Friday, August 29, 2025
HomeUncategorizedಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ: ಯು.ಟಿ. ಖಾದರ್ 

ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ: ಯು.ಟಿ. ಖಾದರ್ 

ಮೂಡುಬಿದಿರೆ: ಶಾಲೆಗಳಲ್ಲಿ ಮಕ್ಕಳಿಗಾಗಿ ಇರುವ ಶೌಚಾಲಯವನ್ನು ಸೂಕ್ತ ಸ್ವಚ್ಛತಾ ಪರಿಕರ ಉಪಯೋಗಿಸಿಕೊಂಡು ಮಕ್ಕಳೇ ಸ್ವಚ್ಛಗೊಳಿಸುವುದರಲ್ಲಿ ಯಾವುದೇ ತಪ್ಪಲ್ಲ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಆವರಣದ ಕಸ ಗುಡಿಸುವುದರಲ್ಲಿ ತಪ್ಪಿಲ್ಲ.ಇಂತಹ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳು ಚಿಕ್ಕಂದಿನಲ್ಲೇ ಕಲಿತರೆ ಒಳ್ಳೆಯದು. ಇದು ಕೂಡ ಶಿಕ್ಷಣದ ಒಂದು ಭಾಗ’ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು.

ಇದನ್ನೂ ಓದಿ: ಜಪಾನ್​ ನಲ್ಲಿ ಭೂಕಂಪನ: ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದ ಪ್ರಧಾನಿ ಮೋದಿ

ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ ಹಾಗೂ ಕಸ ಗುಡಿಸುವುದಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಅಂತಹ ಕೆಲಸಗಳನ್ನು ಶಿಕ್ಷಕರು ಅಥವಾ ಶಾಲಾಭಿವೃದ್ಧಿ ಸಮಿತಿಯವರು ಮಾಡುವುದಿಲ್ಲ. ಆ ಕೆಲಸವನ್ನು ಮಕ್ಕಳು ಮಾಡುತ್ತಾರೆ. ಕೈಗವಸು ಹಾಕಿಕೊಂಡು, ಬ್ರಷ್ ಉಪಯೋಗಿಸಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪು ಅನಿಸುವುದಿಲ್ಲ’ ಎಂದರು. ‘ಚಿಕ್ಕವನಿದ್ದಾಗ ನಾನೂ ಶಾಲೆಯಲ್ಲಿ ಕಸ ಗುಡಿಸಿದ್ದ” ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಾಲಾ ಮುಖ್ಯಶಿಕ್ಷಕರ ವಿರುದ್ಧ ಸರ್ಕಾರ ಶಿಸ್ತುಕ್ರಮ ಕ್ರಮ ಕೈಗೊಂಡಿರುವ ಬಗ್ಗೆ ಮತ್ತು ಈ ವಿಚಾರದಲ್ಲಿ ಹೊಸ ನಿಯಮ ರೂಪಿಸಿದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments