Thursday, August 28, 2025
HomeUncategorizedಶ್ರೀಕಿ ಹಿಸ್ಟರಿ ಭಯಾನಕ : 4ನೇ ತರಗತಿಯಲ್ಲೇ ಲಂಡನ್ ಮೂಲದ ರನೇಸ್ಕೇಪ್ ಗೇಮಿಂಗ್ ಸರ್ವರ್ ಹ್ಯಾಕ್..!

ಶ್ರೀಕಿ ಹಿಸ್ಟರಿ ಭಯಾನಕ : 4ನೇ ತರಗತಿಯಲ್ಲೇ ಲಂಡನ್ ಮೂಲದ ರನೇಸ್ಕೇಪ್ ಗೇಮಿಂಗ್ ಸರ್ವರ್ ಹ್ಯಾಕ್..!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಹಗರಣದ ಬಿರುಗಾಳಿಯನ್ನೆ ಎಬ್ಬಿಸಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳು ನಿರಂತರವಾಗಿದೆ. ಈ ಮಧ್ಯೆ ಹ್ಯಾಕರ್ ಶ್ರೀಕಿಯ ಹ್ಯಾಕಿಂಗ್ ಹಿಸ್ಟರಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು ಎಲ್ಲರೂ ಹುಬ್ಬೇರಿಸುವಂತಾಗಿದೆ.

ಹ್ಯಾಂಕರ್ ಶ್ರೀಕಿಯ ಹಿಸ್ಟರಿ ಅತಿ ಭಯಾನಕವಾಗಿದೆ . ತಂದೆ ತಾಯಿ ಶ್ರೀಕಿಗೆ ಇಟ್ಟ ಹೆಸರು ಶ್ರೀಕೃಷ್ಣ, ನಂತರ ಗೆಳೆಯರು ಕರೆದದ್ದು ಶ್ರೀಕಿ ಅಂತಾದ್ರೆ, ಇಂಟರ್​​ನೆಟ್ ಲೋಕದಲ್ಲಿ ಈತ ಪ್ರಸಿದ್ದಿ ಆಗಿದ್ದು AP ಅಂತ 1995ರ ಮಾರ್ಚ್ 30ರಂದು ಬೆಂಗಳೂರಿನ ಜಯನಗರದಲ್ಲಿ ಹುಟ್ಟಿದ ಶ್ರೀಕೃಷ್ಣ 10ನೇ ತರಗತಿವರೆಗೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಾನೆ, ಆಶ್ಚರ್ಯ ಅಂದ್ರೆ ಪ್ರೈಮರಿ ಶಾಲೆಯಲ್ಲಿದ್ದಾಗಲೇ ಹ್ಯಾಕಿಂಗ್ ದಂಧೆಗಿಳಿದಿದ್ದ ಶ್ರೀಕೃಷ್ಣ. 4ನೇ ಕ್ಲಾಸ್​​ಗೆ ಇಂಟರ್​​ನೆಟ್, ಜಾವಾ, ರಿವರ್ಸ್ ಇಂಜಿನಿಯರಿಂಗ್ ಕಲಿತು, 4ನೇ ತರಗತಿಯಲ್ಲೇ ಲಂಡನ್ ಮೂಲದ ರನೇಸ್ಕೇಪ್ ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿದ್ದ. 10ನೇ ತರಗತಿ ವೇಳೆಗಾಗ್ಲೆ ಹ್ಯಾಕಿಂಗ್ ಮಾಡುವ ಕಲಿಕೆಯನ್ನ ಸಂಪೂರ್ಣ ಕಲಿತಿದ್ದ.

 

 

ವಿ.ವಿ.ಪುರಂ ಜೈನ್ ಕಾಲೇಜ್​​ನಲ್ಲಿ PUC ಓದುವಾಗ ಡ್ರಗ್ಸ್​​ ದಾಸನಾಗಿದ್ದ ಶ್ರೀಕೃಷ್ಣ ಎಲ್ಲಾ ರೀತಿಯ ಮದ್ಯ, ಡ್ರಗ್ ಸೇವನೆ ಮಾಡಿ ಜೀವನ ನಡೆಸ್ತಿದ್ದ ಅಲ್ಲದೇ PUC ಓದುವಾಗಲೇ ಬಿಟ್ ಕಾಯಿನ್ ಹ್ಯಾಕ್ ಮಾಡುವುದನ್ನ ಕಲಿತ ನಂತರ ಬಿ.ಎಸ್.​​ಸಿ ಅರ್ಧಕ್ಕೆ ನಿಲ್ಲಿಸಿ ಆಸ್ಟ್ರಾಡಾಮ್​​ಗೆ ತೆರಳಿ ವಿದ್ಯಾಭ್ಯಾಸ ಮಾಡಿ ನಂತರ ಹ್ಯಾಕಿಂಗ್ ಹಾಗೂ ಕ್ಯಾಷ್ ಎಕ್ಸ್‌ ಚೇಂಜ್‌ ದಂಧೆಯಲ್ಲಿ ಭಾಗಿಯಾಗ್ತಾನೆ.

2015ರಲ್ಲಿ ಭಾರತಕ್ಕೆ ಬಂದ ನಂತರ ಹ್ಯಾರಿಸ್ ಪುತ್ರ ಒಮರ್ ನಲಪಾಡ್ ಪರಿಚಯ ಓಮರ್ ಗೆಳೆಯ ಮನೀಷ್ ಎಂಬುವನ ಮೂಲಕ ಓಮರ್ ನಲಪಾಡ್ ಪರಿಚಯವಾಗುತ್ತೆ. ಯುಬಿಸಿಟಿಯ ಫರ್ಜಿ ಕೆಫೆಯಲ್ಲಿ ಗಲಾಟೆ ಆಗುವ ತನಕ ಶ್ರೀಕಿ ನಲಪಾಡ್ ಮತ್ತು ಟೀಂ ಜೊತೆ ಇದ್ದ. ಈ ಗಲಾಟೆ ನಂತ್ರ ನಲಪಾಡ್ 4 ತಿಂಗಳು ಜೈಲಿಗೆ ಹೋದ್ರೆ, ಶ್ರೀಕಿ ತಲೆಮರೆಸಿಕೊಂಡೇ ಜಾಮೀನು ಪಡೆದ. ನಂತರ ನಲಪಾಡ್ ಮತ್ತು ಗ್ಯಾಂಗ್​​ನಿಂದ ದೂರವಾಗಿ ಶ್ರೀಕಿ ಸೇರಿಕೊಂಡಿದ್ದು ಸುನೀಶ್ ಗ್ಯಾಂಗ್ .

2017ರಲ್ಲಿ ಬಿಟ್ ಕ್ಲಬ್ ನೆಟ್ ವರ್ಕ್ ಹ್ಯಾಕ್ ಮಾಡಿ 100 ಬಿಟ್ ಕಾಯಿನ್ ಕಳ್ಳತನ ಮಾಡಿದ ಶ್ರೀಕಿ ತನ್ನದು ಅಂತ ಈವರೆಗೂ ಯಾವುದೇ ಬ್ಯಾಂಕ್ ಅಕೌಂಟ್​​ಗಳು ಹೊಂದಿಲ್ಲ ಹೀಗೆ ಇಲ್ಲಿಯವರೆಗೂ ಹ್ಯಾಂಕ್‌ನಿಂದಲೇ ಸಾವಿರಾರು ಕೋಟಿ ದೋಚಿದ್ದ ಶ್ರೀಕೃಷ್ಟ. ಸದ್ಯ ಹ್ಯಾಕಿಂಗ್​ಗೆ ಸಂಭಂದಿಸಿದಂತೆ ಸರಿಯಾದ ಸಾಕ್ಷಿ ಪುರಾವೆಗಳಿಲ್ಲದೆ ಇರೋದ್ರಿಂದ ಶ್ರೀಕಿ ಇಷ್ಷೆಲ್ಲಾ ಮಾಡಿದ್ರು ಪೊಲೀಸರ ವಿಚಾರಣೆ ಬಳಿಕ ಹೊರಗೆ ಬಂದು ಆರಾಮಾಗಿದ್ದಾನೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments