Monday, August 25, 2025
Google search engine
HomeUncategorizedCarrot Benefits: ದಿನವೂ ಕ್ಯಾರೆಟ್​ ತಿನ್ನುವುದರಿಂದ ಇಷ್ಟೆಲ್ಲಾ ಉಪಯೋಗ ಇದ್ಯಾ…!

Carrot Benefits: ದಿನವೂ ಕ್ಯಾರೆಟ್​ ತಿನ್ನುವುದರಿಂದ ಇಷ್ಟೆಲ್ಲಾ ಉಪಯೋಗ ಇದ್ಯಾ…!

ಕ್ಯಾರೆಟ್… ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ…. ಕ್ಯಾರೆಟ್ ನಿಂದ ಹಲವಾರು ಸ್ವಾದಿಷ್ಟಕರ ತಿನಿಸುಗಳನ್ನು ಮಾಡಬಹುದು. ಏನು ಮಾಡದೆ ಇದ್ರೂ ಕೂಡ ಹಸಿ ಕ್ಯಾರೆಟ್ ನ್ನು ತಿನ್ನಬಹುದು. ಆರೋಗ್ಯ ಮತ್ತು ಸೌಂದರ್ಯಕ್ಕೆ ಕ್ಯಾರೆಟ್ ಸದಾ ಸಹಕಾರಿ.
ಮುದುಕರಿಂದ ಮಕ್ಕಳ ವರೆಗೆ ಅಚ್ಚುಮೆಚ್ಚಿನ ತರಕಾರಿ ಕ್ಯಾರೆಟ್ ಬೆಳೆಯಲು ಸುಲಭ ಮತ್ತು ಆರೋಗ್ಯಕ್ಕೂ ಲಾಭದಾಯಕ.

ಹೌದು, ನಾವು ಕ್ಯಾರೆಟ್​ ಸೇವನೆ ಮಾಡುವುದರಿಂದ ಎಷ್ಟೆಲ್ಲಾ  ಪ್ರಯೋಜನಗಳಿವೆ..? ಆಗಿದ್ದರೆ ಕ್ಯಾರೆಟ್​ ತಿನ್ನವುದರಿಂದ ನಮ್ಮ ದೇಹಕ್ಕೆ  ಎಷ್ಟು ಅವಶ್ಯಕ ಎಂಬುವುದನ್ನು ತಿಳಿಯೋಣ ಬನ್ನಿ

ಕ್ಯಾರೆಟ್ ಅತ್ಯಾವಶ್ಯಕ

  • ಕ್ಯಾರೆಟಿನಲ್ಲಿ ಥೈಮಿನ್, ನಿಯಾಸಿನ್ ಮತ್ತು ವಿಟಮಿನ್ ಬಿ6 ಇದೆ.
  • ಕ್ಯಾರೆಟ್‍ನಲ್ಲಿರುವ ಡಯೆಟರಿ ಫೈಬರ್, ಸಕ್ಕರೆ ರಕ್ತ ಪ್ರವಾಹಕ್ಕೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
  • ಕ್ಯಾರೆಟ್‍ನಲ್ಲಿ ವಿಟಮಿನ್ ಸಿ, ಕೆ ಮತ್ತು ಮ್ಯಾಂಗನೀಸ್ ಹಾಗೂ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟಾಶಿಯಂ, ಕಾಪರ್, ಪ್ರಾಸ್ಪರಸ್‍ನಂತಹ ಮಿನರಲ್ಸ್‍ಗಳು ಇವೆ.
  • Carrotವಿಧದ ಕ್ಯಾನ್ಸರ್‍ಗಳ ವಿರುದ್ಧ ಹೋರಾಡಲು ಸಹಾಯ ಮಾಡಬಲ್ಲ ಫಾಲ್‍ಕ್ಯಾರಿನೋಲ್ ಎಂಬ ಆ್ಯಂಟಿಆಕ್ಸಿಡೆಂಟ್ ಇದೆ ಎಂಬುವುದು ನ್ಯೂ ಕ್ಯಾಸಲ್ ವಿಶ್ವ ವಿದ್ಯಾನಿಲಯದ ಅಧ್ಯಯನದಿಂದ ತಿಳಿದು ಬಂದಿದೆ.

ಕ್ಯಾರೆಟ್‍ನಿಂದ ಆರೋಗ್ಯಕ್ಕೆ ಪ್ರಯೋಜನಗಳೇನು?

  1. ಕ್ಯಾರೆಟಿನಲ್ಲಿ ಬೀಟಾ-ಕೆರೋಟಿನ್ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  2. ಇದರಲ್ಲಿ ಆ್ಯಂಟಿ ಏಜಿಂಗ್ ಅಂಶಗಳು ಇರೋದ್ರಿಂದ ಮಕ್ಕಳ ಬೆಳವಣಿಗೆಗೂ ಅಗತ್ಯ.
  3. ಇರುಳಿನ ದೃಷ್ಟಿ ಸಕ್ರಿಯಗೊಳ್ಳಲು ಇದು ಅತ್ಯಾವಶ್ಯಕ.
  4. ಕ್ಯಾರೆಟ್ ನಲ್ಲಿರುವ ವಿಟಮಿನ್ ಎ ಅಂಶದಿಂದ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು.
  5.  ಕ್ಯಾರೆಟ್‍ನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮಕ್ಕೆ ಹೊಳಪನ್ನು ನೀಡುತ್ತೆ.
  6. ನಿರ್ದಿಷ್ಟ ವಿಧದ ಕ್ಯಾನ್ಸರ್‍ಗಳ ವಿರುದ್ಧ ಹೋರಾಡಲು ಸಹಾಯ ಮಾಡಬಲ್ಲ ಫಾಲ್‍ಕ್ಯಾರಿನೋಲ್ ಎಂಬ ಆ್ಯಂಟಿಆಕ್ಸಿಡೆಂಟ್ ಇದೆ
  7. ಜೀರ್ಣಕ್ರೀಯೆಯನ್ನು ವೃದ್ಧಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ
  8. ಅಕ್ಷಿಪಟಲದ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ.
  9. ಮಕ್ಕಳಲ್ಲಿನ ಅತಿಸಾರವನ್ನು ಕ್ಯಾರೆಟ್ ಬಹುಬೇಗನೆ ಮತ್ತು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ.
  10. ಕರುಳಿನ ಜಂತು ಹುಳಗಳಿಂದ ಹೊಟ್ಟೆಯಲ್ಲಾಗುವ ಸಮಸ್ಯೆಗಳಿಂದ ಪಾರಾಗಬಹುದು.
  11. ನೆನಪಿನಶಕ್ತಿ ಹೆಚ್ಚಿಸುತ್ತದೆ.
  12. ದೇಹವನ್ನು ಶುದ್ಧೀಕರಿಸುತ್ತದೆ

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments