Saturday, August 23, 2025
Google search engine
HomeUncategorizedಡಿಲೀಟ್ ಮಾಡಿ.. : ಸಚಿವರ ಖಾತೆ ಹಂಚಿಕೆ ಪಟ್ಟಿ ನಕಲಿ

ಡಿಲೀಟ್ ಮಾಡಿ.. : ಸಚಿವರ ಖಾತೆ ಹಂಚಿಕೆ ಪಟ್ಟಿ ನಕಲಿ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸಂಪುಟ ಸಚಿವರಿಗೆ ಖಾತೆ ಹಂಚಿಕೆಯಾಗಿರುವ ಪಟ್ಟಿಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದು ನಕಲಿ ಪಟ್ಟಿ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಲಿದೆ ಎಂದು ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಖಾತೆ ಹಂಚಿಕೆಯಾಗಿರುವ ಬಗ್ಗೆ ನಕಲಿ ಪಟ್ಟಿ ವೈರಲ್ ಆಗಿದೆ. ಇನ್ನೂ ಸಹ ಖಾತೆ ಹಂಚಿಕೆಯಾಗಿರುವುದಿಲ್ಲ, ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ. ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದೆ.

ಇಂದು ಅಥವಾ ನಾಳೆ ಖಾತೆ ಹಂಚಿಕೆ  

ಇನ್ನೂ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇವತ್ತು ಅಥವಾ ನಾಳೆ ಖಾತೆ ಹಂಚಿಕೆ ಮಾಡ್ತೀವಿ. ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ್ದೇವೆ. ಮುಖ್ಯಮಂತ್ರಿ ಬಿಟ್ಟು 33 ಮಂದಿ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮುಂದಿನ ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿ ಈಡೇರಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ನಕಲಿ ಪಟ್ಟಿಯಲ್ಲಿ ಯಾರಿಗೆ ಯಾವ ಖಾತೆ?

ಡಿ.ಕೆ ಶಿವಕುಮಾರ್ : ಜಲ ಸಂಪನ್ಮೂಲ & ಬೆಂಗಳೂರು ಅಭಿವೃದ್ಧಿ ಖಾತೆ

ಡಾ.ಜಿ ಪರಮೇಶ್ವರ್ : ಗೃಹ ಖಾತೆ

ಹೆಚ್​.ಕೆ.ಪಾಟೀಲ್ : ಕಾನೂನು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ

ಕೆ.ಎಚ್​.ಮುನಿಯಪ್ಪ : ಆಹಾರ & ನಾಗರೀಕ ಸರಬರಾಜು

ಕೆ.ಜೆ.ಜಾರ್ಜ್​ : ಇಂಧನ

ಎಂ.ಬಿ.ಪಾಟೀಲ್​ : ಬೃಹತ್​ ಕೈಗಾರಿಕೆ & ಐಟಿ-ಬಿಟಿ

ರಾಮಲಿಂಗಾರೆಡ್ಡಿ : ಸಾರಿಗೆ

ಸತೀಶ್​ ಜಾರಕಿಹೊಳಿ : ಲೋಕೋಪಯೋಗಿ

ಪ್ರಿಯಾಂಕ್​ ಖರ್ಗೆ : ಗ್ರಾಮೀಣಾಭಿವೃದ್ಧಿ & ಪಂಚಾಯತ್​ ರಾಜ್​

ಜಮೀರ್​ ಅಹ್ಮದ್​ : ವಸತಿ & ವಕ್ಫ್​

ಕೃಷ್ಣಬೈರೇಗೌಡ  : ಕಂದಾಯ

ದಿನೇಶ್​ ಗುಂಡೂರಾವ್ : ಆರೋಗ್ಯ & ಕುಟುಂಬ ಕಲ್ಯಾಣ

ಚಲುವರಾಯಸ್ವಾಮಿ : ಕೃಷಿ

ಕೆ.ವೆಂಕಟೇಶ್​ : ಪಶು ಸಂಗೋಪನೆ & ರೇಷ್ಮೆ

ಡಾ.ಹೆಚ್​.ಸಿ.ಮಹದೇವಪ್ಪ : ಸಮಾಜ ಕಲ್ಯಾಣ

ಈಶ್ವರ್​ ಖಂಡ್ರೆ : ಅರಣ್ಯ & ಪರಿಸರ

ಕೆ.ಎನ್​.ರಾಜಣ್ಣ : ಸಹಕಾರ

ಶರಣಬಸಪ್ಪ ದರ್ಶನಾಪುರ್​ : ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ

ಶಿವಾನಂದ್​ ಪಾಟೀಲ್​ : ಜವಳಿ & ಸಕ್ಕರೆ

ಆರ್.ಬಿ.ತಿಮ್ಮಾಪುರ್​ : ಅಬಕಾರಿ & ಮುಜರಾಯಿ

ಎಸ್​.ಎಸ್​.ಮಲ್ಲಿಕಾರ್ಜುನ್​ : ಗಣಿ & ಭೂವಿಜ್ಞಾನ, ತೋಟಗಾರಿಕೆ

ಶಿವರಾಜ್​ ತಂಗಡಗಿ : ಹಿಂದುಳಿದ ವರ್ಗ, ಎಸ್​.ಟಿ ಕಲ್ಯಾಣ

ಡಾ.ಶರಣ ಪ್ರಕಾಶ್ ಪಾಟೀಲ್​ : ಉನ್ನತ ಶಿಕ್ಷಣ

ಮಂಕಾಳು ವೈದ್ಯ : ಮೀನುಗಾರಿಕೆ & ಬಂದರು, ಒಳನಾಡು ಜಲಸಾರಿಗೆ

ಲಕ್ಷ್ಮಿ ಹೆಬ್ಬಾಳ್ಕರ್​ : ಮಹಿಳಾ & ಮಕ್ಕಳ ಕಲ್ಯಾಣ

ರಹೀಂಖಾನ್​ : ಪೌರಾಡಳಿತ & ಹಜ್​

ಡಿ.ಸುಧಾಕರ್​ : ಮೂಲಸೌಕರ್ಯ

ಸಂತೋಷ್​ ಲಾಡ್​ : ಕಾರ್ಮಿಕ & ಕೌಶಲ್ಯ ಅಭಿವೃದ್ಧಿ

ಬೋಸರಾಜು : ಪ್ರವಾಸೋದ್ಯಮ, ವಿಜ್ಞಾನ & ತಂತ್ರಜ್ಞಾನ

ಬೈರತಿ ಸುರೇಶ್​ : ನಗರಾಭಿವೃದ್ಧಿ & ನಗರ ಯೋಜನೆ

ಮಧು ಬಂಗಾರಪ್ಪ : ಶಿಕ್ಷಣ ಸಚಿವ

ಡಾ.ಎಂ.ಸಿ.ಸುಧಾಕರ್​ : ವೈದ್ಯಕೀಯ ಶಿಕ್ಷಣ

ಬಿ.ನಾಗೇಂದ್ರ : ಕನ್ನಡ & ಸಂಸ್ಕೃತಿ, ಯುವಜನ ಸೇವೆ, ಕ್ರೀಡೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments