Thursday, August 21, 2025
Google search engine
HomeUncategorizedಸಿದ್ದರಾಮಯ್ಯರ ಹೆಸರಲ್ಲೇ ರಾಮ ಇದ್ದಾನೆ, ನಮಗೂ ರಾಮನ ಮೇಲೆ ಭಕ್ತಿ ಇದೆ; ಲಕ್ಷ್ಮೀ ಹೆಬ್ಬಾಳ್ಕರ್​

ಸಿದ್ದರಾಮಯ್ಯರ ಹೆಸರಲ್ಲೇ ರಾಮ ಇದ್ದಾನೆ, ನಮಗೂ ರಾಮನ ಮೇಲೆ ಭಕ್ತಿ ಇದೆ; ಲಕ್ಷ್ಮೀ ಹೆಬ್ಬಾಳ್ಕರ್​

ಬೆಳಗಾವಿ : ಹಿಂದೂ ಸಂಘಟನೆಗಳನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಶಾಸಕ ಸುನೀಲ್ ಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ ‘ನಾನು ಕೂಡ ಹಿಂದೂನೆ, ಸಿದ್ದರಾಮಯ್ಯರ ಹೆಸರಲ್ಲೇ ರಾಮ ಇದ್ದಾನೆ. ಆದರೆ ನಾವು ಸಾಮಾಜಿಕ ಬದ್ದತೆಯಿಂದ ಎಲ್ಲರನ್ನೂ ನೋಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು. ಇದನ್ನೂ ಓದಿ :ಈ ಸಲ ಕಪ್​ ನಮ್ದೇ; ಹರಕೆ ತೀರಿಸಿದ ಬಾಲಕಿ, ವಿಜಯ ದುರ್ಗ ಹೋಮ ಮಾಡಿಸಿದ ಶಾಸಕ

ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳು ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದ್ದು. ಇವುಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾಂಗ್ರೆಸ್​ ವಿರುದ್ದ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದ್ದು. ಕಾಂಗ್ರೆಸ್​ ತುಷ್ಟಿಕರಣ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ನಡುವೆ ಶಾಸಕ ಸುನೀಲ್​ ಕುಮಾರ್​ ಕಾಂಗ್ರೆಸ್​ ಸರ್ಕಾರ ಹಿಂದೂಗಳನ್ನ ಟಾರ್ಗೆಟ್​ ಮಾಡಿಕೊಂಡಿದೆ ಎಂದು ಆರೋಪಿಸಿದ್ದು. ಇದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ :ರಾಮನಗರಕ್ಕೆ ನೀರು ಬೇಕಿಲ್ಲ, ಕುಣಿಗಲ್​ಗೆ ಅನ್ಯಾಯ ಆಗಿದೆ, ಅದನ್ನ ಸರಿಪಡಿಸಬೇಕು ; ಡಿ.ಕೆ ಶಿವಕುಮಾರ್​

ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವೆ ‘ಸುನೀಲ್ ಕುಮಾರ್ ಒಬ್ಬ ಮಾಜಿ ಮಂತ್ರಿ, ಅವರಿಗೂ ಜವಾಬ್ದಾರಿ ಇದೆ. ನಾವು ಕೂಡ ಹಿಂದೂನೆ, ಸಿದ್ದರಾಮಯ್ಯರ ಹೆಸರಲ್ಲೇ ರಾಮ ಇದ್ದಾನೆ. ನಾವೆಲ್ಲಾ ಮಹತ್ಮಾ ಗಾಂಧಿ ಪಕ್ಷದವರು‌, ರಾಮನ ಮೇಲೆ ನಮಗೂ ಭಕ್ತಿ ಇದೆ. ಆದರೆ ಹಿಂದೂ ಮುಸ್ಲಿಂ ಅಂತ ಭೂತ ಕನ್ನಡಿಯಿಂದ ನೋಡುವುದು ಬಿಡಬೇಕು. ಸಾಮಾಜಿಕ ಬದ್ಧತೆಯಿಂದ ಎಲ್ಲವನ್ನೂ ನೋಡಬೇಕು ಎಂದು ಹೇಳಿದರು. ಇದನ್ನೂ ಓದಿ :ಧೂಮಪಾನಕ್ಕೆ ಪ್ರತ್ಯೇಕ ಸ್ಥಳವಿಲ್ಲದ ಆರೋಪ; ವಿರಾಟ್​ ಮಾಲಿಕತ್ವದ ಪಬ್​ ವಿರುದ್ದ ಕೇಸ್ ದಾಖಲು

ಮುಂದುವರಿದು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ” ಬಿಜೆಪಿಯವರು ಹಿಂದೂ ಮುಸ್ಲಿರನ್ನು ವಿಂಘಡಿಸಿ ರಾಜಕೀಯ ‌ಮಾಡಿದ್ದಾರೆ. ಕಾನೂನು ಯಾರೇ ಕೈಗೆ ತೆಗೆದುಕೊಂಡ್ರು, ಸುವ್ಯವಸ್ಥೆ ಕಾಪಡಲು ನಾವು ಬದ್ಧರಿದ್ದೇವೆ
ನಾವು ಯಾರನ್ನೂ ಟಾರ್ಗೆಟ್ ಮಾಡುವ ಅನಿವಾರ್ಯತೆ ಇಲ್ಲ. ಬಿಜೆಪಿಗೆ ಮಾತ್ರ ಟಾರ್ಗೆಟ್ ಮಾಡುವ ಅನಿವಾರ್ಯತೆ ಇದೆ. ನಮ್ಮ ಮೊದಲ ಆದ್ಯತೆ ಕಾನೂನು ಸುವ್ಯವಸ್ಥೆ ಇರಬೇಕು ಎಂಬುದು. ಉಡುಪಿಯಲ್ಲಿ ಕಾನೂನು ಸುವ್ಯವಸ್ಥೆ ಕಂಟ್ರೋಲ್ ‌ಮಾಡಿದ್ದೇವೆ. ಅದೇ ರೀತಿ ದಕ್ಷಿಣ ಕನ್ನಡದಲ್ಲಿಯೂ ಕಾನೂನು ಸುವ್ಯವಸ್ಥೆ ಸರಿ ಮಾಡಲಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments