Wednesday, August 27, 2025
HomeUncategorizedಡೈವೋರ್ಸ್ ವೇಳೆ ಕಿಡ್ನಿ ವಾಪಸ್ ಕೇಳಿದ ಗಂಡ

ಡೈವೋರ್ಸ್ ವೇಳೆ ಕಿಡ್ನಿ ವಾಪಸ್ ಕೇಳಿದ ಗಂಡ

ಅಮೆರಿಕ: ಇತ್ತೀಚಿಗೆ ದಾಂಪತ್ಯ ಜೀವನಲ್ಲಿ ಭಾಂದ್ಯವ್ಯ ಇಲ್ಲವಂತಾಗಿದೆ. ನೀವು ಅತೀ ಸಣ್ಣ ವಿಷ್ಯಕ್ಕೆ ಈಗಿನ ದಿನಗಳಲ್ಲಿ ದಂಪತಿ ಬೇರೆ ಆಗಿ ನಂತ್ರ ಪರಿಹಾರಕ್ಕೆ ಹಣಕ್ಕೆ ಬೇಡಿಕೆ ಇಡೋದನ್ನು ನಾವೆಲ್ಲ ನೋಡಿದ್ದೇವೆ.ಆದ್ರೆ ಇಲ್ಲೊಂದು ವಿಚ್ಛೇದನ ಪ್ರಕರಣ ಸ್ವಲ್ಪ ವಿಚಿತ್ರವಾಗಿದೆ.

ಹೌದು, ವಿಚ್ಛೇದನ ವೇಳೆ ‘ನನ್ನ ಕಿಡ್ನಿಯನ್ನು ನನಗೆ ಮರಳಿಸು’ ಎಂದು ಪತಿಯೊಬ್ಬ ತನ್ನ ಹೆಂಡ್ತಿಗೆ ಕೋರ್ಟ್​​ನಲ್ಲಿ ಬೇಡಿಕೆ ಇಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಇನ್ನೂ ಕಿಡ್ನಿ ಮರುಳಿ ನೀಡಲಿ ಆಗದ್ದಿದ್ದಲ್ಲಿ 1.2 ಮಿಲಿಯನ್ ಪೌಂಡ್(12.56ಕೋಟಿ ರೂ.) ಹಣ ನೀಡಬೇಕಾಗಿ ಬೇಡಿಕೆಯಿಟ್ಟಿದ್ದಾನೆ.

ಪತಿಗೆ ಈ ಹಿಂದೆ ಪತಿ ಕಿಡ್ನಿ ದಾನ ಮಾಡಿದ್ದನು

ಪತ್ನಿಯ ಎರಡು ಕಿಡ್ನಿಯೂ ವಿಫಲವಾದ್ದುದನ್ನು ತಿಳಿದು ಆಕೆಯನ್ನು ಬದುಕುಳಿಸುವ ಸಲುವಾಗಿ 2001 ರಲ್ಲಿ ಪತಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದ. ಆದರೆ ವರ್ಷಗಳ ನಂತರ ಇಬರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದ ಕಾರಣ ಡೈವೋರ್ಸ್ ಪಡೆದುಕೊಳ್ಳಲು ಪತ್ನಿ ಕೋರ್ಟ್​​​​ ಮೆಟ್ಟಿಲೇರಿದ್ದಾಳೆ. ಇದರಿಂದ ಕೋಪಗೊಂಡ ಪತಿ ಕಿಡ್ನಿ ವಾಪಸ್ ಕೇಳಿದ್ದಾನೆ.

1990ರಲ್ಲಿ ರಿಚರ್ಡ್ ಬಟಿಸ್ಟಾ(ಪತಿ) ಮತ್ತು ಡೊನ್ನೆಲ್ (ಪತ್ನಿ) ವಿವಾಹವಾಗಿದ್ದರು. ಇವರಿಗೆ ಮೂರು ಮಕ್ಕಳಿದ್ದಾರೆ. ಆದರೆ 2001 ರಲ್ಲಿ, ಡೊನ್ನೆಲ್​​ಗೆ ತೀವ್ರ ಅನಾರೋಗ್ಯ ಕಾಡಿದೆ. ಕಡೆಗೆ ಆಕೆಯ ಎರಡು ಕಿಡ್ನಿಯೂ ವಿಫಲವಾಗಿದೆ ಎಂದು ವೈದ್ಯರು ಘೋಷಿಸಿದ್ದರು. ಈ ವೇಳೆ ತನ್ನ ಪತ್ನಿಯ ಜೀವ ಉಳಿಸಲು ಬಟಿಸ್ಟಾ ಮುಂದಾಗಿದ್ದು, ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾನೆ. ಆದರೆ ಇದಾದ ಕೆಲವೇ ವರ್ಷಗಳ ಬಳಿಕ ಪತ್ನಿ ಡೊನ್ನೆಲ್ ವಿಚ್ಛೇದನ ಪಡೆಯಲು ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದಳು.

ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಪತಿಯ ಆರೋಪ

ಇದರಿಂದ ಸಾಕಷ್ಟು ನೋವುಂಡ ಪತಿ ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾನೆ. ಅಲ್ಲದೆ ಕಿಡ್ನಿ ವಾಪಸ್ ಇಲ್ಲವೇ ಹಣ ಕೊಡಿ ಎಂದು ಹೇಳಿದ್ದಾನೆ.

ಆದರೆ ರಿಚರ್ಡ್ ಗೆ ನ್ಯಾಯ ಸಿಗಲಿಲ್ಲ. ಕಿಡ್ನಿಯನ್ನು ವಾಪಸ್ ನೀಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಿಡ್ನಿ ವಾಪಸ್ ಕೊಡಲು ಸಾಧ್ಯವಿಲ್ಲ. ಡೊನ್ನೆಲ್ ತನ್ನ ಮೂತ್ರಪಿಂಡವನ್ನು ಹಿಂದಿರುಗಿಸಲು ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಅವರ ಪ್ರಾಣಕ್ಕೂ ಅಪಾಯವಿದೆ. ಆದ್ದರಿಂದ ಮೂತ್ರಪಿಂಡವನ್ನು ಮರಳಿ ನೀಡಲು ಸಾಧ್ಯವಿಲ್ಲ ಎಂದು ತಜ್ಞರ ಹೇಳಿಯನ್ನು ಆಧರಿಸಿ ಕೋರ್ಟ್​ ತೀರ್ಪು ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments