Friday, September 12, 2025
HomeUncategorizedಡಿ.ಕೆ ಶಿವಕುಮಾರ್​ಗೆ ಜಾಮೀನು!

ಡಿ.ಕೆ ಶಿವಕುಮಾರ್​ಗೆ ಜಾಮೀನು!

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್​ಗೆ ಕೊನೆಗೂ ಜಾಮೀನು ಸಿಕ್ಕಿದೆ.
ದೀಪಾವಳಿಗೆ ಮುನ್ನ ಡಿಕೆಶಿಗೆ ರಿಲೀಫ್ ಸಿಕ್ಕಿದ್ದು, 50 ದಿನಗಳ ಡಿಕೆಶಿ ಜೈಲುವಾಸ ಸದ್ಯಕ್ಕೆ ಅಂತ್ಯವಾಗಿದೆ. ದೆಹಲಿ ಹೈಕೋರ್ಟ್ ನ್ಯಾ. ಸುರೇಶ್​ ಕುಮಾರ್ ಕೈಟಾ ಡಿಕೆಶಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಡಿಕೆಶಿ 25 ಲಕ್ಷ ರೂ ಬಾಂಡ್ ನೀಡಬೇಕು. ಪಾಸ್​ಪೋರ್ಟ್ ಸೆರೆಂಡರ್ ಮಾಡುವಂತೆ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆ ನ್ಯಾಯಮೂರ್ತಿಗಳು ಷರತ್ತು ವಿಧಿಸಿ ಜಾಮೀನು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments