ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆ್ರದೆ, ಸ್ಯಾಂಡಲ್‍ವುಡ್ ನಟ, ‘ಉತ್ತಮ ಪ್ರಜಾಕೀಯ ಪಕ್ಷ’ದ ಸ್ಥಾಪಕ ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಹುಳು ಬಿಡಲು ಮುಂದಾಗಿ, ಪೇಚಿಗೆ ಸಿಲುಕಿದ್ದಾರೆ.
ಹೌದು, ಕರ್ನಾಟಕ ವಿಧಾನಸಭಾ ಚುನಾವಣೆ(2023)ಗೆ ದಿನಾಂಕ ಘೋಷಣೆಯಾಗಿದ್ದು, ಮತ ಎಣಿಕೆಗೆ ಎರಡು ದಿನ ಬೇಕೇ ಎಂದು ನಟ ಉಪೇಂದ್ರ ಪ್ರಶ್ನಿಸಿದ್ದಾರೆ. ಉಪೇಂದ್ರ ಪ್ರಶ್ನೆಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಚುನಾವಣೆ ದಿನಾಂಕ ಹಾಗೂ ಫಲಿತಾಂಶ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಖಾತೆ (ಫೇಸ್‌ಬುಕ್, ಟ್ವಿಟರ್) ಯಲ್ಲಿ ಪೋಸ್ಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆಗೆ ಎರಡು ದಿನ ಬೇಕೆ? ಏಕೆಂದು ಬಲ್ಲವರು ತಿಳಿಸುತ್ತೀರಾ? ಎಂದು ಉಪೇಂದ್ರ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು
ಮೇ 13, ಶನಿವಾರ ಫಲಿತಾಂಶ ಪ್ರಕಟ.ಮತ ಎಣಿಕೆಗೆ ಎರಡು ದಿನ ಬೇಕೆ ?!
ಏಕೆಂದು ಬಲ್ಲವರು ತಿಳಿಸುತ್ತೀರಾ ? #ElectionCommission #Election2023 #KarnatakaElection2023— Upendra (@nimmaupendra) March 29, 2023
ಉಪ್ಪಿಗೆ ಸಿಕ್ಕಾಪಟ್ಟೆ ತರಾಟೆ
ಇನ್ನೂ ಉಪೇಂದ್ರ ಅವರ ಪ್ರಶ್ನೆಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಮನಬಂದಂತೆ ಕಾಮೆಂಟ್ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ. ಇದೇನು ಹೊಸದಲ್ಲ, ಮತಗಟ್ಟೆಗಳಲ್ಲಿಯೇ ಮತ ಎಣಿಕೆ ನಡೆಯುವುದಿಲ್ಲ ಎಂದು ಉಪ್ಪಿಯ ಕಾಲೆಳೆದಿದ್ದಾರೆ.
ಮದುವೆಯಾದ ತಕ್ಷಣ ಮಕ್ಕಳಾಗಲ್ಲ
ಉಪೇಂದ್ರ ಪ್ರಶ್ನೆಗೆ ಕೆಲವರು ಖಡಕ್ ಉತ್ತರ ನೀಡಿದ್ದು, ಪ್ರಶ್ನೆ ಕೇಳುವಾಗ ಸ್ವಲ್ಪ ಪ್ರಬುದ್ಧತೆ ಇರಲಿ. ಮದುವೆಯಾದ ತಕ್ಷಣ ಮಕ್ಕಳಾಗಲ್ಲ. ಮದುವೆ ಆದ ದಿನಾನೇ ಮಕ್ಕಳು ಮಾಡಿದ್ರೆ ಆಯ್ತಪ್ಪ. ಒಂದು ವರ್ಷ ಯಾಕೆ ?ಏಕೆಂದು ಬಲ್ಲವರು ತಿಳಿಸುತ್ತೀರಾ ? ಎಂದು ಕಾಮೆಂಟ್ ಹರಿಬಿಟ್ಟಿದ್ದಾರೆ.
https://twitter.com/DacchuPranesh/status/1640988155338711042?s=20
ಇನ್ನೂ ಕೆಲವರು, ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ಏಕೆ ಸಿನಿಮಾವನ್ನು ರಿಲೀಸ್ ಮಾಡಲ್ಲ, ಸಿನಿಮಾ ಡೈಲಾಗ್ ಹೊಡೆದಷ್ಟು ಚುನಾವಣಾ ಪ್ರಕ್ರಿಯೆ ಸುಲಭ ಅಲ್ಲ. 1ನೇ ತರಗತಿಯ ಪರೀಕ್ಷೆಗಳ ಫಲಿತಾಂಶವನ್ನೇ ಹೇಳೋದಿಕ್ಕೆ ಶಾಲೆಯವರು ಒಂದು ತಿಂಗಳು ತೆಗೆದುಕೊಳ್ಳುತ್ತಾರೆ. ಅಂತದರಲ್ಲಿ ಮತ ಎಣಿಕೆಗೆ ಎರಡು ದಿನ ಆದರೂ ಬೇಡವೇ ಬುದ್ಧಿವಂತ ಉಪೇಂದ್ರ ಸರ್? ಎಂದು ಕುಟುಕಿದ್ದಾರೆ.