Friday, September 12, 2025
HomeUncategorizedಮಕ್ಕಳನ್ನು ಹೊರಗಡೆ ಕಳಿಸುವ ಮುನ್ನ ಎಚ್ಚರ ಎಚ್ಚರ !!

ಮಕ್ಕಳನ್ನು ಹೊರಗಡೆ ಕಳಿಸುವ ಮುನ್ನ ಎಚ್ಚರ ಎಚ್ಚರ !!

ಬೆಂಗಳೂರು: ಕೊರೋನಾ ವೈರಸ್ ಸೋಂಕು ದಿನೇ ದಿನೇ ದಾಖಲೆ ಬರೆಯುತ್ತಿದೆ. ಇಷ್ಟು ದಿನ ಯುವಕರಲ್ಲಿ , ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಿತಿದ್ದ ಕೊರೋನಾ ಈಗ ಮಕ್ಕಳನ್ನು ಟಾರ್ಗೆಟ್ ಮಾಡಲು ಆರಂಭಿಸಿದೆ. 

ರೋಗ ಲಕ್ಷಣಗಳೇ ಇಲ್ಲದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಇದು ವೈದ್ಯಕೀಯ ಮತ್ತು ಆಡಳಿತ ಸಿಬ್ಬಂದಿಗೆ ದೊಡ್ಡ ತಲೆನೋವು ತಂದಿದೆ.ಇದರ ನಡುವೆ ಮಕ್ಕಳಿಗೆ ಕೊರೋನಾ ಸೋಂಕು ಭಾರೀ ಹೆಚ್ಚಳವಾಗಿದೆ. ಅಷ್ಟೇ ಅಲ್ಲ ಮಕ್ಕಳ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಹೀಗಾಗಿ ಪೋಷಕರು , ಮಕ್ಕಳನ್ನು‌ ಹೊರಗೆ ಕಳುಹಿಸುವ ಮುನ್ನ‌ ಯೋಚಿಸಿ ಎಚ್ಚರ ವಹಿಸಬೇಕು. ಏಕೆಂದ್ರೆ ಜುಲೈ ತಿಂಗಳವರೆಗೆ ಒಂದು ಮಗು ಕೊರೊನಾದಿಂದ ಸಾವನ್ನಪ್ಪಿತ್ತು. ಆದ್ರೆ ಕಳೆದೊಂದು ತಿಂಗಳಿ‌ನಲ್ಲಿ 6 ಮಕ್ಕಳು ಕೊರೋನಾಗೆ ಬಲಿಯಾಗಿವೆ. ಅಲ್ಲದೆ 10 ವರ್ಷದೊಳಗಿನ ಮಕ್ಕಳ ಸೋಂಕಿನ ಸಂಖ್ಯೆ ಐದು ಪಟ್ಟು ಹೆಚ್ಚಳವಾಗಿದ್ದು. ಮಾರ್ಚ್ ನಿಂದ ಜುಲೈ ತಿಂಗಳವರೆಗೆ 1382 ಮಕ್ಕಳಿಗೆ ಕೊರೋನಾ ತಗುಲಿದೆ.ಆರೋಗ್ಯ ಇಲಾಖೆಯ ಮಾಹಿತಿಯಂತೆ ಮಕ್ಕಳಿಗೆ ಪೋಷಕರಿಂದ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ.16 ದಿನಗಳಲ್ಲಿ ಇಲ್ಲಿಯವರೆಗೆ ಒಟ್ಟು ಏಳು ಕಂದಮ್ಮಗಳು ಸಾವನಪ್ಪಿದ್ದಾರೆ.

ಇದರಲ್ಲಿ ಐದು ವರುಷದ 551 ಮಕ್ಕಳಿಗೆ ಸೋಂಕು ತಗುಲಿದೆ ಕಳೆದೊಂದು ತಿಂಗಳಿನಲ್ಲಿ ಬರೋಬ್ಬರಿ 6530 ಮಕ್ಕಳಿಗೆ ಸೋಂಕು ದೃಢವಾಗಿ. ಇದರಲ್ಲಿ 5148 ಮಕ್ಕಳು ಸಕ್ರಿಯ ಕೊರೋನಾ ಸೋಂಕಿತರಾಗಿದ್ದು, 1382  ಮಕ್ಕಳು ಗುಣಮುಖರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments