Sunday, August 24, 2025
Google search engine
HomeUncategorizedಶಿವಾನಂದ ಪಾಟೀಲ್​ಗೆ ಡಿಸಿಎಂ ಸ್ಥಾನ ನೀಡಬೇಕು : ಸಂಗನಬಸವ ಸ್ವಾಮಿ ಒತ್ತಾಯ

ಶಿವಾನಂದ ಪಾಟೀಲ್​ಗೆ ಡಿಸಿಎಂ ಸ್ಥಾನ ನೀಡಬೇಕು : ಸಂಗನಬಸವ ಸ್ವಾಮಿ ಒತ್ತಾಯ

ಬೆಂಗಳೂರು : ಶಾಸಕ ಶಿವಾನಂದ ಎಸ್.ಪಾಟೀಲ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮನಗೂಳಿ ಮಠದ ಸಂಗನಬಸವ ಸ್ವಾಮಿಜಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಮದಿಗೆ ಮಾತನಾಡಿರುವ ಶ್ರೀಗಳು, ಶಿವಾನಂದ ಎಸ್.ಪಾಟೀಲ್ ಅವರು ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ಹಿರಿಯ ರಾಜಕಾರಣಿ. 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಲಿಂಗಾಯತ ಪಂಚಮಸಾಲಿ ಸಮುದಾಯದ ಹಿರಿಯ ರಾಜಕೀಯ ಮುತ್ಸದಿ ಕೂಡ ಆಗಿದ್ದಾರೆ. ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಹೇಳಿದ್ದಾರೆ.

ಕಳೆದ ಮೂರು ದಶಕಗಳಿಂದ ಶಾಸಕರಾಗಿ, ಸಚಿವರಾಗಿ ಬಸವನಬಾಗೇವಾಡಿ ಮತಕ್ಷೇತ್ರ ಅಷ್ಟೇ ಅಲ್ಲದೆ ವಿಜಯಪುರ ಜಿಲ್ಲೆಯಲ್ಲಿಯೇ ಚಾಣಕ್ಯ ರಾಜಕಾರಣಿ ಎಂದೇ ಖ್ಯಾತಿ ಹೊಂದಿರುವ ಶಿವಾನಂದ ಪಾಟೀಲ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು. ಜೊತೆಗೆ ಒಳ್ಳೆಯ ಖಾತೆ ನೀಡಬೇಕು. ಅವರು ಪಕ್ಷಾತೀತ ನಾಯಕರು ಎಲ್ಲ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕರು ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದಿದ್ದಾರೆ.

ಇದನ್ನೂ ಓದಿ : ನಾನು ಡಿಸಿಎಂ ಸ್ಥಾನ ಕೇಳುವುದು ಏನಿದೆ? ನನಗೆ ಕೊಡಲೇಬೇಕು : ಪರಮೇಶ್ವರ್

ಮಲತಾಯಿ ಧೋರಣೆ ಸಲ್ಲದು

ಪ್ರತಿಯೊಂದು ಸರ್ಕಾರವೂ ಉತ್ತರ ಕರ್ನಾಟಕದವರಿಗೆ ಮಲತಾಯಿ ಧೋರಣೆ ತೋರುತ್ತದೆ. ಉತ್ತರ ಕರ್ನಾಟಕ ನೀರಾವರಿ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿದೆ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿವೆ ಆ ಎಲ್ಲ ನೀರಾವರಿ ಕಾರ್ಯಗಳನ್ನು ಪೂರ್ಣಗೊಳಿಸಬೇಕಾದರೆ ಅದು ಶಿವಾನಂದ ಪಾಟೀಲ್ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ರಾಜ್ಯದಲ್ಲಿಯೇ ನಂಬರ್ 1 ಕ್ಷೇತ್ರ

ರಾಜ್ಯದಲ್ಲೇ ನಂಜುಂಡಪ್ಪ ವರದಿಯ ಪ್ರಕಾರ ಬಸವ ಜನ್ಮ ಸ್ಥಳ ಬಸವನ ಬಾಗೇವಾಡಿ ಅತಿ ಹಿಂದುಳಿದ ಮತಕ್ಷೇತ್ರವೆಂಬ ಅಪಖ್ಯಾತಿಗೆ ಗುರಿಯಾಗಿತ್ತು. ರಾಜ್ಯದಲ್ಲಿಯೇ ನಂಬರ್ 1 ಮತಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಮತಕ್ಷೇತ್ರಕ್ಕೆ ತಂದು ಇಂದು ಬಸವನಬಾಗೇವಾಡಿ ಮತಕ್ಷೇತ್ರ ಜಿಲ್ಲೆಯಲ್ಲಿ ಅಭಿವೃದ್ಧಿ ಹೊಂದಿರುವ ಮತಕ್ಷೇತ್ರವಾಗಿದೆ ಎಂದು ತಿಳಿಸಿದ್ದಾರೆ.

ಶಾಸಕ ಶಿವಾನಂದ ಪಾಟೀಲ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರ ಜೊತೆಗೆ ನೀರಾವರಿ ಖಾತೆಯ ಜೊತೆಗೆ ಉತ್ತಮವಾದ ಹುದ್ದೆಯನ್ನು ಕಲ್ಪಿಸಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಒತ್ತಾಯಿಸುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments