Monday, August 25, 2025
Google search engine
HomeUncategorized'ನನಗೆ ಅಧಿಕಾರ ಮುಖ್ಯವಲ್ಲ', ಕ್ಷೇತ್ರದ ಜನ ಸದಾ ನನ್ನ ಜೊತೆ ಇರ್ತಾರೆ : ಕೆ.ಎನ್ ರಾಜಣ್ಣ

‘ನನಗೆ ಅಧಿಕಾರ ಮುಖ್ಯವಲ್ಲ’, ಕ್ಷೇತ್ರದ ಜನ ಸದಾ ನನ್ನ ಜೊತೆ ಇರ್ತಾರೆ : ಕೆ.ಎನ್ ರಾಜಣ್ಣ

ತುಮಕೂರು : ನನಗೆ ಅಧಿಕಾರ ಮುಖ್ಯವಲ್ಲ. ನನ್ನ ಜೊತೆ ಅಸಹಾಯಕರು, ಗುರಿ ಇಲ್ಲದ ಜನ ಇದ್ದೇ ಇರ್ತಾರೆ. ಅವರ ಜೊತೆ ಸದಾ ನನ್ನ ಒಡನಾಟವಿದೆ ಎಂದು ಮಾಜಿ ಶಾಸಕ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ ಹೇಳಿದರು.

ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಇಂದು ಕೆ.ಎನ್ ರಾಜಣ್ಣ ಅವರು ಮಧುಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆ ಮಾತಯಾಚನೆ ಮಾಡಿದರು.

ಪ್ರಚಾರದ ವೇಳೆ ಪವರ್ ವಿತ್ ಲೀಡರ್ ತಂಡದ ಜೊತೆ ಮಾತನಾಡಿರುವ ಅವರು, ಚುನಾವಣಾ ಹೊರತಾಗಿ ಎಲ್ಲಾ ಪಕ್ಷದ ಜನರ ಜೊತೆ ನನ್ನ ಉತ್ತಮ ಸಂಬಂಧವಿದೆ. ಹಾಗಾಗಿ, ನನ್ನ ನಿವಾಸದ ಬಳಿ ನೂರಾರು ಜನ ಬೆಂಬಲಿಗರು ಈಗಲೂ ಇರ್ತಾರೆ ಎಂದು ತಿಳಿಸಿದರು.

ಕಳೆದ ಬಾರಿ ಸೋತಿದ್ದು ಯಾಕಂದ್ರೆ?

ನನಗೆ ಈ ಸಲ ಸಕಾರಾತ್ಮಕವಾದ ಫಲಿತಾಂಶ ಸಿಗಲಿದೆ ಎನ್ನುವ ಬಗ್ಗೆ ಬಾಸವಾಗುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸೋಲಲು ಎದುರಾಳಿ ಅಭ್ಯರ್ಥಿ, ಮನೆ ಮನೆಗೆ ಹೋಗಿ ಸೀರೆ-ಕುಂಕುಮ ಹಂಚುವ ಕೆಲಸ ಮಾಡಿದ್ದರು. ಆ ಒಂದು ಭಾವನಾತ್ಮಕ ವಿಚಾರದಿಂದ ಹೆಣ್ಣು ಮಕ್ಕಳು ಒಂದೇ ಕಡೆ ಮನಸ್ಸು ಮಾಡಿದ್ದರು ಎಂದು ಕಲೆದ ಬಾರಿಯ ಸೋಲಿಗೆ ಕಾರಣವೇನೆಂಬ ಸತ್ಯ ಬಿಚ್ಚಿಟ್ಟರು.

ಇದನ್ನೂ ಓದಿ : ಜೆಡಿಎಸ್ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ

ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ

ಆದ್ರೆ, ಈ ಬಾರಿ ಅದೇ ಹೆಣ್ಣು ಮಕ್ಕಳು ನನ್ನ ಪರವಾಗಿ ಬೆಂಬಲ ನೀಡುತ್ತಿದ್ದಾರೆ. ಅವರ ಆಶೀರ್ವಾದ ನನ್ನ ಗೆಲುವಿಗೆ ಮತ್ತಷ್ಟು ಸಹಾಯವಾಗಲಿದೆ ಎಂದು ಪವರ್ ಟಿವಿ ಜೊತೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮಧುಗಿರಿ ವಿಧಾನಸಭಾ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ ಈ ಬಾರಿ ಕೆ.ಎನ್.ರಾಜಣ್ಣ ಆಯ್ಕೆಯಾಗಬೇಕು. ಈ ಹಿಂದೆ 2013 ರಲ್ಲಿ ಮಾಡಿದ್ದಂತಹ ಅಭಿವೃದ್ಧಿ ಕಾರ್ಯಗಳೇ ರಾಜಣ್ಣ ಅವರಿಗೆ ಶ್ರೀರಕ್ಷೆಯಾಗಿದೆ. ಹಾಗಾಗಿ ಈ ಸಲ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದೆ ಗೆಲ್ಲುತ್ತಾರೆ ಎಂದು ಮಧುಗಿರಿ ಕ್ಷೇತ್ರದ ಮತದಾರರು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments