕರಣ ದಾಖಲಿಸ್ತಾಳೆ. ಇದರಿಂದ ಕೆರಳಿದ ಪೂಜಾ ಡೊಂಗರಗಾಂವ್, ಕಾನ್ಸ್ಟೆಬಲ್ ಗುರುನಾಥ ರಾಠೋಡ್ ವಿರುದ್ಧ ಕಲಬುರಗಿ ನಗರದ ಎಮ್‌ಬಿ ನಗರ ಪೊಲೀಸ್ ಠಾಣೆಯಲ್ಲಿ ರೆಪ್ ಕೆಸ್ ದಾಖಲಿಸ್ತಾಳೆ. ರೆಪ್ ಕೆಸ್ ದಾಖಲಾಗ್ತಿದ್ದಂಗೆ ಪ್ರಕರಣವನ್ನ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಯಿಸುತ್ತಾರೆ. ಸಧ್ಯ ಪ್ರಕರಣವನ್ನ ದಾಖಲಿಸಿಕೊಂಡು ಕಾನ್ಸ್ಟೆಬಲ್ ಗುರುನಾಥ ರಾಠೋಡ್‌ರನ್ನ ಪೊಲೀಸರು ಬಂಧಿಸಿದ್ದಾರೆ.

ಅದೇನೆ ಇರಲಿ ಕಲಬುರಗಿಯಲ್ಲಿ ಹನಿಟ್ರ್ಯಾಪ್ ದಂಧೆಗೆ ಕಡಿವಾಣ ಬಿದ್ದೆ ಬಿಡ್ತು ಅನ್ನೊದ್ರೊಳಗೆ, ಜನರಿಗೆ ರಕ್ಷಣೆ ನೀಡಬೇಕಾದ ಪೇದಯೇ ಇದೀಗ ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದಿದ್ದು ದುರಂತವೇ ಸರಿ‌‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments