Sunday, August 24, 2025
Google search engine
HomeUncategorizedಸೀಕಲ್ ರಾಮಚಂದ್ರಗೌಡರಿಗೆ 'ಆಂಜನೇಯ ಭಕ್ತನ ಬಲ' : ನಾಳೆ ಧ್ರುವ ಸರ್ಜಾ ಬೃಹತ್ ರೋಡ್ ಶೋ

ಸೀಕಲ್ ರಾಮಚಂದ್ರಗೌಡರಿಗೆ ‘ಆಂಜನೇಯ ಭಕ್ತನ ಬಲ’ : ನಾಳೆ ಧ್ರುವ ಸರ್ಜಾ ಬೃಹತ್ ರೋಡ್ ಶೋ

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಕೇಸರಿ ಕಹಳೆ ಮೊಳಗಿದ್ದು, ಬಿಜೆಪಿ ನಾಯಕರ ಅಬ್ಬರದ ಪ್ರಚಾರಕ್ಕೆ ಪ್ರತಿಪಕ್ಷಗಳು ಬೆಚ್ಚಿಬಿದ್ದಿವೆ. ಈ ಮಧ್ಯೆ ಸ್ಯಾಂಡಲ್ ವುಡ್ ಸ್ಟಾರ್ ಗಳ ಆಗಮನ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಕೈಯನ್ನು ಮತ್ತಷ್ಟು ಬಲಪಡಿಸುತ್ತಿದೆ.

ನಿನ್ನೆಯಷ್ಟೇ ನಟ ಕಿಚ್ಚ ಸುದೀಪ್ ಅವರು ಶಿಡ್ಲಘಟ್ಟದಲ್ಲಿ ಅಬ್ಬರದ ಪ್ರಚಾರ ನಡೆಸಿ ಕಿಚ್ಚು ಹಚ್ಚಿದ್ದರು. ಇದೀಗ, ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸೀಕಲ್ ರಾಮಚಂದ್ರಗೌಡರ ಪರವಾಗಿ ಮತ ಯಾಚನೆಗೆ ಶಿಡ್ಲಘಟ್ಟಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ನಾಳೆ (ಮೇ 8) ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಟ ಧ್ರುವ ಸರ್ಜಾ ಅವರು ಇಡೀ ದಿನ ರೋಡ್ ಶೋ, ರ್ಯಾಲಿ ನಡೆಸುವ ಮೂಲಕ ಸೀಕಲ್ ರಾಮಚಂದ್ರಗೌಡ ಅವರ ಪರ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶಿಡ್ಲಘಟ್ಟ ಕ್ಷೇತ್ರದ ಹೆಚ್ ಕ್ರಾಸ್ ನಲ್ಲಿ ಧ್ರುವ ಸರ್ಜಾ ಅವರ ಬೃಹತ್ ರೋಡ್ ಶೋ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ಜಂಗಮಕೋಟೆ, ಮಧ್ಯಾಹ್ನ 3 ಗಂಟೆಗೆ ಮೇಲೂರು ವೃತ್ತ, ಸಂಜೆ 4 ಗಂಟೆಗೆ ಶಿಡ್ಲಘಟ್ಟ ಬಸ್ ನಿಲ್ದಾಣದಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ಇದನ್ನೂ ಓದಿ : ಸಿಲ್ಕ್ ಸಿಟಿಯಲ್ಲಿ ‘ಸೀಕಲ್ ರಾಮಣ್ಣ’ನಿಗೆ ಕಿಚ್ಚನ ಪವರ್

20ಕ್ಕೂ ಹೆಚ್ಚು ಜನ ಬಿಜೆಪಿಗೆ ಸೇರ್ಪಡೆ

ಶಿಡ್ಲಘಟ್ಟ ಕ್ಷೇತ್ರದ ಕೊತ್ತನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೊರಮಡುಗು ಗ್ರಾಮದ 20ಕ್ಕೂ ಹೆಚ್ಚು ಜನ ಶಿಡ್ಲಘಟ್ಟದ ಬಿಜೆಪಿ ಕಚೇರಿ ಸೇವಾಸೌಧದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಮುಖಂಡರು ಮತ್ತು ಮಾಜಿ ಶಾಸಕರಾದ ಎಂ.ರಾಜಣ್ಣ ಅವರು ಎಲ್ಲರಿಗೂ ಪಕ್ಷದ ಶಾಲು ಹಾಗೂ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.

ಮುಖಂಡರಾದ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಶಶಿ, ಮುರುಳಿ, ಶ್ರೀಧರ್, ಗೌತಮ್, ಹರೀಶ್, ಮುನಿರಾಜು, ಗಂಗರಾಜು, ಅನಿಲ್ ಮತ್ತಿತರರು ಸೇರ್ಪಡೆಯಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments