Tuesday, September 2, 2025
HomeUncategorizedಜನರಿಗೆ ಮುಖ ತೋರಿಸಲು ಬಿಜೆಪಿಗೆ ವಿಚಾರಗಳೇ ಇಲ್ಲ : ಸಿದ್ದರಾಮಯ್ಯ

ಜನರಿಗೆ ಮುಖ ತೋರಿಸಲು ಬಿಜೆಪಿಗೆ ವಿಚಾರಗಳೇ ಇಲ್ಲ : ಸಿದ್ದರಾಮಯ್ಯ

ಬೆಂಗಳೂರು : ಜನರ ಬಳಿಗೆ ಹೋಗಿ ಮುಖ ತೋರಿಸಲು ಬಿಜೆಪಿಗೆ ಅಭಿವೃದ್ಧಿ ವಿಚಾರಗಳೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಗೆ ಜನರ ಬಳಿಗೆ ಹೋಗಿ ಮತ ಕೇಳಲು ಅವರಿಗೆ ಮುಖ ಇಲ್ಲ ಎಂದು ಛೇಡಿಸಿದರು.

ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಸತ್ಯವನ್ನು ಹುದುಗಿಸಿಡಲು ಯತ್ನಿಸುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯನ್ನು ಮರೆತು ಈಗ ಚುನಾವಣೆ ವೇಳೆ ಅಯೋಧ್ಯೆ ವಿಚಾರ ಒಂದನ್ನೇ ಮುಂದಿಟ್ಟುಕೊಂಡು ಹೊರಟಿದ್ದಾರೆ. ಈ ಸತ್ಯ ನಾಡಿನ‌ ಜನತೆಗೆ ಮನವರಿಕೆಯಾಗಿದೆ ಎಂದು ಹೇಳಿದರು.

ಸತ್ಯದ ಮೂಲಕ ಸ್ಪಷ್ಟ ಉತ್ತರ ಕೊಡಬೇಕು

ಸದನದ ಕಡತಕ್ಕೆ ಹೋಗಲಿ ಎಂದು ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಾರೆ‌. ಇದಕ್ಕೆ ನಮ್ಮ ಪಕ್ಷದ ಶಾಸಕರು ಸತ್ಯದ ಮೂಲಕ, ಅಧಿಕೃತ ಅಂಕಿ ಅಂಶಗಳ ಮೂಲಕ ಸ್ಪಷ್ಟ ಉತ್ತರ ಕೊಡಬೇಕು. ಶಾಸಕರು ಸದನದಲ್ಲಿ ಪರಿಣಾಮಕಾರಿಯಾಗಿ, ಕಡ್ಡಾಯವಾಗಿ ಭಾಗವಹಿಸುವ ಮೂಲಕ ಸದನದ ಸಮಯವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments