Thursday, August 28, 2025
HomeUncategorizedಭಾರತ್​ ಜೋಡೊ ಯಾತ್ರೆ ನಡುವೆ ಡಿ.ಕೆ ಶಿವಕುಮಾರ್​ಗೆ ಸಂಕಷ್ಟ

ಭಾರತ್​ ಜೋಡೊ ಯಾತ್ರೆ ನಡುವೆ ಡಿ.ಕೆ ಶಿವಕುಮಾರ್​ಗೆ ಸಂಕಷ್ಟ

ಮಂಡ್ಯ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೊ ಯಾತ್ರೆ 7 ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಸಂಕಷ್ಟ ಎದುರಾಗಿದೆ.

ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಅಕ್ಟೋಬರ್​ 7(ನಾಳೆ) ರಂದು ವಿಚಾರಣೆಗೆ ಹಾಜರಾಗುವಾಂತೆ ಇಡಿ(ಜಾರಿ ನಿರ್ದೇಶನಾಲಯ) ಹೇಳಿತ್ತು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ವಿನಾಯಿತಿ ನೀಡಿ ಭಾರತ್​ ಜೋಡೊದಲ್ಲಿ ಭಾಗಿಯಾದ್ದೇನೆ ಬೇರೆ ದಿನ ವಿಚಾರಣೆ ನಡೆಸಿ ಎಂದಿದ್ದರು.

ಇದಕ್ಕೆ ಅವಕಾಶ ನೀಡದ ಇಡಿ ತನಿಖಾ ತಂಡ ನಾಳೆಯೆ ವಿಚಾರಣೆಗೆ ಹಾಜರಾಗುವಂತೆ ಡಿಕೆ ಶಿವಕುಮಾರ್​ಗೆ ಸೂಚಿಸಿದೆ. ಈ ಬಗ್ಗೆ ಇಂದು ಮಂಡ್ಯದಲ್ಲಿ ಮಾತನಾಡಿದ ಡಿಕೆಶಿ, ಮಧ್ಯಮದವರೆ ಮೇಲೆ ಹಲ್ಲೆ ಖಂಡಿಸಿ ನಿಮಗೂ ಕಿರುಕುಳ ನಿಮಗೂ ತೊಂದರೆ ಕೊಡ್ತಿದ್ದಾರೆ. ಇಡಿಯಿಂದ ತನಿಖೆಗೆ ಕಾಲಾವಕಾಶ‌‌ ಕೇಳಿದ್ದೆ, ಆದ್ರೆ ಬರಲೇ ಬೇಕು ‌ಅಂತ ನೋಟೀಸ್ ಕೊಟ್ಟಿದ್ದಾರೆ ಎಂದರು.

ಇನ್ನು ಈ ಬಗ್ಗೆ ನಮ್ಮ ನಾಯಕರ ‌ಜೊತೆ ಡಿಸ್ಕಸ್ ಮಾಡುತ್ತೇನೆ. ಅವರು ಎನ್ ಹೇಳ್ತಾರೆ ನೋಡೋಣ, ಮಾನವೀಯತೆ ಇಲ್ಲದೇ ನಡೆಸಿಕೊಳ್ಳುತ್ತಿದ್ದಾರೆ ಎಂದ ಡಿ ಕೆ ಶಿವಕುಮಾರ್ ಹರಿಹಾಯ್ದರು.

ರಾಜ್ಯದಲ್ಲಿ ನಾನು ಪಾದಯಾತ್ರೆ ನೇತೃತ್ವವಹಿಸಿಕೊಂಡಿದ್ದೇನೆ. ನಾಳೆ ವಿಚಾರಣೆಗೆ ಬರೋಕ್ಕೆ ಆಗಲ್ಲ ಅಂತ ಕೇಳಿಕೊಂಡಿದ್ದೆ, ಇಡಿಯವರು ಒಪ್ಪಿಕೊಳ್ಳದೇ ನಾಳೆ ಬರಲೇಬೇಕೆಂದು ಸಮನ್ಸ್ ಕೊಟ್ಟೊದ್ದಾರೆ ನಮ್ಮ ನಾಯಕರು ಹೋಗು ಅಂದ್ರೆ ಹೋಗ್ತೀನಿ ಎಂದರು.

RELATED ARTICLES
- Advertisment -
Google search engine

Most Popular

Recent Comments