Saturday, August 23, 2025
Google search engine
HomeUncategorizedಮಂಡ್ಯ ಜನ ಸಿಹಿ ನೀರು ನೀಡೋ ಜನರೆ ಹೊರತು, ವಿಷ ನೀಡೋ ಜನರಲ್ಲಾ : ಸಿ.ಎಂ...

ಮಂಡ್ಯ ಜನ ಸಿಹಿ ನೀರು ನೀಡೋ ಜನರೆ ಹೊರತು, ವಿಷ ನೀಡೋ ಜನರಲ್ಲಾ : ಸಿ.ಎಂ ಸಿದ್ದರಾಮಯ್ಯ

ಮಂಡ್ಯ : ಸಕ್ಕರೆ ನಗರಿ ಮಂಡ್ಯದಲ್ಲಿ ಅಕ್ಷರ ಜಾತ್ರೆ ಕಂಪು ಮೊಳಗಿದೆ. 87 ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ನಾಡದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯ ಜನ ಸಿಹಿ ನೀರು ನೀಡೋ ಜನರೆ ಹೊರತು ವಿಷ ನೀಡುವ ಜನ ಮಂಡ್ಯದವ್ರಲ್ಲ ಅಂತಾ ಜಿಲ್ಲೆಯ ಜನರನ್ನ ಹಾಡಿ ಹೊಗಳಿದ್ದಾರೆ.

ಸಕ್ಕರೆ ನಗರಿ ಮಂಡ್ಯದಲ್ಲಿ 87 ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಸಮಾರಂಭದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದ ಉದ್ದಕ್ಕೂ ಮಂಡ್ಯದ ಜನರನ್ನು  ‌ಹಾಡಿಹೊಗಳಿದ್ರು. ಈ ಸಮ್ಮೇಳನವನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಇದು ಕನ್ನಡದ ಹಬ್ಬ, ಮಂಡ್ಯ ಜಿಲ್ಲೆಯನ್ನ ಭತ್ತದ ಕಣಜ, ಸಕ್ಕರೆನಾಡು ಭಾಷಾಭಿಮಾನ ಇರೋ ಜಿಲ್ಲೆ. ಅಪ್ಪಟ್ಟ ಕನ್ನಡಿಗರು ವಾಸ ಮಾಡೋ ಜಿಲ್ಲೆ ಮಂಡ್ಯ. ಆಧುನಿಕ ಮಂಡ್ಯ ಕ್ಕೆ ಮೈಸೂರು ಮಹಾರಾಜರು ,ಹೈದರಾಲಿ, ಟಿಪ್ಪುಕೊಡುಗೆ ಅಪಾರ ಎಂದು ಹೇಳಿದರು.

ಇನ್ನೂ ಮುಂದುವರೆದು ಮಾತನಾಡಿದ ಸಿಎಂ ಸಿದ್ದರಾಮಯ್ಯ 87 ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನ ನಾಡಿನ ಸಮಸ್ಯೆಗೆ ಉತ್ತರ ಕೊಡುವ ಸಮ್ಮೇಳನವಾಗಲಿ. ನಾಡಿನಲ್ಲಿ ಕೆಲವು ಮತೀಯ ಶಕ್ತಿಗಳು ಕೋಮು ವಿಷ ಭಿತ್ತುವ ಪ್ರಯತ್ನ ಮಾಡ್ತಿದ್ದಾರೆ.ಮಂಡ್ಯ ಜನ ಸಿಹಿ ನೀಡುವವರೇ ಹೊರತು, ವಿಷ ನೀಡುವವರಲ್ಲ. ಕೋಮು ವಿಷ ಬೀಜ ಬಿತ್ತುವವರನ್ನ ಮಂಡ್ಯದ ಜನ ಒಪ್ಪಿಲ್ಲ, ಅದಕ್ಕಾಗಿ ಮಂಡ್ಯದ ಜನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments