ದೊಡ್ಡಬಳ್ಳಾಪುರ : ಇತ್ತೀಚೆಗೆ ಯುವ ಸಮುದಾಯ ಕೆಟ್ಟ ಚಟಗಳಿಗೆ ಮಾರ್ಪಡಾಗುತ್ತಿದ್ದಾರೆ. ಇನ್ನೂ ಬೆಂಗಳೂರು ಕೂಗಳತೆ ದೂರದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ, ಹೊಸಕೋಟೆ , ನೆಲಮಂಗಲ ಮತ್ತು ದೇವನಹಳ್ಳಿ ಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ 85 ಕೆ.ಜಿ ಗಾಂಜಾ ಸಾಗಿಸುತ್ತಿದ್ದ ವೇಳೆ ಹೊಸಕೋಟೆ ಪೋಲಿಸರು ಕಾರ್ಯಾಚರಣೆ ನಡೆಸಿ 3 ಆರೋಪಿಗಳನ್ನು ಬಂಧಿಸಿದ್ದರು. ನಿನ್ನೆ ಸಹ ಸಿಸಿಬಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ 200 ಕೆ.ಜಿ ಅಧಿಕ ಗಾಂಜಾ ದೇವನಹಳ್ಳಿ ಬಳಿ ವಶ ಪಡೆಸಿಕೊಂಡಿದ್ದರು , ಹೀಗೆ ಸಾಕಷ್ಟು ಗಾಂಜಾ ಪ್ರಕರಣಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಾಖಲಾಗಿವೆ. ಇನ್ನೂ ದೊಡ್ಡಬಳ್ಳಾಪುರದ ಕೆಲವೊಂದು ಹೋಬಳಿಗಳಲ್ಲಿ ಕೃಷಿ ಜಮೀನುಗಳಲ್ಲಿ ಗಾಂಜಾ ಘಾಟು ಹೊಡೆಯುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಈ ಬಾರಿ ಉತ್ತಮ ಮಳೆ ಆಗಿದ್ದು ಒಳ್ಳೆಯ ಫಸಲು ಆಗಿದೆ. ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ಮತ್ತು ಸಾಸಲು ಹೋಬಳಿಗಳಲ್ಲಿ ಸಾವಿರಾರು ಎಕರೆ ಮುಸುಕಿನ ಜೋಳ ಬೆಳೆಯಲಾಗಿದೆ. ಈ ಬೆಳೆಗಳ ನಡುವೆ ಗಾಂಜಾ ಬೆಳೆಯಲಾಗುತ್ತಿದೆ ಎಂಬ ವದಂತಿ ಹರಡುತ್ತಿದೆ. ಈ ಬಗ್ಗೆ ಗಾಂಜಾ ಬೆಳೆಯುವವರನ್ನು ಪತ್ತೆ ಹಚ್ಚಲು ದೊಡ್ಡಬೆಳವಂಗಲ ಪೋಲಿಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ದೊಡ್ಡಬಳ್ಳಾಪುರ ಕೃಷಿ ಜಮೀನುಗಳಲ್ಲಿ ಗಾಂಜಾ ಘಾಟು!
RELATED ARTICLES