Saturday, August 23, 2025
Google search engine
HomeUncategorizedಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಾಮಾಚಾರದ ಭೀತಿ !

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಾಮಾಚಾರದ ಭೀತಿ !

ಮಂಡ್ಯ :  87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಇದೇ 20 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಬರುವಂತಹ ಸಾಹಿತ್ಯಾಸಕ್ತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ. ಈ ಮಧ್ಯೆ ಕಪ್ಪು ಚುಕ್ಕೆ ಎಂಬಂತೆ ಯಾರೋ ಕಿಡಿಗೇಡಿಗಳು ಸಮ್ಮೇಳನದ ಜಾಗದಲ್ಲಿ ವಾಮಾಚಾರ ನಡೆಸಿದ್ದಾರೆ ಎಂದು ಮಾಹಿತಿನ ದೊರೆತಿದೆ.

ಇದೇ ತಿಂಗಳು  20ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನ ಅದ್ದೂರಿಯಾಗಿ ನಡೆಸಲು ಎಲ್ಲಾ ರೀತಿಯ ಸಕಲ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಹಲವಾರು ಸಮಿತಿಗಳನ್ನ ರಚಿಸಿ ಯಾವುದೇ ತೊಂದರೆಯಾಗದಂತೆ ಒಂದೊಂದು ಸಮಿತಿ ಒಂದೊಂದು ಜವಾಬ್ದಾರಿ ಹೊತ್ತಿವೆ. ಇಂತಹದ್ದರಲ್ಲಿ ಈ ಮದ್ಯೆ ಯಾರೋ ಕಿಡಿಗೇಡಿಗಳು ಸಮ್ಮೇಳನದ ಪ್ರಮುಖ ವೇದಿಕೆಯ ಹಿಂಭಾಗದ ಅಣತಿ ದೂರದಲ್ಲಿ ವಾಮಾಚಾರ ನಡೆಸಿದ್ದಾರೆ.

ಈಗಾಗಲೇ ಪ್ರಗತಿಪರ ಸಂಘಟನೆಗಳು ಸಮ್ಮೇಳನದಲ್ಲಿ ಬಾಡೂಟ ಬೇಕು. ಬಾಡು ಮಂಡ್ಯದ ಸಂಸ್ಕೃತಿ. ಬಾಡೇ ನಮ್ಮ ಗಾಡು ಎಂದು ಪಟ್ಟು ಹಿಡಿದಿದ್ದಾರೆ. ಇದೇ ಸಮ್ಮೇಳನದ ಆಯೋಜಕರಿಗೆ ದೊಡ್ಡ ತಲೆ ನೋವಾಗಿದೆ. ಈ ಮದ್ಯೆ ವಾಮಾಚಾರ ನಡೆಸಿರೋದು ಆಯೋಜಕರಲ್ಲಿ ಆತಂಕ ಮೂಡಿಸಿದೆ. ಈ ವಾಮಾಚಾರದಿಂದ ಸಮ್ಮೇಳನಕ್ಕೆ ಏನಾದರೂ ಅಡ್ಡಿಯಾಗಬಹುದಾ ? ಅಕಸ್ಮಾತ್ ಏನಾದ್ರೂ ತೊಂದರೆಯಾಗಬಹುದಾ ಎಂಬ ಆತಂಕ ಮನೆ ಮಾಡಿದೆ.

ಒಟ್ಟಾರೆ, ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಯಾವುದೇ ತೊಂದರೆಯಾಗಬಾರದು, ಸಮ್ಮೇಳನ ಯಶಸ್ವಿಯಾಗಬೇಕು ಎಂದುಕೊಂಡು ಹಗಲಿರುಳು ಶ್ರಮಿಸುತ್ತಿರುವ ಆಯೋಜಕರಿಗೆ ಈ ವಾಮಾಚಾರ ಆತಂಕ ಸೃಷ್ಟಿಸಿರೋದಂತು ಸತ್ಯ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments