Friday, August 29, 2025
HomeUncategorizedಸತತ 5 ಚುನಾವಣೆಗಳ ಬಳಿಕ ಶಿಗ್ಗಾಂವಿಯಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್​​ : ಗೆಲ್ಲಲು ಕಾರಣವೇನು ಗೊತ್ತಾ!

ಸತತ 5 ಚುನಾವಣೆಗಳ ಬಳಿಕ ಶಿಗ್ಗಾಂವಿಯಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್​​ : ಗೆಲ್ಲಲು ಕಾರಣವೇನು ಗೊತ್ತಾ!

ಹಾವೇರಿ : ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಂದಿದ್ದು. ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಡ ಕಾಂಗ್ರೆಸ್​ ಪಕ್ಷ ಗೆದ್ದು ಬೀಗಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಭದ್ರಕೋಟೆಯಾಗಿದ್ದ ಶಿಗ್ಗಾಂವಿಯನ್ನು ಕಾಂಗ್ರೆಸ್​ ಗೆದ್ದುಕೊಂಡಿದ್ದು. ಕಾಂಗ್ರೆಸ್​ ಅಭ್ಯರ್ಥಿ ಯಾಸಿರ್​ ಖಾನ್​ ಪಠಾಣ್​ ಗೆಲುವಿನ ನಗೆ ಬೀರಿದ್ದಾರೆ.

ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿಯ ವಷದಲ್ಲಿದ್ದ ಶಿಗ್ಗಾಂವಿ ಕ್ಷೇತ್ರ ಈ ಬಾರಿ ಕಾಂಗ್ರೆಸ್​ ಪಾಲಾಗಿದ್ದು. ಬಸವರಾಜ ಬೊಮ್ಮಾಯಿಯವರ ಗೆಲುವಿನ ನಾಗಲೋಟಕ್ಕೆ ಬ್ರೇಕ್​ ಹಾಕಿದ್ದಂತಾಗಿದೆ. ಸತತ ನಾಲ್ಕು ಬಾರಿ ಶಿಗ್ಗಾವಿ ಕ್ಷೇತ್ರದಲ್ಲಿ ಗೆದ್ದು ಬಂದಿದ್ದ ಬಸವರಾಜ್​ ಬೊಮ್ಮಯಿಯವರ ಪುತ್ರ ಭರತ್​ ಬೊಮ್ಮಯಿ ಈ ಬಾರಿ ಸೋಲನುಭವಿಸಿದ್ದಾರೆ.

ಕಳೆದ 5 ಚುನಾವಣೆಗಳಲ್ಲಿಯು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದ ಕಾಂಗ್ರೆಸ್​ ಪಕ್ಷ ಸತತವಾಗಿ 5 ಬಾರಿ ಸೋಲನುಭವಿಸಿತ್ತು. ಈ ಬಾರಿಯು ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್​ ನೀಡಿದ್ದ ಕಾಂಗ್ರೆಸ್​ಗೆ ಈ ಬಾರಿಯು ಸೋಲಿನ ಕಹಿ ಸಿಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಆದರೆ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್​ ಪಕ್ಷದ ಯಾಸಿರ್​ ಖಾನ್​ ಪಠಾಣ್​ ಗೆದ್ದು ಬೀಗಿದ್ದಾರೆ.

ಶಿಗ್ಗಾಂವಿಯಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಲು ಕಾರಣವೇನು! 

1) ಶಿಗ್ಗಾವಿ ಕ್ಷೇತ್ರದಲ್ಲಿ ರಾಜೀ ರಾಜಕೀಯಕ್ಕೆ ಮುಕ್ತಿ ಹಾಡಿ ಗಂಭೀರವಾಗಿ ಕಾಂಗ್ರೆಸ್ ಚುನಾವಣೆ ಎದುರಿಸಿದ ಹಿನ್ನಲೆ ಯಾಸಿರ್​ ಖಾನ್​ ಪಠಾಣ್​ ಗೆಲುವು ಸಾಧಿಸಿರಬಹುದು.
2) ಸಚಿವ ಸತೀಶ್ ಜಾರಕಿಹೊಳಿ ಶಿಗ್ಗಾವಿಯಲ್ಲೇ ವಸತಿ ಹೂಡಿ ತಮ್ಮದೇ ಚುನಾವಣೆ ಎಂಬಂತೆ ಅಹಿಂದ ಮತದಾರರ ಓಲೈಕೆ ಮಾಡಿದರು.
3) ಬಿಜೆಪಿ ನಂಬಿಕೊಂಡಿದ್ದ ಲಿಂಗಾಯತ ಮತದಾರಲ್ಲಿ ಸ್ವಲ್ಪ ಮತದಾರರು‌‌ ಕೈ ಪರ ಮತ ಚಲಾಯಿಸಿದ ಹಿನ್ನಲೆ ಪಠಾಣ್ ಗೆದ್ದರು
4) ಕಾಂಗ್ರೆಸ್ ಪಡೆ ಶಿಗ್ಗಾವಿಯಲ್ಲಿಯೇ ಬೀಡು ಬಿಟ್ಟು ಕ್ಯಾಂಪೇನ್ ಮಾಡಿದ್ದು ಪಠಾಣ್ ಗೆ ವರವಾಯಿತು
5) ಖಾದ್ರಿ ಮನವೊಲಿಸಿ ಪಠಾಣ್ ಗೆ ಜೋಡಿ ಮಾಡಿ ಚುನಾವಣೆ ಎದುರಿಸಿದ ಹಿನ್ನಲೆ ಪಠಾಣ್ ಗೆಲುವು ಸುಲಭ ಆಯಿತು.
6) ಬಿಜೆಪಿಯ ವಕ್ಪ್ ಅಸ್ತ್ರ ವಿಫಲವಾಯಿತು.
7) ಬಸವರಾಜ ಬೊಮ್ಮಾಯಿ ಮೊದಲ ಸಲ ಬಹಳ ಪ್ರಭಲವಾಗಿ ಪ್ರಯೋಗಿಸಿದ್ದ ಹಿಂದುತ್ವ ಅಸ್ತ್ರ ವಿಫಲವಾಯಿತು.
8) ಪಂಚಮಸಾಲಿ ಮತದಾರರು ಕೈ ಕಡೆ ವಾಲಿದ್ದು.
9) ಪ್ರತಿ ಸಲ ಬೊಮ್ಮಾಯಿ ಪಾಲಾಗ್ತಿದ್ದ 10% ಮುಸ್ಲಿಂ ಮತಗಳೂ ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದ್ದು
10) ಸಿದ್ದರಾಮಯ್ಯ ಅವರನ್ನು ಮೂಡಾ ಹಗರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ಕುರುಬರು ಕೈ ಬಲಪಡಿಸಲು ಮತ್ತೆ ಕೃಪೆ ತೋರಿದರು.

ಈ ಎಲ್ಲಾ ಕಾರಣದಿಂದಾಗಿ ಶಿಗ್ಗಾಂವಿ ಕ್ಷೇತ್ರದಲ್ಲಿ ಭರತ್​ಬೊಮ್ಮಾಯಿಗೆ ಸೋಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments