Monday, August 25, 2025
Google search engine
HomeUncategorized'ಡೀಲ್ ರಾಜ'ನನ್ನು ಬೆತ್ತಲು ಮಾಡಿದ ಪವರ್ ಟಿವಿ : ಛೀ.. ಥೂ..! ಎಂದ ಕರುನಾಡು

‘ಡೀಲ್ ರಾಜ’ನನ್ನು ಬೆತ್ತಲು ಮಾಡಿದ ಪವರ್ ಟಿವಿ : ಛೀ.. ಥೂ..! ಎಂದ ಕರುನಾಡು

ಬೆಂಗಳೂರು : ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಅಸಲಿತನವನ್ನು ನಿಮ್ಮ ಪವರ್ ಟಿವಿ ಜಗಜ್ಜಾಹೀರು ಮಾಡಿದೆ.

ಮೆಗಾ ಆಪರೇಷನ್​ ನಡೆಸಿದ ಪವರ್ ಟಿವಿ, ಅಬ್ರಹಾಂ ಬೃಹತ್ ನಾಟಕಕ್ಕೆ ತೆರೆ ಎಳೆಯಲು ಪವರ್ ಪ್ಲ್ಯಾನ್ ಮಾಡಿತ್ತು. ಮಧ್ಯವರ್ತಿ ಮೂಲಕವೇ ಆಟವಾಡುತ್ತಿದ್ದ ಕಲೆಗಾರ ಬಲೆಗೆ ಬಿದ್ದಿದ್ದೇ ರೋಚಕ!

ಕೆಎಎಸ್ ಅಧಿಕಾರಿ ಡಾ. ಸುಧಾರಿಗೆ ಇನ್ನಿಲ್ಲದಂತೆ ಕಾಡಿದ ನೌಟಂಕಿ ಹೋರಾಟಗಾರ, ಕೇಸ್​ನ ಸಂಬಂಧ ಮೊದಲಿಗೆ 100 ಕೋಟಿಗೆ ಡಿಮ್ಯಾಂಡ್​ ಮಾಡಿ ಕೊನೆಗೆ 1 ಕೋಟಿ ಡೀಲ್​ಗೆ ಒಪ್ಪಿಕೊಳ್ತಾನೆ. ಅಡ್ವಾನ್ಸ್​ ಪೇಮೆಂಟ್ ಆಗಿ 25 ಲಕ್ಷ ಸ್ವೀಕರಿಸಲು ಮುಂದಾಗಿದ್ದು, ಕಂತುಗಳಲ್ಲಿ ಒಟ್ಟು 1 ಕೋಟಿ ರೂಪಾಯಿ ಪಡೆದುಕೊಳ್ಳಲು ಪ್ಲ್ಯಾನ್ ಮಾಡಿದ್ರು. ಅದರಂತೆ ಖಾಸಗಿ ಹೋಟೆಲ್​​ಗೆ ಬರಲು ಹೇಳುವ ಟಿ.ಜೆ.ಅಬ್ರಹಾಂ, ಆದರೆ ಕೇವಲ 5 ಲಕ್ಷ ತಂದಿದ್ದಾರೆ ಎಂದು ಗೊತ್ತಾಗಿ ಚಕ್ಕರ್​ ಹಾಕಿದ್ರು.

ಬೆಂಗಳೂರಿನ ಇಂದಿರಾನಗರದಲ್ಲಿರುವ ಅಬ್ರಹಾಂ ನಿವಾಸದತ್ತ ಪವರ್ ತಂಡ ತೆರಳಿದ್ದು, ಡಾ.ಸುಧಾ ತಂದೆ, ಮಧ್ಯವರ್ತಿಯೊಂದಿಗೆ ಪವರ್ ಟಿವಿ ಕಾರ್ಯಾಚರಣೆಗೆ ಇಳಿತು. ಡಾ.ಸುಧಾ ತಂದೆ ಜೊತೆ ಡೀಲ್ ಸಂಬಂಧ ಟಿ.ಜೆ.ಅಬ್ರಹಾಂ ಮಾತುಕತೆ ನಡೆಸಿ, ಅಡ್ವಾನ್ಸ್ ಹಣ 25 ಲಕ್ಷ ರೂಪಾಯಿಗಳನ್ನ ಟೇಬಲ್ ಮೇಲಿಡಲು ಸೂಚಿಸಿದ್ರು.

ಇದನ್ನೂ ಓದಿ : ಕಾಂಗ್ರೆಸ್ ಶಾಸಕರಿಗೆ ‘ವಿಮಾನ ಟಿಕೆಟ್ ಬುಕಿಂಗ್’ ಮಾಡಿದ್ದಾರೆ : ಡಿಕೆಶಿ ಮತ್ತೊಂದು ಬಾಂಬ್

500ರ ನೋಟೇ ಬೇಕಂತೆ..!

ಅಡ್ವಾನ್ಸ್ ಹಣದಲ್ಲಿ ಒಂದಿಷ್ಟು ಲಕ್ಷ ಪಿಂಕ್ ನೋಟು ಇದ್ದಿದ್ದಕ್ಕೆ ಅಬ್ರಹಾಂ ಆಕ್ಷೇಪ ವ್ಯಕ್ತಪಡಿಸಿದ್ರು. ಪಿಂಕ್ ನೋಟುಗಳನ್ನ ಎಕ್ಸ್​​ಚೇಂಜ್​​​​ ಮಾಡಿಸಿಕೊಂಡು ಬರಲು ಸೂಚಿಸಿದ್ರು. ಉಳಿದ 500ರ ನೋಟುಗಳನ್ನ ಅಲ್ಲೇ ಇಡಲು ತಿಳಿಸುವ ಅಬ್ರಹಾಂ, ‘ಪವರ್’ ಬಲೆಗೆ ಬೀಳ್ತಾರೆ. ಇನ್ನು ಗೋಮುಖ ವ್ಯಾಘ್ರ ಟಿ.ಜೆ.ಅಬ್ರಹಾಂ ಮಹಾ ಕಳ್ಳಾಟವನ್ನು ವಿವಿಧ ನಾಯಕರು ಖಂಡಿಸಿದ್ದು, ಪವರ್ ಟಿವಿಯ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ.

ಒಟ್ಟಾರೆ, ಕೆಎಎಸ್ ಅಧಿಕಾರಿ ಮೇಲೆ ಕೇಸ್ ಸಂಬಂಧವಾಗಿ 100 ಕೋಟಿ ಕೇಳಿದ ಹೋರಾಟಗಾರ, ಕೊನೆಗೆ 1 ಕೋಟಿ ರೂಪಾಯಿ ಡೀಲ್​ಗೆ ಒಪ್ಪಿಕೊಳ್ತಾನೆ.. ರೇಡ್ ನಂತರ ನಿರಂತರವಾಗಿ ಡಾ.ಸುಧಾರನ್ನ ಕಾಡಿದ್ದ  ಅಬ್ರಹಾಂರನ್ನ ನಿಮ್ಮ ಪವರ್​ ಟಿವಿ ರೆಡ್​ ಹ್ಯಾಂಡಾಗಿ ಹಿಡಿದಿದೆ. ಇಂತಹ ವ್ಯಕ್ತಿಗೆ ಜನರು ಛೀ.. ಥೂ..! ಅಂತಿದ್ದಾರೆ. ಪವರ್ ಟಿವಿ ದಿಟ್ಟ ವರದಿಗೆ ನಾಡಿನ ಜನರಿಂದ ಶ್ಲಾಘನೆ ವ್ಯಕ್ತವಾಗ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments