Monday, August 25, 2025
Google search engine
HomeUncategorizedಹೆಲಿಕಾಪ್ಟರ್ ಕೊಟ್ಟು ಪ್ರಚಾರಕ್ಕೆ ಕಳಿಸಿದ್ರು, ಎಷ್ಟು ಸೀಟ್ ಗೆಲ್ಲಿಸಿದ್ರಿ? : ಯತ್ನಾಳ್ ವಿರುದ್ಧ ನಿರಾಣಿ ಕಿಡಿ

ಹೆಲಿಕಾಪ್ಟರ್ ಕೊಟ್ಟು ಪ್ರಚಾರಕ್ಕೆ ಕಳಿಸಿದ್ರು, ಎಷ್ಟು ಸೀಟ್ ಗೆಲ್ಲಿಸಿದ್ರಿ? : ಯತ್ನಾಳ್ ವಿರುದ್ಧ ನಿರಾಣಿ ಕಿಡಿ

ವಿಜಯಪುರ : ಹೆಲಿಕಾಪ್ಟರ್ ಕೊಟ್ಟು ಪ್ರಚಾರಕ್ಕೆ ಕಳಿಸಿದ್ರು, ಎಷ್ಟು ಸೀಟ್ ಗೆಲ್ಲಿಸಿದ್ರಿ? ಎಂದು ಶಾಸಕ ಯತ್ನಾಳ್ ವಿರುದ್ಧ ಮಾಜಿ ಸಚಿವ ಮುರುಗೇಶ ನಿರಾಣಿ ಗುಡುಗಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನಲ್ಲಿ ಬಿಜೆಪಿ ಹೆಚ್ಚು ಸದಸ್ಯರನ್ನು ಹೊಂದಿದೆ. ಓರ್ವ ಬಿಜೆಪಿ ಶಾಸಕ ತಾವೊಬ್ಬರೇ ಸುಸಕ್ಷಿತರು ಉಳಿದವರು ಅಲ್ಲ ಎಂಬಂತಿದ್ದಾರೆ ಎಂದು ಹೆಸರು ಹೇಳದೆ ಕುಟುಕಿದರು.

ತಾವು ಹೋದಲ್ಲೆಲ್ಲ ಬಿಜೆಪಿ ನಾಯಕರ ಬಗ್ಗೆ ಕೀಳಾಗಿ ಮಾತನಾಡುವುದು ಮಾಡ್ತಾರೆ. ಮಾತೆತ್ತಿದ್ರೆ ವಾಜಪೇಯಿ ಸರ್ಕಾರದಲ್ಲಿ ಕೆಲಸ ಮಾಡಿದ್ದೇನೆ ಅಂತಾರೆ. ಅದು ವಿಜಯಸಂಕೇಶ್ವರ ಅವರ ತ್ಯಾಗದಿಂದ ಅವರಿಗೆ ಅವಕಾಶ ಬಂದಿದೆ. ವಿಜಯ ಸಂಕೇಶ್ವರ ಅವರು ಬಿಟ್ಟು ಕೊಟ್ಟಾಗ ಬಸವರಾಜ ಪಾಟೀಲ್‌ ಸೇಡಂ ಅವರು ಇವರಿಗೆ ಅವಕಾಶ ಕೊಟ್ಟಿದ್ದಾರೆ. ಅವರು ಮೊದಲೇ ಒಂದು ಕಾಲು ಹೊರಗಿಟ್ಟಿದ್ರು, ಆ ವೇಳೆ ಅನಂತಕುಮಾರ್ ಅವರು ಇವರಿಗೆ ಅವಕಾಶ ಕೊಟ್ಟಿದ್ರು ಎಂದು ಛೇಡಿಸಿದರು.

ಮುಸ್ಲಿಂ ಟೋಪಿ ಧರಿಸಿದ್ದು ಗೊತ್ತಿದೆ

ನಾನು ಹಿಂದೂ ಹುಲಿ, ನಾನೇ ಶ್ರೇಷ್ಠ ಅಂತಾರೆ. ಇವ್ರು ಪಕ್ಷ ಬಿಟ್ಟು ಜೆಡಿಎಸ್ ಗೆ ಹೋದಾಗ ಮುಸ್ಲಿಂ ಟೋಪಿ ಧರಿಸಿದ್ದು ಎಲ್ಲರಿಗೂ ಗೊತ್ತಿದೆ. ನೀವು ನಾಯಕರು ಅಂತೀರಿ, ಯಾವ ರೀತಿ ಗೆದ್ದಿದ್ದೀರಿ ಅಂತ ಎಲ್ಲರಿಗೂ ಗೊತ್ತಿದೆ. ನೀವೊಬ್ಬರೇ ಗೆದ್ದೀರಿ, ಉಳಿದ ಏಳು ಜನ ಯಾಕೆ ಸೋತರು. ಜಿಲ್ಲೆಯ ಏಳು ಜನರು ಸೋಲಲು ನೀವೆ ಕಾರಣ. ಹೆಲಿಕಾಪ್ಟರ್ ಕೊಟ್ಟು ಪ್ರಚಾರಕ್ಕೆ ಕಳಿಸಿದ್ರು, ಎಷ್ಟು ಸೀಟ್ ಗೆಲ್ಲಿಸಿದ್ರಿ? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ : ನಾನು ಕೂಡ ಎಂಪಿ ಚುನಾವಣೆಯ ಪ್ರಬಲ ಆಕಾಂಕ್ಷಿ : ಎಂ.ಪಿ ರೇಣುಕಾಚಾರ್ಯ

ಕೋರ್ಟ್ ನಲ್ಲಿ ಕ್ಷಮಾಪಣೆ ಕೇಳಿದ್ರು

ಪಕ್ಷದಲ್ಲೇ ಇದ್ದುಕೊಂಡು ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್, ಸೋಮಣ್ಣ, ವಿಜಯ ಸಂಕೇಶ್ವರ ಸೇರಿದಂತೆ ಅನೇಕ ನಾಯಕರ ಬಗ್ಗೆ ಮಾತಾಡಿದ್ದಾರೆ. ವಿಜಯ ಸಂಕೇಶ್ವರ ಅವರ ಬಗ್ಗೆ ಮಾತನಾಡಿ ಕೋರ್ಟ್ ಗೆ ಹೋಗಿ ಕ್ಷಮಾಪಣೆ ಕೇಳಿ ಬಂದಿದ್ದಾರೆ. ಎಲ್ಲ ಸಮಾಜಗಳಿಗೂ ಕೀಳು ಮಟ್ಟದಲ್ಲಿ ಮಾತನಾಡ್ತಾರೆ. ಮಂದಿಯಲ್ಲಿ ಒದೆಯೋದು, ಸಂದಿಯಲ್ಲಿ ಕಾಲು ಬಿಳೋದು ಮಾಡ್ತಾರೆ. ಅವರು ಮಾಡಿದ ಉದ್ಯೋದಲ್ಲಿ ಎಲ್ಲರಿಗೂ ಟೊಪ್ಪಿಗೆ ಹಾಕೋದೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಹಣದಲ್ಲಿ ಮಜಾ ಮಾಡ್ತಾರೆ

ಜ್ಞಾನಯೋಗಿ ಸಕ್ಕರೆ ಕಾರ್ಖಾನೆ ಮಾಡಿ ಟೊಪ್ಪಿಗೆ ಹಾಕಿದ್ರು. ಎಸ್ ಹೈಪರ್ ಮಾರ್ಕೆಟ್ ಮಾಡಿದ್ರು, ಅದರಲ್ಲಿ ಪಾರ್ಟನರ್ ಇದ್ದವರಿಗೆ ಟೋಪಿ ಹಾಕಿದ್ರು. ಏನೇನು ಉದ್ಯೋಗ ಮಾಡಿದ್ದೆಲ್ಲ ಕೀಲಿ ಹಾಕೋದೆ. ಅದರ ಹಣ ಇವರು ಮಜಾ ಮಾಡೋದು. ಉಳಿದವರು ಹಾನಿ ಅನುಭವಿಸೋದು ಎಂದು ಯತ್ನಾಳ್ ವಿರುದ್ಧ ನಿರಾಣಿ ಗುಡುಗಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments