Thursday, August 21, 2025
Google search engine
HomeASTROLOGYನಿಶ್ಚಿತಾರ್ಥ ಮಾಡಿಕೊಳ್ಳಲು ಚಿನ್ನದ ಸರ ಕದ್ದ ಲಾಡ್ಜ್​ ಮ್ಯಾನೇಜರ್​ ಬರ್ಬರ ಕೊ*ಲೆ

ನಿಶ್ಚಿತಾರ್ಥ ಮಾಡಿಕೊಳ್ಳಲು ಚಿನ್ನದ ಸರ ಕದ್ದ ಲಾಡ್ಜ್​ ಮ್ಯಾನೇಜರ್​ ಬರ್ಬರ ಕೊ*ಲೆ

ಮೈಸೂರು: ಜೂಜು ಆಡಲು ಲಾಡ್ಜ್​ಗೆ ಬಂದವರ ಚಿನ್ನದ ಸರ ಕದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಲಾಡ್ಜ್​ ಮ್ಯಾನೇಜರ್​ನನ್ನು ಕೊಲೆ ಮಾಡಿ, ಸುಟ್ಟು ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು. ಮೈಸೂರು ಜಿಲ್ಲಾ ಪೊಲೀಸರು ಪ್ರಕರಣವನ್ನ ಭೇಧಿಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಕೊಲೆಯಾದ ಯುವಕನನ್ನು ಚಾಮರಾಜನಗರದ ಬ್ಯಾಡರಪುರದ ಮೋಹನ್​ ಕುಮಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ :IPLನಿಂದ ರಾಷ್ಟ್ರೀಯತೆ ಬರಲ್ಲ; RCBಗೆ ಶುಭ ಕೋರಲು ಸಿ,ಟಿ ರವಿ ನಕಾರಾ

ಕೊಲೆಯಾದ ಮೋಹನ್​ ಕುಮಾರ್ ​​ಬೋಗಾದಿ ಲಾಡ್ಜ್​ವೊಂದರಲ್ಲಿ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈ ಲಾಡ್ಜ್​ಗೆ ಆರೋಪಿ ಶ್ರೀನಿವಾಸ್​ ಇಸ್ಪೀಟ್​ ಆಡಲು ಬರುತ್ತಿದ್ದ. ಆದರೆ ಇತ್ತೀಚೆಗೆ ಆರೋಪಿ ಶ್ರೀನಿವಾಸ್​ ಜೂಜಾಡಲು ಎಂದು ಪತ್ನಿಯ 60 ಗ್ರಾಂ ಚಿನ್ನದ ಸರವನ್ನು ಮನೆಯಿಂದ ತಂದಿದ್ದನು. ಆದರೆ ಹುಣ್ಣಿಮೆ ಇದ್ದ ಕಾರಣ ಮಾರವಾಡಿ ಅಂಗಡಿಯವನು ಚಿನ್ನದ ಸರ ಅಡವಿಟ್ಟುಕೊಳ್ಳಲು ನಿರಾಕರಿಸಿದ್ದನು. ಇದನ್ನೂ ಓದಿ :ಭಾರೀ ಮಳೆಗೆ ಸೇನಾ ಶಿಬಿರದ ಮೇಲೆ ಗುಡ್ಡ ಕುಸಿತ; ಮೂವರು ಸಾವು, 6 ಮಂದಿ ಕಣ್ಮರೆ

ಚಿನ್ನದ ಸರ ಅಡವಿಡಲು ಸಾಧ್ಯವಾಗದೆ ಶ್ರೀನಿವಾಸ್​ ಲಾಡ್ಜ್​ ರೂಮಿನಿ ಹಾಸಿಗೆ ದಿಂಬಿನ ಕೆಳಗೆ ಚಿನ್ನದ ಸರವನ್ನು ಇಟ್ಟಿದ್ದ. ಇದನ್ನ ನೋಡಿಕೊಂಡಿದ್ದ ಮೋಹನ್​ ಕುಮಾರ್​ ಚಿನ್ನದ ಸರ ಕಳವು ಮಾಡಿದ್ದ. ಬಳಿಕ ಸ್ವಗ್ರಾಮ ಬ್ಯಾಡರಪುರಕ್ಕೆ ಹೋಗಿ ಕದ್ದ ಚಿನ್ನದ ಸರ ಗಿರವಿ ಇಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ಬಗ್ಗೆ ಸರಸ್ವತಿ ಪುರಂ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದನ್ನೂ ಓದಿ :ಮಂಗಳೂರು ಕ್ಲಾಕ್​ ಟವರ್ ಮುಂಭಾಗ ಪೊಲೀಸರಿಂದ ಲಾಠಿ ಡ್ರಿಲ್​; ಗಲಭೆಕೋರರಿಗೆ ನೇರ ಎಚ್ಚರಿಕೆ

ಆದರೆ ಏಪ್ರೀಲ್​ 18ರಂದು ಆರೋಪಿ ಶ್ರೀನಿವಾಸ್ ತನ್ನ ಗೆಳೆಯರ ಗ್ಯಾಂಗ್ ಕಟ್ಟಿಕೊಂಡು ಮೋಹನ್ ಕುಮಾರ್ ನನ್ನು ಮನೆಯಿಂದ ಕರೆಸಿ ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿದ್ದ. ಬಳಿಕ ಯಾರಿಗೂ ತಿಳಿಯದಂತೆ ಮೈಸೂರು ತಾಲೂಕಿನ ಗುಮಚನಹಳ್ಳಿ ಬಳಿ ಹಾಡಹಗಲೇ ಶವ ಸುಟ್ಟುಹಾಕಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ಆರೋಪಿಗಳಾಧ ಪ್ರಜ್ವಲ್​, ಚಂದು, ಕಬೀರ್​ ಕಾಳಯ್ಯ, ದರ್ಶನ್​​ರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments