Tuesday, August 26, 2025
Google search engine
HomeUncategorizedರಾಜ್ಯ ಕಂಡ ಶ್ರೇಷ್ಟ ರಾಜಕಾರಣಿಯಾದ ಎಸ್​.ಎಂ ಕೃಷ್ಣರ ಜೀವನಗಾಥೆ !

ರಾಜ್ಯ ಕಂಡ ಶ್ರೇಷ್ಟ ರಾಜಕಾರಣಿಯಾದ ಎಸ್​.ಎಂ ಕೃಷ್ಣರ ಜೀವನಗಾಥೆ !

ಬೆಂಗಳೂರು: ರಾಜ್ಯ ಕಂಡ ಶ್ರೇಷ್ಟ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಇಂದು ರಾತ್ರಿ ತಮ್ಮ ಮನೆಯಲ್ಲಿ ನಿಧನರಾಗಿದ್ದು. ರಾಜಕೀಯ ಗಣ್ಯರು ಸೇರಿದಂತೆ ಇಡೀ ರಾಜ್ಯವೆ ಎಸ್​.ಎಂ ಕೃಷ್ಣರ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ಇಂತಹ ಶ್ರೇಷ್ಟ ರಾಜಕಾರಣಿ ಜೀವನವನ್ನು ಒಮ್ಮೆ ನೋಡುವುದಾದರೆ.

ಇದನ್ನೂ ಓದಿ :ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ನಿಧನ : ನಾಳೆ ಸರ್ಕಾರಿ ರಜೆ ಘೋಷಣೆ !

ಎಸ್​.ಎಂ ಕೃಷ್ಣ ಎಂದೆ ಖ್ಯಾತರಾಗಿರುವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮೇ 1, 1932 ರಂದು ಮಂಡ್ಯದಲ್ಲಿ ಜನಿಸಿದರು. ಪ್ರಸ್ತತು ಇವರಿಗೆ 92 ವರ್ಷ ವಯಸ್ಸಾಗಿದ್ದು. ಇವರ ಪತ್ನಿ ಪ್ರೇಮ ಮತ್ತು ಇಬ್ಬರು ಮಕ್ಕಳಾದ ಮಾಳವಿಕಾ ಕೃಷ್ಣ ಮತ್ತು ಶಾಂಭವಿ ಕೃಷ್ಣ, ಮೊಮ್ಮಕ್ಕಳು, ಅಪಾರ ಬಂಧು ಮಿತ್ರರನ್ನು ಇವರು ಅಗಲಿದ್ದಾರೆ.

ಇಂತಹ ಎಸ್​ಎಂ ಕೃಷ್ಣ ಮೊದಲಿಗೆ ಪ್ರಜಾ ಸೋಷಲಿಸ್ಟ್ ಪಾರ್ಟಿಯಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದರು (1962 ರಿಂದ 1971), ಬಳಿಕ ಕಾಂಗ್ರೆಸ್‌ ಸೇರಿ ತಮ್ಮ ರಾಜಕೀಯದ ಉತ್ತುಂಗವನ್ನು ಕಾಂಗ್ರಸ್​ನಲ್ಲಿ ಕಂಡುಕೊಂಡರು. ಇಂತಹ ಎಸ್​ ಎಂ ಕೃಷ್ಣ ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಖಾತೆಗಳನ್ನು ನಿರ್ವಹಿಸಿದರು. 1983ರಲ್ಲಿ ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ನಂತರ 1988ರಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು.

ನಂತರ 1989 ರಿಂದ 1992ರವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾಗಿ ಕಾರ್ಯನಿರ್ವಹಿಸಿದ ಎಸ್​ಎಂ ಕೃಷ್ಣ, 1992ರಿಂದ 1994ರವರೆಗೆ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1996ರಲ್ಲಿ ರಾಜ್ಯಸಭೆಗೆ ನೇಮಕಗೊಂಡು ಕರ್ನಾಟಕದ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದರು.

ಈ ರೀತಿಯಾಗಿ ರಾಜಕೀಯದ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಾ ಬಂದ ಇವರು 1999ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 2004ರವರೆಗೆ ಮುಖ್ಯಮಂತ್ರಿಯಾಗಿದ್ದ ಇವರು ಬರಗಾಲ, ಕಾಡುಗಳ್ಳ ವೀರಪ್ಪನ್​ ಸೇರಿದಂತೆ ಅನೇಕ ಸಮಸ್ಯೆಗಳ ನಡುವೆಯು ಉತ್ತಮ ಆಡಳಿತವನ್ನು ನೀಡಿದರು.

ಇವೆಲ್ಲದರ ಜೊತೆಗೆ ರಾಷ್ಟ್ರಮಟ್ಟದಲ್ಲಿಯು ಭಾರತವನ್ನು ಪ್ರತಿನಿಧಿಸಿದರು. ವಿಶ್ವಸಂಸ್ಥೆಯಲ್ಲಿ, ಮತ್ತು ಕಾಮನ್​ವೆಲ್ತ್​​ ಒಕ್ಕೂಟದಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದರು. 2004 ರಿಂದ ಮಹರಾಷ್ಟ್ರದ ರಾಜ್ಯಪಾಲರಾಗಿ ನೇಮಕಗೊಂಡ ಇವರು 2008ರವರೆಗೆ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. ಮತ್ತು ವಿದೇಶಾಂಗ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದರು. ಬದಲಾದ ರಾಜಕೀಯ ಸನ್ನಿವೇಶಗಳ ಪರಿಣಾಮದಿಂದಾಗಿ 2017ರಲ್ಲಿ ಕಾಂಗ್ರೆಸ್​ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾದರು.

ಇಂತಹ ಶ್ರೇಷ್ಟ ರಾಜಕಾರಣಿ ಇಂದು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು. ಇವರ ಸಾವು ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಘಿ ಪರಿಣಮಿಸಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments