Saturday, August 30, 2025
HomeUncategorizedರಾಷ್ಟ್ರಪಿತನಿಗೆ ಮೋದಿ ಸೇರಿ ಗಣ್ಯರಿಂದ ಪುಷ್ಪನಮನ

ರಾಷ್ಟ್ರಪಿತನಿಗೆ ಮೋದಿ ಸೇರಿ ಗಣ್ಯರಿಂದ ಪುಷ್ಪನಮನ

ನವದೆಹಲಿ : ಇಂದು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನಿರ್ಣಾಯಕ ಕೊಡುಗೆ ನೀಡಿದ, ಅಹಿಂಸಾ ತತ್ವದಿಂದಲೇ ಜಗತ್ತಿಗೆ ಸ್ಫೂರ್ತಿಯಾದ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ಮಾರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಪ್ರಯುಕ್ತ ವಿಜಯ ಘಾಟ್​ನಲ್ಲಿ ಶಾಸ್ತ್ರಿ ಅವರ ಸ್ಮಾರಕಕ್ಕೂ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ದ್ರೌಪತಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಗಣ್ಯರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು.

ಇಡೀ ಮಾನವಕುಲಕ್ಕೇ ದಾರಿದೀಪ

ಗಾಂಧಿ ಜಯಂತಿಯಂದು ರಾಷ್ಟ್ರಪಿತನಿಗೆ ಗೌರವ ಸಲ್ಲಿಸುತ್ತೇನೆ. ಅವರ ಜೀವನ ಹಾಗೂ ಸಂದೇಶಗಳು ದೇಶಕ್ಕೆ ಮಾರ್ಗವನ್ನು ತೋರಿಸಿವೆ. ಅವರ ತತ್ವಾದರ್ಶಗಳು ಭಾರತ ಮಾತ್ರವಲ್ಲ ಜಗತ್ತಿಗೆ ಬೆಳಕು ತೋರಿವೆ. ಇಡೀ ಮಾನವಕುಲಕ್ಕೇ ಅವರ ಜೀವನ, ಸಂದೇಶ, ಹೋರಾಟವು ದಾರಿದೀಪವಾಗಿದೆ. ಅವರ ಕನಸುಗಳನ್ನು ನನಸು ಮಾಡಲು ನಾವು ಎಂದಿಗೂ ಶ್ರಮಿಸೋಣ. ಏಕತೆ ಹಾಗೂ ಸಾಮರಸ್ಯ ಸಾಧನೆಗೆ ಇಂದಿನ ಪೀಳಿಗೆಯು ಗಾಂಧೀಜಿಯವರ ಸಂದೇಶಗಳನ್ನು ಪಾಲಿಸಬೇಕು ಎಂದು ನರೇಂದ್ರ ಮೋದಿ ಪೋಸ್ಟ್‌ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments