Thursday, August 21, 2025
Google search engine
HomeASTROLOGYಓಲೈಕೆ ಮಾಡಲು ಅಮಾಯಕ ಹಿಂದೂ ಕಾರ್ಯಕರ್ತರನ್ನ ಅರೆಸ್ಟ್​ ಮಾಡಿದ್ದಾರೆ; ಬಿ.ವೈ ವಿಜಯೇಂದ್ರ

ಓಲೈಕೆ ಮಾಡಲು ಅಮಾಯಕ ಹಿಂದೂ ಕಾರ್ಯಕರ್ತರನ್ನ ಅರೆಸ್ಟ್​ ಮಾಡಿದ್ದಾರೆ; ಬಿ.ವೈ ವಿಜಯೇಂದ್ರ

ಕೊಪ್ಪಳ: ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ವಿರುದ್ದ ಸರ್ಕಾರ ತೆಗೆದುಕೊಂಡಿರುವ ಕ್ರಮದ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು. ಓಲೈಕೆ ರಾಜಕಾರಣ ಮಾಡಲು ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:ಏಕದಿನ ಕ್ರಿಕೆಟ್​ಗೆ ಮ್ಯಾಕ್ಸ್​ವೆಲ್​ ದಿಢೀರ್​ ನಿವೃತ್ತಿ

ಕೊಪ್ಪಳದ ಕುಷ್ಟಗಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ “ಕರಾವಳಿ ಭಾಗದಲ್ಲಿ ಹಿಂದೂಗಳ ಹತ್ಯೆಯಾಗ್ತಿವೆ. ಸುಹಾಸ್ ಶೆಟ್ಟಿ ಹತ್ಯೆಯಾಗಿದೆ, ಬಳಿಕ ಮುಸ್ಲಿಂ ಯುವಕನ ಹತ್ಯೆಯಾಗಿದೆ. ರಾಜ್ಯ ಸರ್ಕಾರ ಪರಸ್ಥಿತಿ ಸರಿ ಮಾಡದೆ, ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಿದೆ. ಅಮಾಯಕ ಹಿಂದೂ ಕಾರ್ಯಕರ್ತರನ್ನ ಅರೆಸ್ಟ್ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕರಾವಳಿ ಭಾಗದಲ್ಲಿ ಪೊಲೀಸರ ಮೂಲಕ ಪ್ರಚೋದನೆ ಕೊಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ:ಸಿದ್ದರಾಮಯ್ಯರ ಹೆಸರಲ್ಲೇ ರಾಮ ಇದ್ದಾನೆ, ನಮಗೂ ರಾಮನ ಮೇಲೆ ಭಕ್ತಿ ಇದೆ; ಲಕ್ಷ್ಮೀ ಹೆಬ್ಬಾಳ್ಕರ್​

ಮುಂದುವರಿದು ಮಾತನಾಡಿದ ಬಿವೈವಿ  ‘ರಾಜ್ಯ ಸರ್ಕಾರ ಕೆಲವರನ್ನು ಓಲೈಸಲು ಬೆದರಿಕೆ ಹಾಕುತ್ತಿದೆ, ಇದು ಸರಿಯಿಲ್ಲ. ಕರಾವಳಿ ಭಾಗದಲ್ಲಿ ಶಾಂತಿ ಕಾಪಾಡಬೇಕು. ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡೋದು ಸರಿ ಅಲ್ಲ. ಹೀಗೆ ಮಾಡಿದರೆ ಅಲ್ಲಿನ ವಾತಾವರಣ ಕೆಡುತ್ತೆ ಎಂದು ವಿಜಯೇಂದ್ರ ಹೇಳಿದರು. ಇದನ್ನೂ ಓದಿ:ಈ ಸಲ ಕಪ್​ ನಮ್ದೇ; ಹರಕೆ ತೀರಿಸಿದ ಬಾಲಕಿ, ವಿಜಯ ದುರ್ಗ ಹೋಮ ಮಾಡಿಸಿದ ಶಾಸಕ

ಇನ್ನು ಗ್ಯಾರಂಟಿಗಳಿಗೆ ಹಣ ಬಿಡುಗಡೆ ಮಾಡದಿರುವ ಕುರಿತು ಮಾತನಾಡಿದ ವಿಜಯೇಂದ್ರ ” ಕಾಂಗ್ರೆಸ್​ ಸರ್ಕಾರದ ಗ್ರಹಚಾರ ಸರಿ ಇಲ್ಲ. ಗ್ಯಾರಂಟಿ ಕೊಡ್ತೀವಿ ಅಂತ ಅಧಿಕಾರಕ್ಕೆ ಬಂದು, ಈಗ ಒಂದೊಂದೆ ಕಿತ್ಕೋತಿದ್ದಾರೆ. ಸಂಬಳ ಕೊಡುತ್ತಾ ಕಾಂಗ್ರೆಸ್ ಕಾರ್ಯಕರ್ತರನ್ನ ಸಾಕುತ್ತಿದ್ದಾರೆ. ಗ್ಯಾರಂಟಿ, ಗ್ಯಾರಂಟಿ ಅಂತ ಹೇಳ್ಕೊಂಡು ಸರ್ಕಾರ ಯಾವ ಕ್ಷೇತ್ರದಲ್ಲೂ ಕೆಲ್ಸ ಮಾಡ್ತೀಲ್ಲ. ಇದೊಂದು ಬಂಡ ಸರ್ಕಾರ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments