Monday, September 15, 2025
HomeUncategorizedತಳವಾರ, ಪರಿವಾರ ಸಮುದಾಯಕ್ಕೆ ಎಸ್ ಟಿ ಸರ್ಟಿಫಿಕೇಟ್ ನೀಡುವಂತೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ

ತಳವಾರ, ಪರಿವಾರ ಸಮುದಾಯಕ್ಕೆ ಎಸ್ ಟಿ ಸರ್ಟಿಫಿಕೇಟ್ ನೀಡುವಂತೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ

ವಿಜಯಪುರ : ಇತ್ತೀಚಿನ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ತಳವಾರ ಹಾಗೂ ಪರಿವಾರ ಸಮುದಾಯದವರ ಜಾತಿ ಪ್ರಮಾಣ ಪತ್ರಕ್ಕಾಗಿ ನಡೆಯುತ್ತಿರುವ ಹೋರಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೂಡಾ ಅರೆಬೆತ್ತಲಾಗಿ ಕಾಡು ಜನರ ಉಡುಗೆ ಉಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು…

ಹೌದು ರಾಜ್ಯದಲ್ಲಿ ಈಗ ತಳವಾರ ಹಾಗೂ ಪರಿವಾರ ಸಮಾಜದವರ ಎಸ್ ಟಿ ಸರ್ಟಿಫಿಕೇಟ್ ಗಾಗಿ ಹೋರಾಟ ನಡೆಸುತ್ತಿರುವುದು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ದಿನವೇ ರಕ್ತದಾನ ಮಾಡಿ ವಿಭಿನ್ನವಾಗಿ ಹೋರಾಟ ಆರಂಭಿಸಿದ್ದರು. ಬಳಿಕ ಪ್ರತಿಯೊಬ್ಬ ಶಾಸಕರ ಮನೆ ಮನೆಗೆ ತೆರಳಿ ಮನವಿ ಸಲ್ಲಿಸಿದ್ದರು. ಇದರ ಮುಂದುವರೆದ ಭಾಗವಾಗಿ ಇಂದು ಅರೆಬೆತ್ತಲಾಗಿ, ಕಾಡು ಜನರ ಉಡುಗೆ ತೊಟ್ಟು ವಿನೂತನ ರೀತಿಯಲ್ಲಿ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಸಿಂದಗಿ ಬೈ ಪಾಸ್ ನಿಂದ್ ಬಂದ ಬ್ರಹತ್ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಜನ ತಳವಾರ ಹಾಗೂ ಪರಿವಾರ ಸಮುದಾಯದವರು ಭಾಗವಹಿಸಿದ್ದರು. ಇನ್ನೂ ಅಷ್ಟೋಂದು ಜನ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ನೀಡುವರು ಎಂದು ಮನಗಂಡ ಪೋಲಿಸ್ ವರಿಷ್ಠ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರನ್ನು ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲೇ ತಡೆ ಹಿಡಿದು ಅಲ್ಲಿಗೆ ತೆರಳಿ ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು. ಇನ್ನೂ ಪ್ರತಿಭಟನೆ ಹಿನ್ನಲೆಯಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ಮಾಡಲಾಗಿತ್ತು…

ಇನ್ನೂ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಾಜದ ಮುಖಂಡ ಶಿವಾಜಿ ಮೆಟಗಾರ, ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರ ಮೇಲೆ ಆರೋಪ ಮಾಡಿದರು. ಇಂದು ಕೇಂದ್ರ ಸರ್ಕಾರದಿಂದ ಗೆಜೆಟ್ ಆಗಿ ಬಂದರೂ ಸಹಿತ ಅವರಿಗೆ ಎಸ್ ಟಿ ಸರ್ಟಿಫಿಕೇಟ್ ನೀಡುತ್ತಿಲ್ಲ.‌ ಇಂದು ನಮ್ಮ ಮಕ್ಕಳಿಗೆ ಎಡ್ಮಿಷನ್ ಮಾಡಲು ನಾವು ಯಾವ ಸರ್ಟಿಫಿಕೇಟ್ ಕೊಡಬೇಕು. ಮುಂದಿನ ದಿನಗಳಲ್ಲಿ ನಾವು ಸಂಪೂರ್ಣವಾಗಿ ಬೆತ್ತಲೆ ಹೋರಾಟ ಮಾಡಬೇಕಾಗುತ್ತದೆ. ಆ ಹೋರಟವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಮತಕ್ಷೇತ್ರದಿಂದಲೇ ಪ್ರಾರಂಭ ಮಾಡುತ್ತೇವೆ ಎಂದರು…

ಒಟ್ಟಾರೆ ರಾಜ್ಯದಲ್ಲಿ ತಳವಾರ ಹಾಗೂ ಪರಿವಾರ ಸಮುದಾಯ ಮುಖಂಡರ ಹೋರಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ. ರಾಜ್ಯದಲ್ಲಿರುವ 8 ಲಕ್ಷ 60 ಸಾವಿರ ಜನ ತಳವಾರ ಹಾಗೂ 2 ಲಕ್ಷ 71 ಸಾವಿರ ಪರಿವಾರದ ಜನರಿಗೆ ಸರ್ಟಿಫಿಕೇಟ್ ಸಿಗುತ್ತಿಲ್ಲ. ಇಂದು ಕೇಂದ್ರದಿಂದ ಗೆಜೆಟ್ ಆಗಿ ಬಂದರೂ ನೀವು ಸತಾಯಿಸಲು ಮುಂದಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು. ಮುಂಬರುವ ದಿನಗಳಲ್ಲಿ ಈ ಹೋರಾಟ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ…

ಸುನೀಲ್ ಭಾಸ್ಕರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments