Sunday, August 24, 2025
Google search engine
HomeUncategorizedಟೊಮೆಟೊ ಬೆಳೆನಾಶ ಮಾಡಿದ ಕಿಡಿಗೇಡಿಗಳು : ಜಮೀನಿನಲ್ಲಿ ಕಣ್ಣೀರು ಹಾಕಿದ ಅನ್ನದಾತ

ಟೊಮೆಟೊ ಬೆಳೆನಾಶ ಮಾಡಿದ ಕಿಡಿಗೇಡಿಗಳು : ಜಮೀನಿನಲ್ಲಿ ಕಣ್ಣೀರು ಹಾಕಿದ ಅನ್ನದಾತ

ಚಾಮರಾಜನಗರ : ಟೊಮೆಟೊಗೆ ಬಂಗಾರದ ಬೆಲೆ ಇದ್ದು, ಈ ಹೊತ್ತಿನಲ್ಲಿ ಜಮೀನಿಗೆ ನುಗ್ಗಿ ಟೊಮೆಟೊ ಬೆಳೆಯನ್ನು ನಾಶಪಡಿಸಿದ ಕಿಡಿಗೇಡಿಗಳು, ಘಟನೆ ಜಿಲ್ಲೆಯ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಜು ಎಂಬುವವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟಮೊಟೊ ಬೆಳೆ ಇನ್ನೇನೂ ಕೈ ಸೇರುವಂತೆ ಇತ್ತು. ಆದರೆ ರಾತ್ರೋ ರಾತ್ರಿ ದುಷ್ಟಕರ್ಮಿಗಳು ತೋಟಕ್ಕೆ ನುಗ್ಗಿ ಎರಡು ಸಾವಿರ ಗಿಡಗಳನ್ನು ಬುಡಸಮೇತ ಕಿತ್ತು ಹಾಕಿ ವಿಕೃತಿ ಮೆರೆದಿದ್ದಾರೆ.

ಇದನ್ನು ಓದಿ : ಸದಸ್ಯರು ಪೇಪರ್ ಎಸೆಯೋದು ಸಹಜ : ಕಾಗೇರಿ ಸಮರ್ಥನೆ

ಕೈಗೆ ಬಂದ ತುತ್ತು‌ ಬಾಯಿಗೆ ಇಲ್ಲ ಎನ್ನುವಂತಾ ಪರಿಸ್ಥಿತಿಯಲ್ಲಿ ಅನ್ನದಾತ.

ಈಗಾಗಲೇ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊಗೆ ಶತಕ ದಾಟಿದೆ. ಈ ವೇಳೆ ಕಷ್ಟಪಟ್ಟು ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯನ್ನು ನಾಶಮಾಡಿರುವ ಸುದ್ದಿ ತಿಳಿದ ಮಾಲೀಕ, ಜಮೀನಿನಲ್ಲಿ ಮಲಗಿ ಹೊರಳಾಡಿ ಕಣ್ಣೀರು ಹಾಕುತ್ತಿದ್ದ, ಅನ್ನದಾತನ ಆಕ್ರಂದನ ಮುಗಿಲು ಮುಟ್ಟಿದೆ.

ಬುಡಸಮೇತ ಬೆಳೆಯನ್ನು ಕಿತ್ತು ಹಾಕಿರುವ ಆರೊಪಿಗಳ ವಿರುದ್ಧ ಬೇಗೂರು ಪೋಲಿಸ್ ಠಾಣೆಗೆ ದೂರು ಕೊಟ್ಟಿರುವ ಅನ್ನದಾತ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments