Monday, August 25, 2025
Google search engine
HomeUncategorizedಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ: ದೇಹವನ್ನ 6 ತುಂಡುಗಳಾಗಿ ಕತ್ತರಿಸಿ ಎಸೆದ ಪತ್ನಿ

ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ: ದೇಹವನ್ನ 6 ತುಂಡುಗಳಾಗಿ ಕತ್ತರಿಸಿ ಎಸೆದ ಪತ್ನಿ

ಲಕ್ನೋ: ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದು. ಕೊಲೆ ಮಾಡಿದ ನಂತರ ಪತಿಯ ದೇಹವನ್ನ 6 ತುಂಡುಗಳಾಗಿ ತುಂಡರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾಳೆ. ಘಟನೆ ಸಂಬಂಧ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ದೇವೇಂದ್ರ ಕುಮಾರ್​ ಎಂದು ಗುರುತಿಸಿದ್ದು. ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

ಇದನ್ನೂ ಓದಿ :ಸ್ವಂತ ತಂದೆಯನ್ನೇ ಕೊಲೆ ಮಾಡಿ, ಸಹಜ ಸಾ*ವು ಎಂದು ನಾಟಕವಾಡಿದ ಕಟುಕ ಮಗ

ದೆಹಲಿಯ ಶ್ರದ್ದಾ ವಾಕರ್​ ಕೊಲೆ ಪ್ರಕರಣವನ್ನ ನೆನಪಿಸುವಂತಹ ಮತ್ತೊಂದು ಹತ್ಯೆ ಉತ್ತರಪ್ರದೇಶದ ಬಹದ್ದೂರ್​ ಪುರದಲ್ಲಿ ನಡೆದಿದೆ. ಆರೋಪಿ ಮಹಿಳೆ ಮಾಯಾದೇವಿ, ಪ್ರಿಯಕರ ಅನಿಲ್‌ ಯಾದವ್‌ ಜೊತೆ ಸೇರಿ ತನ್ನ ಮಾಜಿ ಸೈನಿಕ ಪತಿ ದೇವೇಂದ್ರ ಕುಮಾರ್‌ನನ್ನ ಹತ್ಯೆ ಮಾಡಿದ್ದಾಳೆ. ಈ ಪ್ರಕರಣದಲ್ಲಿ ಇವರಿಬ್ಬರಿಗೆ ಸಹಾಯ ಮಾಡಿದ್ದಕ್ಕಾಗಿ ಸತೀಶ್ ಯಾದವ್ ಮತ್ತು ಮಿಥಿಲೇಶ್ ಇಬ್ಬರು ಸಹಚರರನ್ನೂ ಬಂಧಿಸಲಾಗಿದೆ.

ಏನಿದು ಘಟನೆ..!

ಪೊಲೀಸರ ಮಾಹಿತಿ ಪ್ರಕಾರ ಕಳೆದ ಮೇ.10 ರಂದು ಉತ್ತರಪ್ರದೇಶದ ಖರೀದ್​ ಗ್ರಾಮದಲ್ಲಿ ಕತ್ತರಿಸಿದ ಶವದ ಕೈ-ಕಾಲುಗಳು ಪತ್ತೆಯಾಗಿದ್ದವು. ಕೈ-ಕಾಲುಗಳು ಪತ್ತೆಯಾದ ಎರಡು ದಿನದ ಅಂತರದಲ್ಲೇ ಹತ್ತಿರದ ಬಾವಿಯೊಂದರಲ್ಲಿ ತಲೆ, ಕೈ-ಕಾಲುಗಳಿಲ್ಲದ ದೇಹವೊಂದು ಪತ್ತೆಯಾಗಿತ್ತು. ಪೊಲೀಸರು ದೇಹದ ಬಿಡಿ ಭಾಗಗಳನ್ನು ವಶಪಡಿಸಿಕೊಂಡು ತನಿಖೆಯನ್ನ ಆರಂಭಿಸಿದ್ದರು. ಇದನ್ನೂ ಓದಿ :ವಿದೇಶಾಂಗ ಸಚಿವ ಜೈ ಶಂಕರ್​ಗೆ ನೀಡಿದ್ದ ಭದ್ರತೆಯಲ್ಲಿ ದಿಢೀರ್​ ಹೆಚ್ಚಳ..!

ಆದರೆ ಅದೇ ಮಾರ್ಚ್​ 10ರಂದು ಮಹಿಳೆ ಮಾಯಾದೇವಿ ಪೊಲೀಸ್​ ಠಾಣೆಯಲ್ಲಿ ಪತಿ ನಾಪತ್ತೆಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಳು. ಪತಿ ನನ್ನ ಪತಿ ಮಗಳನ್ನು ಕರೆದುಕೊಂಡು ಬರಲು ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರು, ವಾಪಸ್‌ ಮನೆಗೆ ಬರಲಿಲ್ಲ. ಅವರ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ ಅಂತ ಕಥೆ ಕಟ್ಟಿದ್ದಳು. ಆದರೆ ಆಕೆಯ ಬಗ್ಗೆ ಅನುಮಾನಗೊಂಡ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆಯ ನಾಟಕ ಬಯಲಾಗಿದ್ದು. ಪತಿಯನ್ನ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಇನ್ನು ಸಹ ಕೊಲೆಯಾದ ದೇವೇಂದ್ರ ಕುಮಾರ್ ಅವರ ರುಂಡ ಪತ್ತೆಯಾಗಬೇಕಿದ್ದು. ಪತಿಯ ತಲೆಯನ್ನ ಘಾಘರ್‌ ನದಿಯಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments