Thursday, September 11, 2025
HomeUncategorizedಡಿಸೆಂಬರ್​​ವರೆಗೆ ಥಿಯೇಟರ್​ ತೆರೆಯಲ್ಲ ಅಂತ ಪಟ್ಟು ಹಿಡಿದ ಮಾಲೀಕರು

ಡಿಸೆಂಬರ್​​ವರೆಗೆ ಥಿಯೇಟರ್​ ತೆರೆಯಲ್ಲ ಅಂತ ಪಟ್ಟು ಹಿಡಿದ ಮಾಲೀಕರು

ಯಾವಾಗ ಕೊರೋನಾ ಮಹಾಮಾರಿ ದೇಶದಲ್ಲಿ ಒಕ್ಕರಿಸಿತೋ ಅದೆಷ್ಟೋ ಉದ್ಯಮಗಳು ನೆಲ ಕಚ್ಚಿ ಹೋದವು ಇದಕ್ಕೆ ಚಿತ್ರ ಮಂದಿರ ಸಹಿತ ಹೊರತಾಗಿಲ್ಲ. ಕಳೆದ ನಾಲ್ಕೈದು ತಿಂಗಳುಗಳಿಂದ ಚಿತ್ರ ಮಂದಿರಗಳನ್ನು ಬಂದ್ ಮಾಡಿಕೊಂಡು ಕುಳಿತ ಮಾಲೀಕರೀಗ ಥೇಟರ್ ಗಳನ್ನು ಪರ್ಮನೆಂಟ್ ಆಗಿ ಬಂದ್ ಮಾಡಲು ನಿಶ್ಚಯಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 18 ಚಿತ್ರಮಂದಿರಗಳಿದ್ದು, ಇನ್ನೂ ಉತ್ತರ ಕರ್ನಾಟಕ ಭಾಗದಲ್ಲಿ 138 ಚಿತ್ರ ಮಂದಿರಗಳಿವೆ.

ಇದರಲ್ಲಿ ಬಹುತೇಕ ಚಿತ್ರ ಮಂದಿರಗಳನ್ನು ಶಾಶ್ವತವಾಗಿ ಬಂದ್ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಕಾರಣ ಇವರಿಗೆ ವಿಧಿಸುವ ಮಹಾನಗರ ಪಾಲಿಕೆ ಟ್ಯಾಕ್ಸ್, ಜೊತೆಗೆ ವಿದ್ಯೂತ್ ಬಿಲ್, ಇನ್ನೂ ಥೇಟರ್ ಗಳು ಬಂದ್ ಇಟ್ಟುಕೊಂಡು ಕುಳಿತರೂ ಸಹಿತ ಮಿನಿಮಮ್ 7 ಸಾವಿರ ವಿದ್ಯುತ್​ ಬಿಲ್ ಕಟ್ಟಬೇಕು, ಜೊತೆಗೆ ಮಹಾನಗರ ಪಾಲಿಕೆಯ ಟ್ಯಾಕ್ಸ್​, ಹೀಗಾಗಿ ಸರ್ಕಾರ ಇವಗಳಿಗಾದರೂ ಸಡಿಲಿಕೆ ನೀಡಬೇಕು ಎಂಬುದು ಥೇಟರ್ ಮಾಲೀಕರ ಒತ್ತಾಯವಾಗಿದೆ.

ಥೇಟರ್ ಮಾಲೀಕರ ಯೂನಿಯನ್ ಸಂಘದ ಉಪಾಧ್ಯಕ್ಷ‌ ಮಹೇಂದ್ರಕುಮಾರ ಅವರು ಈಗಾಗಲೇ ಸಿ ಎಮ್ ಅವರಿಗೆ ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದಾರೆ. ಇನ್ನೂ ಥೇಟರ್ ಮಾಲೀಕರು ಒಟ್ಟು ಸೇರಿ ಡಿಸೆಂಬರ್ ವರೆಗೂ ಥೇಟರ್ ಪ್ರಾಂರಭಿಸುವದೇ ಬೇಡ ಎಂಬ ಯೋಚನೆಯಲ್ಲಿ ಸಹ ಇದ್ದಾರೆ. ಇದಕ್ಕೆ ಕಾರಣ ಹೊಸ ಚಿತ್ರಗಳು ಯಾವವೂ ರೆಡಿ ಇಲ್ಲದಿರುವದು. ಮೊದಲು ಹೊಸ ಚಿತ್ರಗಳ ಪ್ರೊಡಕ್ಷನ್​​ಗೆ ಅನುಮತಿ ನೀಡಲಿ, ಆಮೇಲೆ ಬೇಕಿದ್ದರೆ ಚಿತ್ರ ಮಂದಿರ ಪ್ರಾರಂಭಿಸಲಿ ಎಂಬುದು ಇವರ ಒತ್ತಾಯ. ಹೊಸ ಹೊಸ ಚಿತ್ರಗಳಿಲ್ಲದೇ ಒಂದೇ ಚಿತ್ರವನ್ನು ಎಲ್ಲ ಥೇಟರ್ ನವರು ಹಾಕಿಕೊಂಡರೆ ಹೇಗೆ? ಇನ್ನೂ ರೈಲು, ಬಸ್ ಸಂಚಾರ ಸಂಪೂರ್ಣ ಆರಂಭವಾಗುವ ವರೆಗೂ ಚಿತ್ರ ಮಂದಿರ ಪ್ರಾರಂಭಿಸುವದಿಲ್ಲ ಎನ್ನುತ್ತಾರೆ.

ಒಂದೆಡೆ ಸರ್ಕಾರ ಈಗಾಗಲೇ ಕೆಲ ಶರತ್ತುಗಳನ್ನು ವಿಧಿಸುವ ಮೂಲಕ ಒಂದಿಷ್ಟು ಚಟುವಟಿಕೆಗಳಿಗೆ ಅನುಮತಿ ನೀಡಿದೆ. ಹಾಗೆಯೇ ಚಿತ್ರ ಮಂದಿರಗಳಿಗೆ ಸಹಿತ ಅನುಮತಿ ನೀಡಬೇಕಾಗಿದೆ. ಇರದಿದ್ದರೆ ಚಿತ್ರ ಮಂದಿರಗಳ ಜಾಗದಲ್ಲಿ ಹೊಟೇಲ್, ಮಾಲ್ ಗಳಾಗುವದು ಶತಸಿದ್ದವಾಗಿದೆ. ಇನ್ನಾದರೂ ಸರ್ಕಾರ ಈ ಕುರಿತು ಗಂಭೀರವಾಗಿ ಪತಿಗಣಿಸಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments