Saturday, August 23, 2025
Google search engine
HomeUncategorizedಮೂರೇ ದಿನದಲ್ಲಿ ‘ಗಂಧದಗುಡಿ’ 10 ಕೋಟಿ ಪೈಸಾ ವಸೂಲ್

ಮೂರೇ ದಿನದಲ್ಲಿ ‘ಗಂಧದಗುಡಿ’ 10 ಕೋಟಿ ಪೈಸಾ ವಸೂಲ್

ಒಬ್ಬ ನಟನ ಸ್ಟಾರ್​ಡಮ್ ಆತನ ಹಿಟ್ ಸಿನಿಮಾಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ತೆರೆಯ ಹಿಂದೆ ಆತ ಹೇಗಿರ್ತಾನೆ ಅನ್ನೋದು ಕೂಡ ಮುಖ್ಯವಾಗುತ್ತೆ. ಗಂಧದಗುಡಿಯಿಂದ ವಿಶ್ವ ಸಿನಿದುನಿಯಾಗೆ ರೋಲ್ ಮಾಡೆಲ್ ಆದ ರಾಜರತ್ನ ಪುನೀತ್ ರಾಜ್​ಕುಮಾರ್, ಬಾಕ್ಸ್ ಆಫೀಸ್​ನಲ್ಲಿ ಅದೇ ಟ್ರ್ಯಾಕ್ ರೆಕಾರ್ಡ್​ನ ಉಳಿಸಿಕೊಂಡಿದ್ದಾರೆ.

  • ಮನರಂಜನೆ ಜೊತೆ ಮನೋವಿಕಾಸದ ಬೀಜ ಬಿತ್ತಿದ ಸಿನಿಮಾ

ಬೆಟ್ಟದ ಹೂವಿನಿಂದ ಶುರುವಾದ ಅಪ್ಪು ಸಿನಿಯಾನ, ಗಂಧದಗುಡಿಯ ಹೊನ್ನಿನ ಜರ್ನಿವರೆಗೂ ಅಧ್ಬುತ, ಅಮೋಘ, ಅದ್ವಿತೀಯ. ಹೌದು.. ಒಬ್ಬ ಕಮರ್ಷಿಯಲ್ ಸೂಪರ್ ಸ್ಟಾರ್, ಯಾವುದೇ ಹಣದ ವ್ಯಾಮೋಹವಿಲ್ಲದೆ, ಸಮಾಜಕ್ಕೆ ಏನಾದ್ರು ಕೊಡಬೇಕು ಅನ್ನೋ ತುಡಿತದಿಂದ ಮಾಡಿದ ಚಿತ್ರ ಗಂಧದಗುಡಿ.

ನ್ಯಾಷನಲ್ ಅವಾರ್ಡ್​ ವಿನ್ನರ್ ಅಮೋಘ ವರ್ಷ ಜೊತೆಗೂಡಿ ಮಾಡಿದ ಈ ಪ್ರಯೋಗವನ್ನು ಒಂದಷ್ಟು ಮಂದಿ ಡಾಕ್ಯುಮೆಂಟರಿ ಅಂದ್ರು. ಮತ್ತೊಂದಷ್ಟು ಮಂದಿ ಸಿನಿಮಾ ಅಂದ್ರು. ಆದ್ರೆ ಇದೊಂದು ಬಣ್ಣಿಸಲಾಗದ ಅನುಭವ ಅನ್ನೋದು ರಿಲೀಸ್ ಆದ್ಮೇಲೆ ಅನಿಸಿತು. ಒಂದೂವರೆ ತಾಸಿರೋ ಗಂಧದಗುಡಿ, ನಿಜಕ್ಕೂ ವಿಶ್ವ ಸಿನಿದುನಿಯಾಗೆ ಎಕ್ಸಾಂಪಲ್ ಸೆಟ್ ಮಾಡಿದೆ.

ಅಪ್ಪು ಡ್ರೀಮ್ ಪ್ರಾಜೆಕ್ಟ್ ಇದಾಗಿದ್ದು, ಕರ್ನಾಟಕದ ಅರಣ್ಯ, ಪ್ರಾಣಿ, ಪಕ್ಷಿಗಳನ್ನ ಎಕ್ಸ್​ಪ್ಲೋರ್ ಮಾಡಿರೋ ಪರಿ ವ್ಹಾವ್ ಫೀಲ್ ಕೊಡುತ್ತೆ. ಸ್ಟ್ರಾಂಗ್ ಮೆಸೇಜ್ ಇರೋ ಈ ಸಿನಿಮಾ ಕೂಡ ಪವರ್ ಸ್ಟಾರ್ ಕಮರ್ಷಿಯಲ್ ಸಿನಿಮಾಗಳಂತೆ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡ್ತಿದೆ. ರಿಲೀಸ್ ಆದ ಮೂರೇ ದಿನದಲ್ಲಿ ಬರೋಬ್ಬರಿ 10 ಕೋಟಿ ಪೈಸಾ ವಸೂಲ್ ಮಾಡಿ, ದಾಖಲೆಗಳ ಸರದಾರ ಅಪ್ಪುಗೆ ಬೇರಾರೂ ಸರಿಸಾಟಿಯಿಲ್ಲ ಅನ್ನೋದನ್ನ ಮತ್ತೊಮ್ಮೆ ನೆನಪಿಸಿದೆ.

ಮೊದಲ ದಿನವೇ 5.28 ಕೋಟಿ ಕಲೆಕ್ಷನ್ ಮಾಡಿದ್ದ ಗಂಧದಗುಡಿ, ಅಡ್ವಾನ್ಸ್ ಬುಕಿಂಗ್​ನಿಂದ 1.72 ಕೋಟಿ, ಪ್ರೀಮಿಯರ್ ಶೋಗಳಿಂದಲೇ 28 ಲಕ್ಷ ಗಳಿಸಿದೆ. ಒಟ್ಟು ಮೂರು ದಿನದಲ್ಲಿ ಹತ್ತು ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿರೋ ಗಂಧದಗುಡಿ, ಫ್ಯಾಮಿಲಿ ಆಡಿಯೆನ್ಸ್ ರಿಪಿಟೆಡ್ಲಿ ನೋಡೋ ಹಾಗೆ ಮಾಡ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments